ಗೂಳಿ ಕಾಳಗದಲ್ಲಿ ಬೈಕ್‍ಗೆ ಹಾನಿ
ಕುಂದಾಪುರ:ಗಂಗೊಳ್ಳಿ ಮ್ಯಾಂಗನೀಸ್ ರೋಡ್ ಬಸ್ಟ್ಯಾಂಡ್ ಬಳಿ ಗೂಳಿಗಳ ನಡುವೆ ನಡೆದ ಕಾಳಗದಲ್ಲಿ ರಸ್ತೆ ಬದಿಯಲ್ಲಿ ನಿಲ್ಲಿಸಿದ ಬೈಕ್‍ಗೆ ಹಾನಿಯಾದ ಘಟನೆ ಬುಧವಾರ ನಡೆದಿದೆ.ಮದವೇರಿದ ಗೂಳಿಗಳೆರಡು ಹಲವಾರು ಗಂಟೆಗಳಿಂದ ಎಡಬಿಡದೆ ಪರಸ್ಪರ ಕಾಳಗವನ್ನು ನಡೆಸುತ್ತಿದ್ದವು.ಸ್ಥಳೀಯರು ಗೂಳಿಗಳ ಮೇಲೆ ಪೈಪ್ ಮೂಲಕ ನೀರನ್ನು ಹಾಯಿಸಿದರು ಗೂಳಿಗಳ ಮೈಗೆ ತಂಪೆರಲೆ ಇಲ್ಲಾ.ಗೂಳಿಗಳು ಹೊಯ್ದಾಟ ಮಾಡುತ್ತಾ ರಸ್ತೆ ಬದಿಯಲ್ಲಿ ನಿಲ್ಲಿಸಿದ ಬೈಕ್ ಗುದ್ದಿವೆ.ಗೂಳಿಗಳ ನಡುವೆ ನಡೆದ ಕಾದಾಟದಲ್ಲಿ ಬೈಕ್ ಮುಂಭಾಗ ಸಂಪೂರ್ಣ ನಜ್ಜುಗುಜ್ಜಾಗಿದೆ.