ಆಗಸ್ಟ್ 8 ರಿಂದ ಆಗಸ್ಟ್ 12 ವರೆಗೆ ಶಿರ್ವದಲ್ಲಿಟೊಯೊಟಾ ಮಾನ್ಸೂನ್ ಬೃಹತ್ ಕಾರ್ ಎಕ್ಸೆಂಜ್ ಮೇಳ ಆಯೋಜನೆ

ಉಡುಪಿ:ಯುನೈಟೆಡ್ ಟೊಯೊಟ ವತಿಯಿಂದ ಶಿರ್ವ ಪೇಟೆಯಲ್ಲಿ ಇದೆ ಮೊದಲ ಬಾರಿಗೆ ಟೊಯೊಟಾ ಮಾನ್ಸೂನ್ ಕಾರ್ ಎಕ್ಸೆಂಜ್ ಮೇಳ ಆಗಸ್ಟ್.8 ರಿಂದ ಆಗಸ್ಟ್ 12 ರ ವರೆಗೆ ನಡೆಯಲಿದೆ.
ಗ್ರಾಹಕರಿಗೆ ತಮ್ಮ ನೆಚ್ಚಿನ ಕಾರ್ ಕೊಂಡು ಕೊಳ್ಳಲು
ಟೆಸ್ಟ್ ಡ್ರೈವಿಂಗ್ ಕೂಡ ಉಚಿತವಾಗಿ ನೀಡಲಾಗುತ್ತಿದೆ.
ಐದು ದಿನಗಳ ಕಾಲ ನಡೆಯುವ ಅದ್ದೂರಿ ಕಾರ್ ಎಕ್ಸೆಂಜ್ ಮೇಳ ಗ್ರಾಹಕರ ಮನ ಸೆಳೆಯುತ್ತಿದೆ.
ಟೊಯೊಟಾ ಮಾನ್ಸೂನ್ ಕಾರ್ ಎಕ್ಸೆಂಜ್ ಮೇಳ ಅಂಗವಾಗಿ ಗ್ರಾಹಕರಿಗೆ ಆಕರ್ಷಕ ಆಫರ್ ಗಳನ್ನು ನೀಡಲಾಗುತ್ತಿದ್ದು.ತಮ್ಮ ಯಾವುದೇ ಮಾದರಿಯ ಹಳೆ ಕಾರನ್ನು ಸ್ಥಳದಲ್ಲೇ ನೀಡಿ ಉತ್ತಮ ಬೆಲೆಯನ್ನು ಪಡೆದುಕೊಂಡು ಹೊಸ ಕಾರನ್ನು ಖರೀದಿಸಲು ಅವಕಾಶವನ್ನು ಕಲ್ಪಿಸಲಾಗಿದೆ.
ಸ್ಥಳದಲ್ಲೇ ಬುಕಿಂಗ್ ಮಾಡುವ ಕಾರ್ ಮೇಲೆ ಗ್ರಾಹಕರಿಗೆ 10,000 ಡಿಸ್ಕೌಂಟ್ ಆಫರ್ ಕೂಡ ನೀಡಲಾಗುತ್ತಿದ್ದು.ಸ್ಥಳದಲ್ಲೇ ಲೊನ್ ವ್ಯವಸ್ಥೆ ಕೂಡ ಮಾಡಲಾಗಿದೆ.ಮನ್ಸೂನ್ ಸೀಸನ್ ನಲ್ಲಿ ಶಿರ್ವದಲ್ಲಿ ಆಯೋಜನೆ ಮಾಡಲಾಗಿರುವ ಬೃಹತ್ ಕಾರ್ ಎಕ್ಸೆಂಜ್ ಮೇಳದ ಸದುಪಯೋಗ ಪಡಿಸಿಕೊಳ್ಳುವಂತೆ ಯೂನಿಟೆಡ್ ಟೊಯೊಟಾ ಕಂಪನಿ
ಗ್ರಾಹಕರ ಬಳಿ ವಿನಂತಿಸಿ ಕೊಂಡಿದೆ.
ಗ್ಲಾಂಝಾ ಕಾರ್ ಮೇಲೆ ಒಂದು ಲಕ್ಷದ ವರೆಗೆ ಹಾಗೂ ಹೈರೈಡರ್ ಕಾರ್ ಮೇಲೆ 94 ಸಾವಿರ ರೂಪಾಯಿ ವರೆಗೆ ಡಿಸ್ಕೌಂಟ್ ಆಫರ್ ಕಂಪನಿ ಕಡೆಯಿಂದ ನೀಡಲಾಗುತ್ತಿದ್ದು.
ಪೋರ್ರ್ಚುನರ್ ಕಾರ್ ಖರೀದಿಸುವವರಿಗೆ ಒಂದು ಲಕ್ಷದ ವರೆಗೆ ರೀಯಾತಿ ದೊರೆಯಲಿದೆ.ಶಿರ್ವದಲ್ಲಿ ನಡೆಯುತ್ತಿರುವ ಟೊಯೊಟಾ ಮಾನ್ಸೂನ್ ಕಾರೋತ್ಸವದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಗ್ರಾಹಕರು ಭಾಗವಹಿಸಿ ಟೊಯೊಟಾ ಕಂಪನಿ ಕೊಡ ಮಾಡುವ ವಿಶೇಷ ಆಫರ್ ಅನ್ನು ಪಡೆಯಬಹುದಾಗಿದೆ.

ಶಿರ್ವ ಪಂಚಾಯತ್ ಅಧ್ಯಕ್ಷೆ ಸವಿತಾ ರಾಜೇಶ್ ಅವರು ದೀಪ ಬೆಳಗುವುದರ ಮುಖೇನ ಮಾನ್ಸೂನ್ ಕಾರ್ ಎಕ್ಸೆಂಜ್ ಮೇಳ ಉದ್ಘಾಟಿಸಿ ಮಾತನಾಡಿ,ಶಿರ್ವ ಪೇಟೆಯಲ್ಲಿ ಆಯೋಜನೆ ಮಾಡಲಾಗಿರುವ ರೈನಿ ಸೀಸನ್ ಕಾರ್ ಎಕ್ಸೆಂಜ್ ಮೇಳದಲ್ಲಿ ಹೆಚ್ಚಿನ ಗ್ರಾಹಕರು ಭಾಗವಹಿಸಿಸುವುದರ ಮುಖೇನ ಇವೊಂದು ಕಾರ್ಯಕ್ರಮ ಯಶಸ್ವಿಯಾಗಿ ನೆರವೇರಲಿ ಎಂದು ಶುಭಹಾರೈಸಿದರು.

ಯುನೈಟೆಡ್ ಟೊಯೊಟಾ ಉದ್ಯಾವರ ಬ್ರಾಂಚ್ ನ ಎ.ಎಸ್.ಎಂ ಅಕ್ಷತ್ ಅವರು ಮಾತನಾಡಿ,ಇದೆ ಮೊದಲ ಬಾರಿಗೆ ದೊಡ್ಡ ಮಟ್ಟದಲ್ಲಿ ಶಿರ್ವ ಪೇಟೆಯಲ್ಲಿ ಮಾನ್ಸೂನ್ ಕಾರೋತ್ಸವ ಕಾರ್ಯಕ್ರಮವನ್ನು ಆಯೋಜನೆ ಮಾಡಲಾಗಿದ್ದು.
ಆಗಸ್ಟ್ 8 ರಿಂದ ಆಗಸ್ಟ್ 12 ರ ತನಕ ನಡೆಯಲಿದೆ.ಹೆಚ್ಚಿನ ಸಂಖ್ಯೆಯಲ್ಲಿ ಗ್ರಾಹಕರು ಭಾಗವಹಿಸಬೇಕೆಂದು ಕೇಳಿಕೊಂಡರು.

ಶಿರ್ವ ಪಂಚಾಯತ್ ಪಿಡಿಒ ಅನಂತ ಪದ್ಮನಾಭ ಮಾತನಾಡಿ,ಸುಮಾರು 16,000 ಸಾವಿರದಷ್ಟು ಜನ ಸಂಖ್ಯೆ ಹೊಂದಿರುವ ಶಿರ್ವ ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ ಮಾನ್ಸೂನ್ ಕಾರ್ ಎಕ್ಸೆಂಜ್ ಮೇಳ ಆಯೋಜನೆ ಮಾಡುತ್ತಿರುವುದರಿಂದ ಇಲ್ಲಿನ ಜನರಿಗೆ ಬಹಳಷ್ಟು ಅನುಕೂಲವಾಗಲಿದೆ.ಐದು ದಿನಗಳ ಕಾಲ ನಡೆಯುವ ಕಾರ್ ಉತ್ಸವ ಕಾರ್ಯಕ್ರಮದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಗ್ರಾಹಕರು ಭಾಗವಹಿಸುವಂತೆ ಆಗಲಿ ಎಂದು ಹೇಳಿದರು.


ಯುನಿಟೆಡ್ ಟೊಯೊಟಾ ಉದ್ಯಾವರ ಟೀಮ್ ಲೀಡರ್ ವಿಕ್ರಮ್ ಮಾತನಾಡಿ, ಮಾನ್ಸೂನ್ ಕಾರ್ ಎಕ್ಸೆಂಜ್ ಮೇಳದಲ್ಲಿ ವಿಶೇಷ ಆಫರ್ ಜೊತೆಗೆ ಹೊಸ ಖರೀದಿಗೆ 10 ಸಾವಿರ ಡಿಸ್ಕೌಂಟ್ ಆಫರ್ ನೀಡಲಾಗುತ್ತಿದ್ದು.ಹೊಸ ಕಾರು ಖರೀದಿಗೆ ಆಕರ್ಷಕ ಬಡ್ಡಿದರದಲ್ಲಿ ಸ್ಥಳದಲ್ಲಿ ಲೋನ್ ವ್ಯವಸ್ಥೆಯನ್ನು ಕೂಡ ಮಾಡಲಾಗಿದೆ ಎಂದು ಹೇಳಿದರು.ಹೆಚ್ಚಿನ ಸಂಖ್ಯೆಯಲ್ಲಿ ಗ್ರಾಹಕರು ಭಾಗವಹಿಸುವಂತೆ ಕೇಳಿಕೊಂಡರು.
ಈ ಸಂದರ್ಭದಲ್ಲಿ ಟ್ಯಾಕ್ಸಿ ಚಾಲಕರ ಮತ್ತು ಮಾಲೀಕರ ಸಂಘದ ಸದಸ್ಯ ಗೇಬ್ರಿಯಲ್ ಸಲ್ದಾನ್ಹಾ,ಯುನಿಯನ್ ಬ್ಯಾಂಕ್ ಶಿರ್ವ ಶಾಲೆ ಮ್ಯಾನೇಜರ್ ನಿತಿನ್ ಕುಮಾರ್, ಟೊಯೊಟಾ ಕಂಪನಿ ಸಿಬ್ಬಂದಿಗಳು ಉಪಸ್ಥಿತರಿದ್ದರು.
ಭಾರತದಲ್ಲಿ ಮನೆ ಮಾತಾಗಿರುವ ಯುನಿಟೆಡ್ ಟೋಯೊಟ ಕಂಪನಿ ಕಾರ್ ಉದ್ಯಮದಲ್ಲಿ ತನ್ನದೇ ರೀತಿಯಲ್ಲಿ ಕೊಡುಗೆಯನ್ನು ನೀಡಿದೆ.ಗ್ರಾಹಕರಿಗೆ ಕೈಗೆಟುಕುವ ದರದಲ್ಲಿ ಕಾರ್ ಗಳನ್ನು ಮಾರಾಟ ಮಾಡಿ ಕೊಂಡು ಬಂದಿರುವ ಯುನಿಟೆಡ್ ಟೋಯೊಟ ಕಂಪನಿ ಗ್ರಾಹಕರ ನೆಚ್ಚಿನ ಕಂಪೆನಿ ಕೂಡ ಹೌದು.
ವರದಿ:ಜಗದೀಶ
ನಿಮ್ಮ ಸುದ್ದಿಗಳನ್ನು ನಮ್ಮ ಜಾಲತಾಣದಲ್ಲಿ ಪ್ರಕಟಿಸಲು ಸಂಪರ್ಕಿಸಿ-9916284048