ಡಾ| ಬಿ. ಬಿ. ಹೆಗ್ಡೆ ಪ್ರಥಮ ದರ್ಜೆ ಕಾಲೇಜು,ಕುಂದಾಪುರ-ಬ್ಯಾಂಕ್ ಬ್ಯಾಟಲ್ ಕಾರ್ಯಕ್ರಮ

Share

Advertisement
Advertisement

Advertisement

ಕುಂದಾಪುರ:ಡಾ.ಬಿ.ಬಿ.ಹೆಗ್ಡೆ ಪ್ರಥಮ ದರ್ಜೆ ಕಾಲೇಜಿನ ವಾಣಿಜ್ಯ ವಿಭಾಗದ ವತಿಯಿಂದ ಪ್ರಥಮ ವರ್ಷದ ವಿದ್ಯಾರ್ಥಿಗಳಿಗೆ “ಬ್ಯಾಂಕ್ ಬ್ಯಾಟಲ್” ಎನ್ನುವ ವಿನೂತನ ಕಾರ್ಯಕ್ರಮ ಹಮ್ಮಿಕೊಳ್ಳಲಾಯಿತು.
ಕುಂದಾಪುರ ಗುಲ್ವಾಡಿ ಶಾಖೆಯ ಮ್ಯಾನೇಜರ್ ಶ್ರೀ. ಬಿ ಕರುಣಾಕರ್ ಶೆಟ್ಟಿಯವರು ಸಂಪನ್ಮೂಲ ವ್ಯಕ್ತಿಯಾಗಿ ಭಾಗವಹಿಸಿ ಮಾತನಾಡಿ ದೇಶದ ಆರ್ಥಿಕ ಅಭಿವೃದ್ಧಿಯಲ್ಲಿ ಬ್ಯಾಂಕುಗಳ ಪಾತ್ರ ಮತ್ತು ಬ್ಯಾಂಕಿನ ಅಗತ್ಯತೆಯ ಬಗ್ಗೆ ಹಾಗೂ ಸವಲತ್ತುಗಳ ಬಗ್ಗೆ ಮಾಹಿತಿ ನೀಡಿದರು.ಕಾಲೇಜಿನ ಪ್ರಿನ್ಸಿಪಾಲ್ ಪ್ರೊ.ಕೆ.ಉಮೇಶ್ ಶೆಟ್ಟಿ ಅಧ್ಯಕ್ಷತೆ ವಹಿಸಿದರು.ವೈಸ್ ಪ್ರಿನ್ಸಿಪಾಲ್ ಚೇತನ್ ಶೆಟ್ಟಿ ಪ್ರಾಸ್ತಾವಿಕವಾಗಿ ಮಾತನಾಡಿದರು.ವಾಣಿಜ್ಯ ವಿಭಾಗದ ಮುಖ್ಯಸ್ಥರಾದ ವೀಣಾ ಭಟ್ ಸ್ವಾಗತಿಸಿದರು.ಕಾರ್ಯಕ್ರಮದ ಸಂಯೋಜಕರಾದ ಶರತ್ ಕುಮಾರ್ ಪರಿಚಯಿಸಿದರು.ಅಕ್ಷಯ್ ದೇವಾಡಿಗ ವಂದಿಸಿದರು.ವಿದ್ಯಾರ್ಥಿ ಪವಿತ್ರ ಪೈ ಪ್ರಾರ್ಥಿಸಿ.ಪ್ರತೀಕ್ಷಾ ಕಾರ್ಯಕ್ರಮ ನಿರೂಪಿಸಿದರು.
“Law and Practice of Banking” ವಿಷಯಾಧಾರಿತ,ಕಾಲ್ಪನಿಕ ಬ್ಯಾಂಕ್ ವ್ಯವಹಾರದ ಮೂಲಕ ಪಾಠದ ಪರಿಕಲ್ಪನೆಯನ್ನು ವಿದ್ಯಾರ್ಥಿಗಳಿಗೆ ಮನದಟ್ಟು ಮಾಡುವುದು ಮತ್ತು ಬ್ಯಾಂಕ್ ವ್ಯವಹಾರದ ಬಗ್ಗೆ ಸಂಪೂರ್ಣ ಪ್ರಾಯೋಗಿಕ ಅನುಭವ ನೀಡುವ ಉದ್ದೇಶದಿಂದ ಅಂತರ್ ತರಗತಿವಾರು ಸ್ವರ್ಧೆಯನ್ನು ಆಯೋಜಿಸಲಾಯಿತು.ಒಟ್ಟು 11 ತಂಡಗಳು ಸ್ಪರ್ಧಿಸಿದ್ದು,ಸ್ವರ್ಧೆಯಲ್ಲಿ ಪ್ರಥಮ ಬಿ.ಕಾಂ (ಬಿ.) ವಿಭಾಗದ ತಂಡ ಪ್ರಥಮ,ಪ್ರಥಮ ಬಿ.ಕಾಂ ವಿಭಾಗ ತಂಡ ದ್ವಿತೀಯ ಸ್ಥಾನವನ್ನು ಪಡೆದು ವಿಜೇತರಾದರು.ವಿಜೇತರಿಗೆ ನಗದು ಬಹುಮಾನ ನೀಡಿ ಗೌರವಿಸಲಾಯಿತು.

Advertisement
Advertisement


Share

Leave a comment

Your email address will not be published. Required fields are marked *

You cannot copy content of this page