ಶ್ರೀಗುಹೇಶ್ವರ ದೇವಸ್ಥಾನ ಕೊಡಪಾಡಿ ಮಹಾಶಿವರಾತ್ರಿ ಮಹೋತ್ಸವ
ಕುಂದಾಪುರ:ತಾಲೂಕಿನ ಪುರಾಣ ಪ್ರಸಿದ್ಧ ಗುಜ್ಜಾಡಿ ಗ್ರಾಮದ ಕೊಡಪಾಡಿ ಶ್ರೀಗುಹೇಶ್ವರ ದೇವಸ್ಥಾನದಲ್ಲಿ ಮಹಾಶಿವರಾತ್ರಿ ಮಹೋತ್ಸವ ನಾನಾ ಧಾರ್ಮಿಕ ವಿಧಿವಿಧಾನಗಳೊಂದಿಗೆ ಶುಕ್ರವಾರ ನಡೆಯಿತು.
ಶಿವರಾತ್ರಿ ಮಹೋತ್ಸವ ಅಂಗವಾಗಿ ಗುಹೆಯಲ್ಲಿ ಅಂತರ್ಗತನಾದ ಶಿವನಿಗೆ ವಿಶೇಷ ಪೂಜೆಯನ್ನು ಸಲ್ಲಿಸಲಾಯಿತು.ಶಿವ ಸಹಸ್ರನಾಮ ಪಠಣ,ಭಜನಾ ಕಾರ್ಯಕ್ರಮ,ಗಣಹೋಮ,ಶತರುದ್ರಾಭಿಷೇಕ,ರುದ್ರ ಹೋಮ,ಹಣಬಿನ ಸೇವೆ,ಮಹಾಮಂಗಳಾರತಿ,ಪ್ರಸಾದ ವಿತರಣೆ,ಯಕ್ಷಗಾನ ಕಾರ್ಯಕ್ರಮ ಜರುಗಿತು.ನಾನಾ ಭಾಗಗಳಿಂದ ಭಕ್ತರು ಶ್ರೀಕ್ಷೇತ್ರಕ್ಕೆ ಆಗಮಸಿ ಶ್ರೀದೇವರ ಪ್ರಸಾದವನ್ನು ಸ್ವೀಕರಿಸಿದರು.