ಹುಂತನಗೋಳಿ ಅಮಾವಾಸ್ಯೆ ಜಾತ್ರಾ ಮಹೋತ್ಸವ ಸಂಪನ್ನ




ಕುಂದಾಪುರ:ಬೈಂದೂರು ತಾಲೂಕಿನ ಆಲೂರು ಗ್ರಾಮದ (ಹೇರೂರು) ಹುಂತನಗೋಳಿ ಶ್ರೀ ದುರ್ಗಾಪರಮೇಶ್ವರಿ ಅಮ್ಮನವರ ದೇವಸ್ಥಾನದಲ್ಲಿ ವರ್ಷಂಪ್ರತಿ ನಡೆಯುವ ಎಳ್ಳಮಾವಾಸ್ಯೆ ಜಾತ್ರಾ ಮಹೋತ್ಸವ ನಾನಾ ಧಾರ್ಮಿಕ ವಿಧಿವಿಧಾನಗಳೊಂದಿಗೆ ಸಂಪ್ರದಾಯ ಬದ್ಧವಾಗಿ ಸೋಮವಾರ ನಡೆಯಿತು.
ಎಳ್ಳಮಾವಾಸ್ಯೆ ಜಾತ್ರಾ ಮಹೋತ್ಸವ ಅಂಗವಾಗಿ ಶ್ರೀದುರ್ಗಾಪರಮೇಶ್ವರಿ ಅಮ್ಮನವರಿಗೆ ಮಂಗಳಾರತಿ ಸೇವೆ,ಹುತ್ತಕ್ಕೆ ಹೂ ಸುತ್ತುವ ಸೇವೆ, ತೊಟ್ಟಿಲು ಸೇವೆ,ಸುತ್ತಕ್ಕಿ ಸೇವೆ,ತುಲಾಭಾರ ಸೇವೆ ಹಾಗೂ ಸಾರ್ವಜನಿಕ ಅನ್ನಸಂತರ್ಪಣೆ ಕಾರ್ಯಕ್ರಮ ಜರುಗಿತು.ಸಾವಿರಾರು ಭಕ್ತರು ಕ್ಷೇತ್ರಕ್ಕೆ ಆಗಮಿಸಿ ಶ್ರೀ ದೇವರ ದರ್ಶನ ಪಡೆದು ಪ್ರಸಾದವನ್ನು ಸ್ವೀಕರಿಸಿದರು.ದೇವಸ್ಥಾನದ ಅರ್ಚಕರಾದ ಶ್ರೀಕಾಂತ ಹೆಬ್ಬಾರ್,ಶಾಂತರಾಮ ಶೆಟ್ಟಿ,ಸುರೇಶ್ ನಾಯಕ್,ರಮೇಶ ಭಟ್,ಪದ್ಮನಾಭ ಹೆಬ್ಬಾರ್,ರಾಮಚಂದ್ರ ಹೆಬ್ಬಾರ್,ಗ್ರಾಮಸ್ಥರು,ಭಕ್ತಾಧಿಗಳು ಉಪಸ್ಥಿತರಿದ್ದರು.ತಾರಿಬೇರು ಭವಾನಿ ಶಂಕರ ಗಾಣಿಗ ಅವರು ಅನ್ನದಾನ ಸೇವೆಯನ್ನು ಸಲ್ಲಿಸಿದರು.