ರಾಮ ನವಮಿ ಪಲ್ಲಕ್ಕಿ ಉತ್ಸವ ಮೆರವಣಿಗೆ
ಕುಂದಾಪುರ:ತಾಲೂಕಿನ ಹೊಸಾಡು ಗ್ರಾಮದ ಕಂಚುಗೋಡು ಶ್ರೀರಾಮ ಮಂದಿರದಲ್ಲಿ ರಾಮನವಮಿ ಉತ್ಸವ ಅಂಗವಾಗಿ ಅಖಂಡ ಭಜನಾ ಕಾರ್ಯಕ್ರಮ,ಸತ್ಯನಾರಾಯಣ ಪೂಜೆ,ಅನ್ನಸಂತರ್ಪಣೆ ಹಾಗೂ ಶ್ರೀರಾಮ ದೇವರ ಪಲ್ಲಕ್ಕಿ ಉತ್ಸವ ಮೆರವಣಿಗೆ ಬುಧವಾರ ವಿಜೃಂಭಣೆಯಿಂದ ನಡೆಯಿತು.
ಕಂಚುಗೋಡು ಶ್ರೀರಾಮ ಮಂದಿರದ ಸುವರ್ಣ ಮಹೋತ್ಸವ ಅಂಗವಾಗಿ ಏಪ್ರಿಲ್ 18 ರ ಗುರುವಾರದಂದು ಸಂಜೆ 4 ಗಂಟೆ ಯಿಂದ ವೈಭವದ ಐತಿಹಾಸಿಕ ಶ್ರೀ ಸೀತಾರಾಮಚಂದ್ರ ಕಲ್ಯಾಣೋತ್ಸವ ಕಾರ್ಯಕ್ರಮ ಪೇಜಾವರ ಶ್ರೀ ವಿಶ್ವ ಪ್ರಸನ್ನ ತೀರ್ಥ ಸ್ವಾಮೀಜಿಗಳ ದಿವ್ಯ ಉಪಸ್ಥಿತಿಯಲ್ಲಿ.ಡಾ.ಎ ಚನ್ನಕೇಶವ ಗಾಯತ್ರಿ ಭಟ್ ಗಜಪುರ ಆನಗಳ್ಳಿ ಹಾಗೂ ಕ್ಷೇತ್ರದ ರಾಘವೇಂದ್ರ ಭಟ್ ಕಿರಿಮಂಜೇಶ್ವರ ಅವರ ನೇತೃತ್ವದಲ್ಲಿ ನಡೆಯಲಿದೆ.ಶ್ರೀರಾಮತಾರಕ ಮಹಾಮಂತ್ರ ಹೋಮ,ಮಧ್ಯಾಹ್ನ ಮತ್ತು ರಾತ್ರಿ ಮಹಾ ಅನ್ನಸಂತರ್ಪಣೆ ಜರುಗಲಿದೆ.