ಮಾರಣಕಟ್ಟೆ ಜಾತ್ರೆ,ಶ್ರೀ ಬ್ರಹ್ಮಲಿಂಗೇಶ್ವರ ದೇವರಿಗೆ ಅನ್ನದಾನ ಸೇವೆ ಸಮರ್ಪಣೆ

Share

ಕುಂದಾಪುರ:ತಾಲೂಕಿನ ಪ್ರಸಿದ್ಧ ಮಾರಣಕಟ್ಟೆ ಶ್ರೀ ಬ್ರಹ್ಮಲಿಂಗೇಶ್ವರ ದೇವರ ಸಾನಿಧ್ಯದಲ್ಲಿ ಜಾತ್ರಾ ಮಹೋತ್ಸವ ಕಾರ್ಯಕ್ರಮ ಸಂಭ್ರಮಾಚರಣೆ ಯಿಂದ ನಡೆಯಿತು.ಕಳೆದ 11 ವರ್ಷದಿಂದ ಅನ್ನದಾನ ಸೇವೆಯನ್ನು ನಡೆಸಿಕೊಂಡು ಬರುತ್ತಿರುವ ಶ್ರೀಮತಿ ನಾಗಲಕ್ಷ್ಮಿ ಸತೀಶ್ ಕೊಠಾರಿ ಕೃಷ್ಣಿಮನೆ ನಾಯ್ಕನಕಟ್ಟೆ ಅವರು ಪ್ರತಿ ವರ್ಷದಂತೆ ಈ ವರ್ಷವೂ ಕೂಡ ಶ್ರೀ ಬ್ರಹ್ಮಲಿಂಗೇಶ್ವರ ದೇವರಿಗೆ ಅನ್ನದಾನ ಸೇವೆಯನ್ನು ಸಮರ್ಪಿಸಿದರು.ಸಾವಿರಾರು ಮಂದಿ ಅನ್ನ ಪ್ರಸಾದವನ್ನು ಸ್ವೀಕರಿಸಿದರು.

ಅನ್ನ ದಾನಿಗಳಾದ ಉದ್ಯಮಿ ಸತೀಶ್ ಕೊಠಾರಿ ಅವರು ಮಾತನಾಡಿ,ವೈವಾಹಿಕ ಜೀವನದಲ್ಲಿ ಸಂತಾನ ಭಾಗ್ಯ ಇಲ್ಲದ ಸಂದರ್ಭದಲ್ಲಿ ಶ್ರೀ ಬ್ರಹ್ಮಲಿಂಗೇಶ್ವರ ದೇವರ ಸಾನ್ನಿಧ್ಯದಲ್ಲಿ ಬೇಡಿಕೊಂಡು ಹೋದಾಗ ಅಲ್ಪ ಕಾಲದಲ್ಲಿಯೇ ನನಗೆ ಸಿಹಿ ಸುದ್ದಿ ಸಿಕ್ಕಿದೆ, ಎರಡು ಮಕ್ಕಳ ತಂದೆ ಆಗಿ ಸುಖಿ ಸಂಸಾರವನ್ನು ಸಾಗಿಸುತ್ತಿದ್ದೇನೆ.ಕಷ್ಟವೆಂದು ಬೇಡಿದವರನ್ನು ಬ್ರಹ್ಮಲಿಂಗ ಎಂದಿಗೂ ಕೈ ಬಿಡುವುದಿಲ್ಲ ಎಂದು ಹೇಳಿದರು.ದೇವರು ಕೊಟ್ಟಿರುವುದು ದೇವರಿಗೆ ಸಮರ್ಪಿಸುತ್ತಿದ್ದೇನೆ ಇದರಲ್ಲಿ ನನ್ನದು ಎನ್ನುವುದು ಏನು ಇಲ್ಲ ಎಂದರು.ಅನ್ನದಾನ ಸೇವೆ ಮಾಡಲು ಸಹಕರಿಸಿದ ಎಲ್ಲರಿಗೂ ಕೃತಜ್ಞತೆಯನ್ನು ಸಲ್ಲಿಸಿದರು.

ಈ ಸಂದರ್ಭದಲ್ಲಿ ಸತೀಶ್ ಕೊಠಾರಿ ಅವರ ಕುಟುಂಬಸ್ಥರು,
ದೇವಸ್ಥಾನದ ಆಡಳಿತ ಮಂಡಳಿಯವರು,
ಅಡುಗೆ ಅವರು,ಭಕ್ತಾದಿಗಳು, ಗ್ರಾಮಸ್ಥರು ಉಪಸ್ಥಿತರಿದ್ದರು.ಉದ್ಯಮಿ ಸತೀಶ್ ಕೊಠಾರಿ ಅವರು ಸಾಮಾಜಿಕ ಶೈಕ್ಷಣಿಕ ಕಾರ್ಯಗಳಲ್ಲಿ ತೊಡಗಿ ಕೊಳ್ಳುವುದರ ಜೊತೆಗೆ ಧಾರ್ಮಿಕ ಕ್ಷೇತ್ರದಲ್ಲೂ ತೊಡಗಿ ಕೊಂಡು ವಿಶೇಷವಾದ ಕೆಲಸವನ್ನು ಮಾಡುತ್ತಿದ್ದಾರೆ.

Advertisement

Share

Leave a comment

Your email address will not be published. Required fields are marked *

You cannot copy content of this page