ಪರಿಸರ ಮಾಹಿತಿ ಕಾರ್ಯಕ್ರಮ,ಗಿಡ ವಿತರಣೆ

ಕುಂದಾಪುರ:ಶ್ರೀಕೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ,ಬಿ.ಸಿ ಟ್ರಸ್ಟ್ ಬೈಂದೂರು,ಪ್ರಗತಿ ಬಂಧು ಸ್ವ ಸಹಾಯ ಸಂಘಗಳ ಒಕ್ಕೂಟ ಅವರ ಆಶ್ರಯದಲ್ಲಿ ಪರಿಸರ ಮಾಹಿತಿ ಕಾರ್ಯಕ್ರಮ ಮತ್ತು ಹಣ್ಣಿನ ಗಿಡ ವಿತರಣೆ ಕಾರ್ಯಕ್ರಮ ಕುಂದಾಬಾರಂದಾಡಿ ಶ್ರೀಮಹಾಲಿಂಗೇಶ್ವರ ದೇವಸ್ಥಾನದ ವಠಾರದಲ್ಲಿ ಶುಕ್ರವಾರ ನಡೆಯಿತು.
ಶ್ರೀಮಹಾಲಿಂಗೇಶ್ವರ ದೇವಸ್ಥಾನದ ಆಡಳಿತ ಸಮಿತಿ ಅಧ್ಯಕ್ಷ ಸುಭಾಷ್ ಶೆಟ್ಟಿ ಗಿಡ ನೆಡುವುದರ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.ದೇವಸ್ಥಾನದ ಸಮಿತಿ ಉಪಾಧ್ಯಕ್ಷ ಸೂರ ಪರಿಸರ ಸಂರಕ್ಷಣೆ ಮಹತ್ವದ ಕುರಿತು ಮಾತನಾಡಿದರು.ಕಾರ್ಯದರ್ಶಿ ಮಂಜುನಾಥ,ಒಕ್ಕೂಟದ ಅಧ್ಯಕ್ಷ ಪದ್ಮನಾಭ ಮತ್ತು ಉಪಾಧ್ಯಕ್ಷೆ ನಾಗರತ್ನ,ಹಕ್ಲಾಡಿ ಪಂಚಾಯಿತಿ ಸದಸ್ಯ ಮಂಜುನಾಥ,ಕೃಷಿ ಮೇಲ್ವಿಚಾರಕ ರಾಜು,ಪಡುಕೋಣೆ ಮೇಲ್ವಿಚಾರಕಿ ಪಾರ್ವತಿ,ಸೇವಾ ಪ್ರತಿನಿಧಿ ಭಾರತಿ,ಒಕ್ಕೂಟದ ಪದಾಧಿಕಾರಿಗಳು,ಪ್ರಗತಿ ಬಂಧು ಸ್ವಸಹಾಯ ತಂಡದ ಸದಸ್ಯರು ಉಪಸ್ಥಿತರಿದ್ದರು.