ಕುಬ್ಜ ನದಿಗೆ ಆಕಸ್ಮಿಕವಾಗಿ ಕಾಲು ಜಾರಿ ಬಿದ್ದು ಅರ್ಚಕ ಸಾವು
ಕುಂದಾಪುರ:ಕಮಲಶಿಲೆ ದೇವಸ್ಥಾನಕ್ಕೆ ಪೂಜೆಗೆ ತೆರಳುತ್ತಿದ್ದ ಸಂದರ್ಭ ತಪ್ಪಲು ಎಂಬಲ್ಲಿ ಸೇತುವೆ ದಾಟುತ್ತಿದ್ದಾಗ ಕಮಲಶಿಲೆ ದೇವಳದ ಅರ್ಚಕ ಶೇಷಾದ್ರಿ ಐತಾಳ್(75) ಎನ್ನುವವರು ಕುಬ್ಜ ನದಿಗೆ ಆಕಸ್ಮಿಕವಾಗಿ ಕಾಲು ಜಾರಿ ಬಿದ್ದು ನೀರಿನಲ್ಲಿ ಮುಳುಗಿ ಮೃತ ಘಟನೆ ನಡೆದಿದೆ.ಮುಳುಗು ತಜ್ಞ ಮಂಜುನಾಥ ಕನ್ನೇರಿ,ರಾಘವೇಂದ್ರ ಮೊಗವೀರ,ಕೌಶಿಕ್ ಶವವನ್ನು ಮೇಲೆಕ್ಕೆತ್ತಿದರು.
ಕಳೆದ ಮೂರು ದಿನಗಳಿಂದ ಕುಂದಾಪುರ ಭಾಗದಲ್ಲಿ ಧಾರಕಾರ ಮಳೆ ಸುರಿಯುತ್ತಿದ್ದರಿಂದ ಕುಬ್ಜ ನದಿಯಲ್ಲಿ ನೀರಿನ ಹರಿವು ಕೂಡ ಅಧಿಕವಾಗಿತ್ತು.
(ಸೇತುವೆ )