ಕಿರಿಮಂಜೇಶ್ವರ:ಸಮುದ್ರದಲ್ಲಿ ಈಜಲು ತೆರಳಿದ್ದ ಮೂವರು ವಿದ್ಯಾರ್ಥಿಗಳು ನೀರಿನಲ್ಲಿ ಮುಳುಗಿ ಸಾವು

ಕುಂದಾಪುರ:ಬೈಂದೂರು ತಾಲೂಕಿನ ಕಿರಿಮಂಜೇಶ್ವರ ಗ್ರಾಮದ ಹೊಸಹಿತ್ಲು ಸಮೀಪ ಸಮುದ್ರದಲ್ಲಿ ಈಜಲು ಹೋಗಿದ್ದ ನಾಲ್ವರು ವಿದ್ಯಾರ್ಥಿಗಳ ಪೈಕಿ ಮೂವರು ವಿದ್ಯಾರ್ಥಿಗಳು ಸಮುದ್ರ ಅಲೆಗಳ ಸೆಳೆತಕ್ಕೆ ಸಿಲುಕಿ ನೀರಿನಲ್ಲಿ ಮುಳುಗಿ ಸಾವನ್ನಪ್ಪಿರುವ ದಾರುಣ ಘಟನೆ ಮಂಗಳವಾರ ನಡೆದಿದೆ.ದುರ್ಘಟನೆಯಲ್ಲಿ ಓರ್ವ ವಿದ್ಯಾರ್ಥಿ ಪಾರಾಗಿದ್ದಾನೆ.
ಹೊಸಹಿತ್ಲು ನುಕ್ಕಿತಾರು ಉದಯ ದೇವಾಡಿಗ ಅವರ ಪುತ್ರ ಆಶಿಶ್ ದೇವಾಡಿಗ,ಹೊಸಹಿತ್ಲು ನುಕ್ಕಿತಾರು ಮಾರುತಿ ಪೂಜಾರಿ ಅವರ ಪುತ್ರ ಸೂರಜ್ ಪೂಜಾರಿ,ಹೊಸಹಿತ್ಲು ನುಕ್ಕಿತಾರು ಸುದಾಕರ ದೇವಾಡಿಗ ಅವರ ಪುತ್ರ ಸಂಕೇತ್ ದೇವಾಡಿಗ ಮೃತಪಟ್ಟಿರುವ ವಿದ್ಯಾರ್ಥಿಗಳಾಗಿದ್ದಾರೆ.ಮಂಗಳವಾರ 5.30 ರ ಸುಮಾರಿಗೆ ನಾಲ್ವರು ವಿದ್ಯಾರ್ಥಿಗಳು ಜತೆಗೂಡಿ ಸಮುದ್ರಲ್ಲಿ ಈಜಲು ತೆರಳಿದ್ದರು.ಸಮುದ್ರ ಅಲೆಗಳ ಸೆಳೆತಕ್ಕೆ ಸಿಲುಕಿದ ನಾಲ್ವರ ವಿದ್ಯಾರ್ಥಿಗಳ ಪೈಕಿ ಮೂವರು ವಿದ್ಯಾರ್ಥಿಗಳು ನೀರಿನಲ್ಲಿ ಮುಳುಗಿ ನಾಪತ್ತೆಯಾಗಿದ್ದರು.ಸ್ಥಳೀಯ ಮೀನುಗಾರರು ಸಮುದ್ರದಲ್ಲಿ ನಾಪತ್ತೆಯಾಗಿದ್ದ ಮೂವರು ವಿದ್ಯಾರ್ಥಿಗಳ ಮೃತ ದೇಹವನ್ನು ಪತ್ತೆಹಚ್ಚಿ ದಡಕ್ಕೆ ತರಲು ನೆರವಾದರು.ವಿದ್ಯಾರ್ಥಿಗಳ ಅಗಲುವಿಕೆಯಿಂದ ಇಡಿ ಗ್ರಾಮ ಶೋಕತಪ್ತಗೊಂಡಿದೆ.