ಬ್ರಹ್ಮಾವರ ವಿದ್ಯಾ ಲಕ್ಷ್ಮೀ ಸಮೂಹ ಶಿಕ್ಷಣ ಸಂಸ್ಥೆಯಲ್ಲಿ ಕ್ರಿಸ್ಮಸ್ ಆಚರಣೆ



ಕುಂದಾಪುರ:ಸಂಸ್ಕೃತಿ, ಸಂಪ್ರದಾಯ,ಆಚರಣೆಯ ಕುರಿತು ಅಭಿಮಾನವನ್ನು ಹೊಂದಿರುವ ಹೆಮ್ಮೆಯ ವಿದ್ಯಾಲಕ್ಷ್ಮೀ ಸಮೂಹ ಶಿಕ್ಷಣ ಸಂಸ್ಥೆ ಬ್ರಹ್ಮಾವರದಲ್ಲಿ ಸಂಭ್ರಮದಿಂದ ಕ್ರಿಸ್ಮಸ್ ಹಬ್ಬವನ್ನು ಆಚರಿಸಲಾಯಿತು. ಉಪನ್ಯಾಸಕರೆಲ್ಲ ಸೇರಿಕೊಂಡು ಕ್ರಿಸ್ಮಸ್ ಹಬ್ಬದ ತಯಾರಿಯನ್ನು ನಡೆಸಿ,ಸೀಕ್ರೆಟ್ ಸಾಂತ ಎನ್ನುವ ಸ್ಪರ್ಧೆಯನ್ನು ನಡೆಸಿ ವಿವಿಧ ಉಡುಗೊರೆಯನ್ನು ನೀಡಲಾಯಿತು. ಸಂಸ್ಥಾಪಕರಾದ ಸುಬ್ರಹ್ಮಣ್ಯ ಹಾಗೂ ಕಾಲೇಜಿನ ನಿರ್ದೇಶಕಿ ಮಮತಾ, ಉಪಪ್ರಾಂಶುಪಾಲರಾದ
ಶ್ರೀಮತಿ ಸುಜಾತ ಹಾಗೂ ಎಲ್ಲಾ ಉಪನ್ಯಾಸಕರು ಹಾಗೂ ಉಪನ್ಯಾಸಕೇತರರು ಉಪಸ್ಥಿತರಿದ್ದರು.































































































































































































































































































































































































































































































































































































































































































































































































































































































































































































































































































































































































































































































































































































































































































