ಬೃಹತ್ ಆರೋಗ್ಯ ತಪಾಸಣಾ ಶಿಬಿರ ಉದ್ಘಾಟನೆ

Share

Advertisement
Advertisement
https://youtu.be/pBXdk9RZ9kw
(ಬೃಹತ್ ಆರೋಗ್ಯ ತಪಾಸಣಾ ಶಿಬಿರವನ್ನು ಸಹಾಯಕ ಕಮಿಷನರ್ ರಶ್ಮೀ ಎಸ್.ಆರ್ ಉದ್ಘಾಟಿಸಿದರು)

ಕುಂದಾಪುರ:ನವೋದಯ ಗ್ರಾಮ ವಿಕಾಸ ಚಾರಿಟೇಬಲ್ ಟ್ರಸ್ಟ್ ಮಂಗಳೂರು,ಮರವಂತೆ ಬಡಾಕೆರೆ ವ್ಯವಸಾಯ ಸೇವಾ ಸಹಕಾರಿ ಸಂಘ ನಾವುಂದ ಮತ್ತು ಆದರ್ಶ ಆಸ್ಪತ್ರೆ ಉಡುಪಿ ಅವರ ಸಂಯುಕ್ತ ಆಶ್ರಯದಲ್ಲಿ ಬೃಹತ್ ಆರೋಗ್ಯ ತಪಾಸಣಾ ಶಿಬಿರ ಸರಕಾರಿ ಹಿರಿಯ ಪ್ರಾಥಮಿಕ ನಾವುಂದ ಶಾಲೆಯಲ್ಲಿ ಭಾನುವಾರ ನಡೆಯಿತು.ಸವಿರಾರು ಜನರು ಆರೋಗ್ಯ ತಪಾಸಣಾ ಕಾರ್ಯಕ್ರಮದಲ್ಲಿ ಭಾಗವಹಿಸಿ ವೈದ್ಯಕೀಯ ತಪಾಸಣೆಯನ್ನು ಮಾಡಿಸಿಕೊಂಡರು.25ಕ್ಕೂ ಅಧಿಕ ನುರಿತ ವೈದ್ಯರು ಆರೋಗ್ಯ ತಪಾಸಣಾ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.
ಸಹಾಯಕ ಕಮಿಷನರ್ ರಶ್ಮೀ ಎಸ್.ಆರ್ ವೈದ್ಯಕೀಯ ತಪಾಸಣಾ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿ,ನಮ್ಮ ಜೀವನ ಶೈಲಿಯಲ್ಲಿ ಆಗಿರುವ ಬದಲಾವಣೆಯಿಂದ ನಾವುಗಳು ಇಂದು ಆರೋಗ್ಯ ದಾಸರಾಗಿ ಪರಿವರ್ತನೆ ಗೊಳ್ಳುತ್ತಿದ್ದೇವೆ.ಚಿನ್ನಾಭರಣ,ಆಸ್ತಿ ಸಂಪಾದನೆಗಿಂತಲೂ ಆಧುನಿಕ ಪ್ರಪಂಚದಲ್ಲಿ ಆರೋಗ್ಯವನ್ನು ಕಾಪಾಡಿಕೊಳ್ಳುವುದು ಅತಿ ಮುಖ್ಯವಾಗಿದೆ.ಗ್ರಾಮೀಣ ಪ್ರದೇಶದ ಜನರಿಗೆ ಉಪಯೋಗಕರವಾಗಿರುವ ಇಂತಹ ಆರೋಗ್ಯ ಶಿಬಿರಗಳು ಹಳ್ಳಿ ಹಳ್ಳಿಗಳಲ್ಲಿ ಹೆಚ್ಚು ಹೆಚ್ಚು ನಡೆಯಬೇಕು ಎಂದು ಹೇಳಿದರು.

Advertisement

ಮರವಂತೆ ಬಡಾಕೆರೆ ವ್ಯವಸಾಯ ಸೇವಾ ಸಹಕಾರಿ ಸಂಘ ನಾವುಂದ ಅಧ್ಯಕ್ಷ ಎಸ್.ರಾಜು ಪೂಜಾರಿ ಅಧ್ಯಕ್ಷತೆ ವಹಿಸಿ ಮಾತನಾಡಿ,ಇತ್ತಿಚೀನ ದಿನಗಳಲ್ಲಿ ಯುವಜನತೆ ನಾನಾ ಕಾಯಿಲೆಗಳಿಗೆ ತುತ್ತಾಗಿ ಸಾವನ್ನಪ್ಪುತ್ತಿರುವ ಸಂಗತಿಯನ್ನು ನಾವು ಗಮನಿಸಬಹುದಾಗಿದೆ.ಆರೋಗ್ಯದ ಬಗ್ಗೆ ಹೆಚ್ಚಿನ ಕಾಳಜಿಯನ್ನು ವಹಿಸಬೇಕಾದ ಅವಶ್ಯಕತೆ ಇದ್ದು ನಿಯಮಿತವಾಗಿ ಆರೋಗ್ಯ ತಪಾಸಣೆಯನ್ನು ಮಾಡಿಕೊಳ್ಳುವುದರಿಂದ ಪ್ರಾಥಮಿಕ ಹಂತದಲ್ಲೇ ಕಾಯಿಲೆಗಳನ್ನು ಗುರುತಿಸಲು ಸಹಕಾರಿ ಆಗುತ್ತದೆ ಎಂದರು.ಉತ್ತಮ ಆರೋಗ್ಯವನ್ನು ಪಡೆಯದೆ ಇದ್ದರೆ ಜೀವನದಲ್ಲಿ ಒಳ್ಳೆ ಅನುಭವಗಳನ್ನು ಅನುಭವಿಸಲು ಸಾಧ್ಯವಿಲ್ಲ ಎಂದು ಹೇಳಿದರು.
ಜನರ ಆರೋಗ್ಯದ ಬಗ್ಗೆ ಸರಕಾರ,ಅಧಿಕಾರಿಗಳು,ಸಂಘ ಸಂಸ್ಥೆಗಳು ವಿಶೇಷವಾದ ಕಾಳಜಿ ವಹಿಸಬೇಕಾದ ಅಗತ್ಯತೆ ಇದೆ ಎಂದು ಅಭಿಪ್ರಾಯಪಟ್ಟರು.ಸಾರ್ವಜನಿಕರಿಗೆ ಅನುಕೂಲವಾಗುವ ಉದ್ದೇಶದಿಂದ ಇವೊಂದು ಆರೋಗ್ಯ ಶಿಬಿರವನ್ನು ಆಯೋಜನೆ ಮಾಡಲಾಗಿದೆ ಎಂದರು.

ಆದರ್ಶ ಆಸ್ಪತ್ರೆ ಎಂ.ಡಿ ಹಿರಿಯ ವೈದ್ಯರಾದ ಡಾ.ಜಿ.ಎಸ್ ಚಂದ್ರಶೇಖರ ಮಾತನಾಡಿ,ಬೊಜ್ಜಿನ ಸಮಸ್ಯೆ ಯಿಂದಲೆ ಇಂದು ನಾವು ಕಾಯಿಲೆಗಳಿಗೆ ತುತ್ತಾಗುತ್ತಿದ್ದೇವೆ,ಬೇಕರಿಗೆ ತಿಂಡಿ ತಿನಿಸುಗಳಿಗೆ ಹೆಚ್ಚಿನ ಆದ್ಯತೆ ನೀಡದೆ ಮನೆಯಲ್ಲಿ ತಯಾರಿಸಿದ ಆಹಾರ ಸೇವನೆ ಮಾಡುವುದು ಮುಖ್ಯವಾಗಿದೆ ಎಂದರು.ಆದರ್ಶನ ಜೀವನ ನಡೆಸುವುದರಿಂದ ಕಾಯಿಲೆಗಳಿಂದ ದೂರ ಉಳಿಯಬಹುದಾಗಿದೆ ಎಂದು ಹೇಳಿದರು.
ಹಿರಿಯ ನರರೋಗ ತಜ್ಞ ಎ.ರಾಜಾ,ನವೋದಯ ಗ್ರಾಮ ವಿಕಾಸ ಚಾರಿಟೇಬಲ್ ಟ್ರಸ್ಟ್ ಮಂಗಳೂರು ಸಿ.ಇ.ಒ ಪೂರ್ಣಿಮಾ,ಬೈಂದೂರು ತಹಶೀಲ್ದಾರ್ ಪ್ರದೀಪ,ನಾವುಂದ ಪಂಚಾಯಿತಿ ಅಧ್ಯಕ್ಷ ನರಸಿಂಹ ದೇವಾಡಿಗ,ನಾವುಂದ ಶಾಲೆ ಎಸ್‍ಡಿಎಂಸಿ ಅಧ್ಯಕ್ಷ ಚಂದ್ರ ಖಾರ್ವಿ ಮತ್ತು ಮುಖ್ಯೋಪಾಧ್ಯಾಯರಾದ ಶಂಕರ,ಜಿಲ್ಲಾ ಬ್ಯಾಂಕ್ ಪ್ರತಿನಿಧಿ.ಎಂ ವಿನಾಯಕ ರಾವ್ ಮರವಂತೆ,ಬಡಾಕೆರೆ ವ್ಯವಸಾಯ ಸೇವಾ ಸಹಕಾರಿ ಸಂಘದ ಉಪಾಧ್ಯಕ್ಷ ಚಂದ್ರಶೀಲ ಶೆಟ್ಟಿ ಮತ್ತು ನಿರ್ದೇಶಕರಾದ ಜಗದೀಶ ಪಿ ಪೂಜಾರಿ,ವಾಸು ಪೂಜಾರಿ,ಭೋಜ ನಾಯ್ಕ್,ರಾಮಕೃಷ್ಣ ಖಾರ್ವಿ,ಪ್ರಕಾಶ ದೇವಾಡಿಗ,ಅಣ್ಣಪ್ಪ ಬಿಲ್ಲವ,ನಾರಾಯಣ ಶೆಟ್ಟಿ,ರಾಮ,ನಾಗಮ್ಮ,ಸರೋಜ.ಆರ್ ಗಾಣಿಗ,ಸಿ.ಇ.ಒ ಸುರೇಶ ಅಳ್ವೆಗದ್ದೆ ಹಾಗೂ ಸಿಬ್ಬಂದಿ ವರ್ಗದವರು,ನಾವೋದಯ ಪ್ರೇರಕರು,ಸದಸ್ಯರು ಉಪಸ್ಥಿತರಿದ್ದರು.ಎಸ್.ರಜು ಪೂಜಾರಿ ಸ್ವಾಗತಿಸಿದರು.ಪತ್ರಕರ್ತ ಸುಬ್ರಹ್ಮಣ್ಯ ಪಡುಕೋಣೆ ನಿರೂಪಿಸಿದರು.ನಾವೋದಯ ಟ್ರಸ್ಟ್ ಮೇಲ್ವಿಚಾರಕ ಹರಿನಾಥ್ ವಂದಿಸಿದರು.

Advertisement
Advertisement


Share

Leave a comment

Your email address will not be published. Required fields are marked *

You cannot copy content of this page