ಆರ್ಭಟಿಸಿದ ಮಳೆ ನಡುವೆ ಸಾಂಗವಾಗಿ ನೆರವೇರಿದ ಚೌತಿ ಹಬ್ಬ ಮೂಗಿಲು ಮುಟ್ಟಿದ ಭಕ್ತರ ಜಯಘೋಷ,ಅದ್ದೂರಿಯಾಗಿ ನಡೆದ ವಿಘ್ನೇಶ್ವರನ ಮೆರವಣಿಗೆ



ಕುಂದಾಪುರ:ತಾಲೂಕಿನ ಗಂಗೊಳ್ಳಿ,ತ್ರಾಸಿ,ಮುಳ್ಳಿಕಟ್ಟೆ,ಅರಾಟೆ,ಹಕ್ಲಾಡಿ,ಆಲೂರು,ಕುಂದಬಾರಂದಡಿ,ನಾಡ,ಪಡುಕೋಣೆ,ಬಡಾಕೆರೆ,ಹೆಮ್ಮಾಡಿ,ನೂಜಾಡಿ ಸೇರಿದಂತೆ ನಾನಾ ಭಾಗದಲ್ಲಿ ವಿವಿಧ ಸೇವಾ ಸಮಿತಿಗಳ ವತಿಯಿಂದ ಪೂಜಿಸಲ್ಪಟ್ಟ ಗಣಪತಿ ಮೂರ್ತಿ ಜಲಸ್ತಂಭ ಕಾರ್ಯ ಅಬ್ಬರಿಸಿದ ಮಳೆ ನಡುವೆ ಸಂಭ್ರಮದಿಂದ ನಡೆಯಿತು.
ಮಳೆಯನ್ನು ಲೆಕ್ಕಿಸದೆ ಮಹಿಳೆಯರು,ಪುರುಷರು,ಮಕ್ಕಳು ಮೆರವಣಿಗೆಯಲ್ಲಿ ಭಾಗವಹಿಸಿದ್ದರು.ಕುಣಿತ ಭಜನೆ,ಚಂಡೆ ವಾದನ,ಟ್ಯಾಬ್ಲೋ ಮೆರವಣಿಗೆ ಸೊಬಗನ್ನು ಹೆಚ್ಚಿಸಿತು.ಭಜನಾ ತಂಡಗಳು ಮಳೆಗೆ ಸಡ್ಡು ಹೊಡೆದಂತೆ ಹೆಜ್ಞೆ ಹಾಕಿದರು.ಚೌತಿ ಸಂಭ್ರಮಕ್ಕೆ ಮಳೆರಾಯ ಅಡ್ಡಿ ಉಂಟು ಮಾಡಿದ್ದರು.ಭಕ್ತರ ಸಂಭ್ರಮಕ್ಕೆ ಕೊರತೆ ಉಂಟಾಗಿಲ್ಲ.ಯಾವುದೆ ರೀತಿಯ ಅಹಿತಕರ ಘಟನೆಗಳು ನಡೆಯದೆ ಭಕ್ತಿ ಭಾವ ಶೃದ್ಧೆಯಿಂದ ಗಣೇಶೋತ್ಸವ ಕಾರ್ಯಕ್ರಮ ಜರುಗಿತು.ರಕ್ಷಣಾ ಕಾರ್ಯದಲ್ಲಿ ತೊಡಗಿಕೊಂಡಿರುವ ಪೆÇಲೀಸ್ ಇಲಾಖೆ ಕಾರ್ಯ ಜನಮೆಚ್ಚುಗೆಗೆ ಪಾತ್ರವಾಯಿತು.