ಸಂತೋಷ್ ಕುಮಾರ್ ಶೆಟ್ಟಿ ಹಕ್ಲಾಡಿ ಅಧ್ಯಕ್ಷರಾಗಿ,ಶರತ್ ಕುಮಾರ್ ಶೆಟ್ಟಿ ಬಾಳಿಕೆರೆ ಉಪಾಧ್ಯಕ್ಷರಾಗಿ ಆಯ್ಕೆ

Share

ಕುಂದಾಪುರ:28 ಲಕ್ಷ.ರೂ ನಷ್ಟದಲ್ಲಿದ್ದ ವ್ಯವಹಾರವನ್ನು 1.50 ಕೋಟಿ.ರೂ ಲಾಭಕ್ಕೆ ತರಲಾಗಿದ್ದು.ರೈತರು ಗ್ರಾಹಕರಿಗೆ ಉತ್ತಮ ಸೇವೆಯನ್ನು ನೀಡುವುದರ ಮೂಲಕ ಜನಸ್ನೇಹಿ ಸಂಸ್ಥೆಯನ್ನಾಗಿ ರೂಪಿಸುವಲ್ಲಿ ಕೆಲಸ ಮಾಡಲಾಗುವುದು ಎಂದು ಹೆಮ್ಮಾಡಿ ಪಂಚಗಂಗಾ ರೈತರ ಸೇವಾ ಸಹಕಾರಿ ಸಂಘದ ನೂತನ ಅಧ್ಯಕ್ಷ ಸಂತೋಷ್ ಕುಮಾರ್ ಶೆಟ್ಟಿ ಹಕ್ಲಾಡಿ ಹೇಳಿದರು.
ಪಂಚಗಂಗಾ ರೈತರ ಸೇವಾ ಸಹಕಾರಿ ಸಂಘ ಹೆಮ್ಮಾಡಿ ಪ್ರಧಾನ ಕಛೇರಿಯಲ್ಲಿ ಬುಧವಾರ ನಡೆದ ನೂತನ ಆಡಳಿತ ಮಂಡಳಿಯ ಪದಾಧಿಕಾರಿಗಳ ಆಯ್ಕೆ ಪ್ರಕ್ರಿಯೆ ಸಭೆಯಲ್ಲಿ ಅವರು ಮಾತನಾಡಿದರು.
ಉಪಾಧ್ಯಕ್ಷ ಶರತ್ ಕುಮಾರ್ ಶೆಟ್ಟಿ ಬಾಳಿಕೆರೆ ಮಾತನಾಡಿ,ಹಿಂದಿನ ಅವಧಿಯಲ್ಲಿ ಉತ್ತಮ ರೀತಿಯಲ್ಲಿ ಕೆಲಸ ಕಾರ್ಯಗಳನ್ನು ಮಾಡಿದ್ದರಿಂದ ಸಂಘದ ಚುನಾವಣೆಯಲ್ಲಿ 13 ಸ್ಥಾನಗಳನ್ನು ಗೆಲ್ಲಲು ಸಾಧ್ಯವಾಗಿದೆ ಎಂದು ಅಭಿಪ್ರಾಯಪಟ್ಟರು.ಮಾಜಿ ಶಾಸಕ ಕೆ.ಗೋಪಾಲ ಪೂಜಾರಿ ಶುಭಹಾರೈಸಿದರು.
ಸಂಘದ ನಿರ್ದೇಶಕರಾಗಿ ಆಯ್ಕೆಗೊಂಡಿರುವ ಚಂದ್ರ ಪೂಜಾರಿ ಹೊಳ್ಮಗೆ,ಆನಂದ ಬಿಲ್ಲವ,ತಮ್ಮಯ್ಯ ದೇವಾಡಿಗ,ಚಂದ್ರ ಎಸ್ ನಾಯ್ಕ,ಸುಧಾಕರ ಎನ್ ದೇವಾಡಿಗ,ರಾಘವೇಂದ್ರ ಪೂಜಾರಿ,ಸಂಜೀವ ಹಕ್ಲಾಡಿ,ಚಂದ್ರಮತಿ ಹೆಗ್ಡೆ,ಸುನೀತಾ ಪೂಜಾರಿ,ಶಾರದ,ಸಂತೋಷ ಕುಮಾರ ಶೆಟ್ಟಿ ತೋಟಬೈಲು ಅವರನ್ನು ಅಭಿನಂದಿಸಲಾಯಿತು.ದ.ಕ ಜಿಲ್ಲಾ ಬ್ಯಾಂಕ್ ನಿರ್ದೇಶಕ ಮಹೇಶ್ ಹೆಗ್ಡೆ,ವಂಡ್ಸೆ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಗುಡಿಮನೆ ಪ್ರದೀಪ ಕುಮಾರ್ ಶೆಟ್ಟಿ,ಕುಂದಾಪುರ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಕಾನಮಕ್ಕಿ ಹರಿಪ್ರಸಾದ್ ಶೆಟ್ಟಿ, ಮಾಜಿ ಜಿ.ಪಂ ಸದಸ್ಯ ಅನಂತ ಮೊವಾಡಿ ಹಾಗೂ ಕಾಂಗ್ರೆಸ್ ಪಕ್ಷದ ಮುಖಂಡರುಗಳು ಉಪಸ್ಥಿತರಿದ್ದರು.ಸಂಘದ ಸಿಇಒ ಸುರೇಶ್ ಕುಮಾರ್ ಸ್ವಾಗತಿಸಿದರು.ಪತ್ರಕರ್ತ ಸುಬ್ರಹ್ಮಣ್ಯ ಪಡುಕೋಣೆ ನಿರೂಪಿಸಿದರು.ಚುನಾವಣಾ ಅಧಿಕಾರಿ ಸುಮಿತ್ರಾ ಹಾಜರಿದ್ದರು.

Advertisement

Share

Leave a comment

Your email address will not be published. Required fields are marked *

You cannot copy content of this page