ಬೈಂದೂರು ಅರ್ಬನ್ ಸೌಹಾರ್ದ ಕ್ರೆಡಿಟ್ ಕೋ ಆಪರೇಟಿವ್ ಸೊಸೈಟಿ ಸಭೆ:8% ಡಿವಿಡೆಂಡ್ ಘೋಷಣೆ
ಕುಂದಾಪುರ:ಬೈಂದೂರು ಅರ್ಬನ್ ಸೌಹಾರ್ದಾ ಕ್ರೆಡಿಟ್ ಕೋ ಆಪರೇಟಿವ್ ಸೊಸೈಟಿಯ ಸಭೆ ಸಂಘದ ಅಧ್ಯಕ್ಷರಾದ ಮಣಿಕಂಠ ಎಸ್ ದೇವಾಡಿಗ ಅವರ ಅಧ್ಯಕ್ಷತೆಯಲ್ಲಿ ನಡೆಯಿತು.
ಸಂಘದ ಸದಸ್ಯರ ಮಕ್ಕಳಿಗೆ ವಿದ್ಯಾರ್ಥಿ ವೇತನ ವಿತರಣೆ.ಬೈಂದೂರು ಸರಕಾರಿ ಪದವಿ ಪೂರ್ವ ಕಾಲೀಜಿಗೆ ಶೈಕ್ಷಣಿಕ ಸಹಾಯ ಧನ ವಿತರಣೆ.ನಿವೃತ್ತ ಸರಕಾರಿ ಉದ್ಯೋಗಿಗಳಿಗೆ ಸನ್ಮಾನ.
ಸಾಧನೆಗೈದಿರುವ ಸಂಘದ ಸ್ವ ಸಹಾಯ ಸಂಘದ ಸದಸ್ಯರಿಗೆ ವಿಶೇಷ ಬಹುಮಾನಗಳನ್ನು ನೀಡುತ್ತಾ ಬಂದಿರುವ ಸಂಘವು,
ಕೊರೊನಾ ಸಂದರ್ಭದಲ್ಲಿ ಅಶಕ್ತರಿಗೆ ಆಹಾರ ಕಿಟ್ ವಿತರಣೆ,ಅನಾರೋಗ್ಯ ಪೀಡಿತರಿಗೆ ಧನ ಸಹಾಯ ಹಸ್ತ, ಬೈಂದೂರೂ
ಪೊಲೀಸ್ ಠಾಣೆಗೆ ನಾಲ್ಕು ಬ್ಯಾರಿಕೇಡ್ ಕೊಡುಗೆ. ಮಾಡುವುದರ ಮುಖೇನ ಸಂಘವು ಸಾಮಾಜಿಕ ಕಾರ್ಯಗಳಿಗೆ ಹೆಚ್ಚಿನ ಒತ್ತನ್ನು ಕೊಟ್ಟು ಕೆಲಸ ಮಾಡಿಕೊಂಡು ಬರುತ್ತಿದೆ.ಸರಿಯಾದ ಸಮಯದಲ್ಲಿ ಸಾಲ ಮರುಪಾವತಿ ಮಾಡಿದವರಿಗೆ ಬಡ್ಡಿ ರಿಯಾತಿ,ಕಡಿಮೆ ಬಡ್ಡಿ ದರದಲ್ಲಿ ಸಾಲ,ಠೇವಣಿಗೆ ಅತ್ಯಾಕರ್ಷಕ ಬಡ್ಡಿ ಕೂಡ ನೀಡಲಾಗುತ್ತದೆ.ಅಡಿಟ್ ವಿಭಾಗದಲ್ಲಿ ಎ ದರ್ಜೆ ಸ್ಥಾನವನ್ನು ಸಂಘವು ಪಡೆದುಕೊಂಡಿದೆ.
ಲಾಭದ ಜೊತೆಗೆ ಸಾಮಾಜಿಕ ಕಳಕಳಿ ಹೊಂದಿರುವ ಸಂಸ್ಥೆ ಬಲಿಷ್ಠ ನಿರ್ದೇಶಕ ಮಂಡಳಿ ಹೊಂದಿದ್ದು.ಸಿಬ್ಬಂದಿಗಳು ಗ್ರಾಹಕರಿಗೆ ನಗು ಮೊಗದ ಸೇವೆಯನ್ನು ನೀಡುತ್ತಿದ್ದಾರೆ.ಇತ್ತೀಚಿನ ದಿನಗಳಲ್ಲಿ ಅತಿ ವೇಗವಾಗಿ ಬೆಳೆಯುತ್ತಿರುವ ಉಡುಪಿ ಜಿಲ್ಲೆಯ ಸಂಸ್ಥೆಗಳಲ್ಲಿ ಒಂದಾಗಿದೆ.
ಸಂಘದ ಅಧ್ಯಕ್ಷ ಮಣಿಕಂಠ ದೇವಾಡಿಗ ಅವರು ಸಭೆ ಅಧ್ಯಕ್ಷತೆ ವಹಿಸಿ ಮಾತನಾಡಿ,ನಮ್ಮ ಸಂಘದ ನಿರ್ದೇಶಕ ಮಂಡಳಿ ಮತ್ತು ಸದಸ್ಯರ ಸಹಕಾರದಿಂದ ಮೂರನೇ ಆರ್ಥಿಕ ವರ್ಷದಲ್ಲಿ ನಿರೀಕ್ಷೆಗೂ ಮಿರಿ ಅಭಿವೃದ್ಧಿಯನ್ನು ಹೊಂದಿದ್ದು ಲಾಭಾಂಶದಲ್ಲಿ ಸದಸ್ಯರಿಗೆ 8% ಡಿವಿಡೆಂಡ್ ನೀಡಲು ತಿರ್ಮಾನಿಸಲಾಗಿದೆ ಎಂದು ಹೇಳಿದರು.ಸಂಘದ ನಿರ್ದೇಶಕ ಮಂಡಳಿಯ ಸಹಕಾರ, ಉತ್ತಮ ಸಿಬ್ಬಂದಿ ವರ್ಗದಿಂದ ಸಂಘದ ಮುಂದಿನ ಬೆಳವಣಿಗೆಗೆ ಎಲ್ಲರೂ ಸಹಕಾರ ನೀಡಬೇಕೆಂದು ಕೇಳಿಕೊಂಡರು.
ಉಪಾಧ್ಯಕ್ಷ ಮಂಜುನಾಥ ಪೂಜಾರಿ ತಗ್ಗರ್ಸೆ, ನಿರ್ದೇಶಕರುಗಳಾದ ಪ್ರಸಾದ್ ಪ್ರಭು,ನರೇಂದ್ರ ಶೇಟ್, ಮೊಹ್ಮದ್ ಅಶ್ರಫ್,ಮಾಣಿಕ್ಯ ಹೋಬಳಿದಾರ್,ಹೆಚ್ ಸುರೇಶ್ ಶೆಟ್ಟಿ,ರಾಜು.ಕೆ ಮೊಗವೀರ, ಸವಿತಾ ದಿನೇಶ್ ಗಾಣಿಗ, ಗಿರೀಶ ಗಾಣಿಗಪ್ರೇಮಾ ವಿ ಶೆಟ್ಟಿ,ನಾಗಮ್ಮ ಲಕ್ಷ್ಮಣ ಕೊರಗ, ದೀಪಿಕಾ ಆಚಾರ್ಯ ಉಪಸ್ಥಿತರಿದ್ದರು.