ಬೈಂದೂರು ತಾಲೂಕು ಸಮಾವೇಶ,ಮನೆ ಮನೆ ಮಂತ್ರಾಕ್ಷತಾ ಅಭಿಯಾನ

Share

ಬೈಂದೂರು:ಅಯೋಧ್ಯೆ ರಾಮ ಮಂದಿರದಲ್ಲಿ ಪೂಜೆಗೊಂಡು ನಮ್ಮೂರಿಗೆ ಭವ್ಯ ಶೋಭಾ ಯಾತ್ರೆಯಲ್ಲಿ ಆಗಮಿಸಿದ ಮಂತ್ರಾಕ್ಷತೆಯನ್ನು ಮನೆ ಮನೆಗೆ ತಲುಪಿಸಿಸುವ ಕಾರ್ಯ ಮಾಡಬೇಕಾಗಿದೆ ಎಂದು ಅಯೋಧ್ಯೆ ಶ್ರೀರಾಮ ಮಂದಿರ ಅಭಿಯಾನದ ಉಡುಪಿ ಜಿಲ್ಲಾ ಸಂಚಾಲಕ ಸುರೇಂದ್ರ ಕೋಟೇಶ್ವರ ಹೇಳಿದರು.
ಅಯೋಧ್ಯ ಶ್ರೀರಾಮ ಮಂದಿರ ಮಂತ್ರಾಕ್ಷತಾ ಅಭಿಯಾನ ಉಡುಪಿ ಜಿಲ್ಲೆ,ಶ್ರೀರಾಮ ಮಂದಿರ ಲೋಕಾರ್ಪಣೆ ಮತ್ತು ಮೂರ್ತಿ ಪ್ರತಿಷ್ಠಾನ ಪ್ರಯುಕ್ತ ಮನೆ ಸಂಪರ್ಕ ಹಾಗೂ ಮಂತ್ರಾಕ್ಷತಾ ಅಭಿಯಾನ ಸಮಿತಿ ವತಿಯಿಂದ ಶ್ರೀಮಹಾಗಣಪತಿ ಮಾಂಗಲ್ಯ ಮಂಟಪ ನಾವುಂದದಲ್ಲಿ ಭಾನುವಾರ ನಡೆದ ಬೈಂದೂರು ತಾಲೂಕು ಸಮಾವೇಶವನ್ನು ಉದ್ದೇಶಿಸಿ ಅವರು ಮಾತನಾಡಿದರು.
ಅಯೋಧ್ಯೆಯಲ್ಲಿ ನಿರ್ಮಾಣವಾಗುತ್ತಿರುವ ಶ್ರೀರಾಮ ಮಂದಿರದ ಕಾಮಗಾರಿಯ ಮೊದಲನೇ ಹಂತ ಮುಕ್ತಾಯದ ಹತ್ತಿರದಲ್ಲಿದ್ದು ಮುಂದಿನ 42 ದಿನಗಳಲ್ಲಿ ರಾಮಲಲ್ಲಾನ ಪ್ರಾಣ ಪ್ರತಿಷ್ಠೆ ಕಾರ್ಯ ನಡೆಯಲಿದೆ ಎಂದು ಹೇಳಿದರು.
ಶ್ರೀ ಸತ್ಯ ಸ್ವರೂಪಾನಂದ ಸ್ವಾಮೀಜಿ ಶ್ರೀ ರಾಮಕೃಷ್ಣಾಶ್ರಮ ಏಳಜಿತ್ ಅವರು ಆಶೀರ್ವಚನ ನೀಡಿದರು.ಉಡುಪಿ ಜಿಲ್ಲಾ ಸಂಘ ಚಾಲಕರಾದ ಸತೀಶ್ ಕಾಳವಾರ್ಕರ್,ಅಯೋಧ್ಯೆ ಶ್ರೀರಾಮ ಮಂದಿರ ಪ್ರತಿಷ್ಠಾನ ಜಿಲ್ಲಾ ಸಹ ಸಂಯೋಜಕ ಮುರಳಿ ಕೃಷ್ಣ,ಮರವಂತೆ ಶ್ರೀರಾಮ ಭಜನಾ ಮಂದಿರ ಅಧ್ಯಕ್ಷ ವಾಸು ಖಾರ್ವಿ ಉಪಸ್ಥಿತರಿದ್ದರು.ಬೈಂದೂರು ತಾಲೂಕು ಸಂಯೋಜಕ ಪ್ರಸನ್ನ ಉಪ್ಪÅಂದ ಸ್ವಾಗತಿಸಿದರು.ತುಳಸಿ ದಾಸ್ ಶಿರೂರು ನಿರೂಪಿಸಿದರು.ತಾಲೂಕು ಸಂಚಾಲಕ ಜಗದೀಶ್ ಕೊಲ್ಲೂರು ವಂದಿಸಿದರು.ಅಯೋಧ್ಯೆಯಿಂದ ಆಗಮಿಸಿದ ಶ್ರೀರಾಮ ಮಂತ್ರಾಕ್ಷತೆಯನ್ನು ಮರವಂತೆ ಶ್ರೀರಾಮ ಮಂದಿರದಲ್ಲಿ ಪೂಜಿಸಲಾಯಿತು.

Advertisement

Share

Leave a comment

Your email address will not be published. Required fields are marked *

You cannot copy content of this page