ಹೆಮ್ಮಾಡಿ ಜನತಾ ಸ್ವತಂತ್ರ ಪದವಿ ಪೂರ್ವ ಕಾಲೇಜು-ವೃತ್ತಿ ಮಾರ್ಗದರ್ಶನ ಮಾಹಿತಿ ಕಾರ್ಯಾಗಾರ
ಕುಂದಾಪುರ:ಜನತಾ ಸ್ವತಂತ್ರ ಪದವಿ ಪೂರ್ವ ಕಾಲೇಜು ಹೆಮ್ಮಾಡಿ,ಲಯನ್ಸ್ ಕ್ಲಬ್ ಕುಂದಾಪುರ ಕೋಸ್ಟಲ್ ಹಾಗೂ ಲಯನ್ಸ್ ಕ್ಲಬ್ ಉಡುಪಿ ಲಕ್ಷ್ಯ ಅವರ ಸಂಯುಕ್ತ ಆಶ್ರಯದಲ್ಲಿ ವಿದ್ಯಾರ್ಥಿಗಳಿಗೆ ವೃತ್ತಿ ಮಾರ್ಗದರ್ಶನ ಮಾಹಿತಿ ಕಾರ್ಯಾಗಾರ ಹೆಮ್ಮಾಡಿ ಜನತಾ ಕಾಲೇಜಿನಲ್ಲಿ ನಡೆಯಿತು.
ಹೆಮ್ಮಾಡಿ ಜನತಾ ಕಾಲೇಜಿನ ಆಡಳಿತ ಮಂಡಳಿ ಅಧ್ಯಕ್ಷರು,ಪ್ರಿನ್ಸಿಪಾಲ್ ಗಣೇಶ್ ಪುತ್ರನ್ ಅಧ್ಯಕ್ಷತೆಯನ್ನು ವಹಿಸಿದ್ದರು.ಲಯನ್ಸ್ ಕ್ಲಬ್ ಕುಂದಾಪುರ ಕೊಸ್ಟಲ್ ಅಧ್ಯಕ್ಷ ವಸಂತರಾಜ್ ಶೆಟ್ಟಿ ಉದ್ಘಾಟಿಸಿ ಮಾತನಾಡಿ ವೃತ್ತಿ ಮಾರ್ಗದರ್ಶನದ ಅಗತ್ಯತೆ ಬಗ್ಗೆ ಮಾಹಿತಿ ನೀಡಿದರು.ಲಯನ್ಸ್ ಜಿಲ್ಲಾ ಕ್ಯಾಬಿನೆಟ್ ಕಾರ್ಯದರ್ಶಿ ಜಿಲ್ಲೆ 317 ರವಿರಾಜ್ ನಾಯಕ್ ಸಂಪನ್ಮೂಲ ವ್ಯಕ್ತಿಯಾಗಿ ಭಾಗವಹಿಸಿದ್ದರು.ಲಯನ್ಸ್ ಕ್ಲಬ್ ಉಡುಪಿ ಲಕ್ಷ್ಯ ಅಧ್ಯಕ್ಷ ಧನುಷ್ ಕೆ ಅವರು ವಿದ್ಯಾರ್ಥಿ ಬದುಕಿಗೆ ಇಂತಹ ನೂರಾರು ಕಾರ್ಯಕ್ರಮಗಳ ಅಗತ್ಯತೆ ಬಹಳಷ್ಟು ಇದೆ ಎಂದು ಹೇಳಿದರು.
ಉಡುಪಿ ಲಯನ್ಸ್ ಕ್ಲಬ್ ಲಕ್ಷ್ಯ ಉಪಾಧ್ಯಕ್ಷ ರಘುನಾಥ್ ನಾಯಕ್,ಕುಂದಾಪುರ ಲಯನ್ಸ್ ಕ್ಲಬ್ ಕೋಸ್ಟಲ್ ಕಾರ್ಯದರ್ಶಿ ಉದಯ್ ಕುಮಾರ್ ಶೆಟ್ಟಿ,ಖಜಾಂಚಿ ಸುಕುಮಾರ ಶೆಟ್ಟಿ,ಕಾಲೇಜಿನ ಬೋಧಕ,ಬೋಧಕೇತರ ಸಿಬ್ಬಂದಿಗಳು,ವಿದ್ಯಾರ್ಥಿಗಳು ಉಪಸ್ಥಿತರಿದ್ದರು.ಪ್ರಥಮ ಪಿಯುಸಿ ವಾಣಿಜ್ಯ ವಿದ್ಯಾರ್ಥಿ ಗೌತಮ್ ಸ್ವಾಗತಿಸಿದರು.ವಿಜ್ಞಾನ ವಿಭಾಗದ ವಿದ್ಯಾರ್ಥಿನಿ ಶ್ರುತಿಕಾ ನಿರೂಪಿಸಿದರು.ವಿದ್ಯಾರ್ಥಿ ನೌಫಾಲ್ ವಂದಿಸಿದರು.



























































































































































































































































































































































































































































































































































































































































































































































































































































































































































































































































































































































































































































































































































































































































































