ಸರಕಾರಿ ಹಿರಿಯ ಪ್ರಾಥಮಿಕ ಯಳಜಿತ್ ಶಾಲೆಯಲ್ಲಿ 78ನೇ ವರ್ಷದ ಸ್ವಾತಂತ್ರ್ಯ ದಿನಾಚರಣೆ

ಬೈಂದೂರು:ಸರಕಾರಿ ಹಿರಿಯ ಪ್ರಾಥಮಿಕ ಯಳಜಿತ್ ಶಾಲೆಯಲ್ಲಿ 78ನೇ ವರ್ಷದ ಸ್ವಾತಂತ್ರ್ಯ ದಿನಾಚರಣೆ ಕಾರ್ಯಕ್ರಮ ಗುರುವಾರ ಅದ್ದೂರಿಯಾಗಿ ನಡೆಯಿತು.
ಶಾಲಾ ಎಸ್ ಡಿಎಂಸಿ ಅಧ್ಯಕ್ಷ ರವೀಂದ್ರ ಶೆಟ್ಟಿ ಧ್ವಜಾರೋಹಣ ನೆರವೇರಿಸಿದರು.
ವಿದ್ಯಾರ್ಥಿ ನಾಯಕ ಓಂ ಗಣೇಶ್ ನೇತೃತ್ವದ ತಂಡದಿಂದ ಮೆರವಣಿಗೆ,ನೃತ್ಯ ಮತ್ತು ಸಾಂಸ್ಕೃತಿಕ ಕಾರ್ಯಕ್ರಮ ಜರುಗಿತು.
ಸಭಾ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಶಾಲಾ ಎಸ್ ಡಿಎಂಸಿ ಅಧ್ಯಕ್ಷ ರವೀಂದ್ರ ಶೆಟ್ಟಿ ವಹಿಸಿದ್ದರು.ಶತಮಾನೋತ್ಸವ ಸಮಿತಿ ಅಧ್ಯಕ್ಷ ವಕೀಲರಾದ ಮಂಗೇಶ್ ಶಾನುಭಾಗ್,ಶಾಲಾ ಕಟ್ಟಡ ಸಮಿತಿ ಕಾರ್ಯಾಧ್ಯಕ್ಷ ಮಂಜಯ್ಯ ಪೂಜಾರಿ,ಅಧ್ಯಕ್ಷ ರಮೇಶ್ ಪೂಜಾರಿ,ಖಜಾಂಜಿ ಕೆ.ಎಂ ಕೊಠಾರಿ,ಸ್ಮರಣ ಸಂಚಿಕೆ ಸಮಿತಿ ಸಂಚಾಲಕ ನಾರಾಯಣ ಬಿಲ್ಲವ ಹೊನ್ನುಮನೆ, ಎಸ್ ಡಿಎಂಸಿ ಉಪಾಧ್ಯಕ್ಷೆ ಜ್ಯೋತಿ ಕೊಠಾರಿ,ಪಂಚಾಯಿತಿ ಸದಸ್ಯ ರಾಜೇಶ ಕೊಠಾರಿ,
ರೈತ ಸಂಘದ ಅಧ್ಯಕ್ಷ ದೀಪಕ್ ಕುಮಾರ್ ಶೆಟ್ಟಿ,ಎಸ್ ಡಿಎಂಸಿ ಸದಸ್ಯರು,ಪೋಷಕರು ಉಪಸ್ಥಿತರಿದ್ದರು.
ಶಾಲಾ ಶಿಕ್ಷಕ ಸದಾಶಿವ ಶೆಟ್ಟಿ ಪ್ರಧಾನ ಭಾಷಣ ನೆರವೇರಿಸಿದರು.ವಲಯ ಅರಣ್ಯಾಧಿಕಾರಿ ಮುಡುರ ಕೊಠಾರಿ ಬಹುಮಾನದ ಪ್ರಾಯೋಜಕತ್ವ ವಹಿಸಿದ್ದರು.
ಶಿಕ್ಷಕಿ ಅನಿತಾ ಕಾರ್ಯಕ್ರಮ ನಡೆಸಿಕೊಟ್ಟರು.ಶಿಕ್ಷಕಿ ಆಶಾ ಮತ್ತು ಕವಿತಾ ಬಹುಮಾನ ಪಟ್ಟಿ ವಾಚಿಸಿದರು.ಹಿರಿಯ ಶಿಕ್ಷಕಿ ಪಾರ್ವತಿ ವಂದಿಸಿದರು.