ನಾಗನಿಗೆ ಹಣ್ಣು ಕಾಯಿ,ತನು ಸೇವೆ ಅರ್ಪಿಸಿದ ಭಕ್ತರು

Share

Advertisement
Advertisement
Advertisement

ಕುಂದಾಪುರ:ಪರಶುರಾಮ ಸೃಷ್ಟಿಯ ನೆಲದಲ್ಲಿ ನಾಗನಿಗೆ ಅಗ್ರಸ್ಥಾನವಿದೆ.ನಾಗ ದೇವರ ಪೂಜೆ ಮಾಡಲು ಮಡಿ ಮೈಲಿಗೆ ಅತ್ಯವಶ್ಯಕ.ರಾಜ್ಯದ ಬೇರೆ ಬೇರೆ ಭಾಗದಲ್ಲಿ ನಾಗ ದೇವರ ಶಿಲೆಯನ್ನು ಮುಟ್ಟಿ ಪೂಜೆ ಮಾಡಿದರೆ.ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಬ್ರಾಹ್ಮಣರು ಬಿಟ್ಟರೆ ಬೇರೆ ಯಾವ ಜಾತಿಗೂ ನಾಗ ಶಿಲೆಯನ್ನು ಮುಟ್ಟಿ ಪೂಜೆ ಮಾಡುವುದು ನಿಷಿದ್ಧ.ಇಲ್ಲಿನ ಪ್ರತಿ ಕುಟುಂಬಕ್ಕೂ ಮೂಲ ನಾಗ ದೇವರಿದ್ದು ಸಂತಾನ ಕಾರಕನೆಂದೆ ಪೂಜಿಸಲಾಗುತ್ತದೆ.ನಾಗರ ಪಂಚಮಿ ಹಬ್ಬದ ದಿನದಂದು ಮೂಲ ನಾಗನಿಗೆ ಹಣ್ಣು ಕಾಯಿ ಸೇವೆ ನೀಡಿ ತನು ಹಾಕಲಾಗುತ್ತದೆ.ಇದು ಅನಾದಿ ಕಾಲದಿಂದಲೂ ನಡೆದು ಬಂದಂತಹ ಪದ್ದತಿ.
ನಾಗನಿಗೆ ತನು ಸೇವೆ ಅರ್ಪಣೆ ಮಾಡಲು ಸೀಯಾಳ ಬಾಳೆಹಣ್ಣು ಅವಶ್ಯಕವಾಗಿದ್ದು ಸೀಯಾಳ ಮತ್ತು ಬಾಳೆ ಹಣ್ಣಿನ ಬೆಲೆ ದುಬಾರಿ ಆಗಿದೆ.ಸಾಮಾನ್ಯವಾಗಿ ಮಳೆಗಾಲದಲ್ಲಿ ಸೀಯಾಳಕ್ಕೆ ಬೇಡಿಕೆ ಕಡಿಮೆ ಇರುತ್ತದೆ.ಆದರೂ ಸೀಯಾಳದ ಬೆಲೆ ಬೇಸಿಗೆ ತಿಂಗಳಿನಷ್ಟೆ ಇದೆ.ಮಾರುಕಟ್ಟೆಯಲ್ಲಿ ಸೀಯಾಳವನ್ನು 40 ರಿಂದ 50.ರೂ ವರೆಗೆ ಮಾರಾಟ ಮಾಡಲಾಗುತ್ತಿದೆ.ಬಾಳೆ ಹಣ್ಣು ಕೆ.ಜಿ ಒಂದರ ಬೆಲೆ 60 ರಿಂದ 70.ರೂ ಇದೆ.ಧಾರಕಾರವಾಗಿ ಮಳೆ ಸುರಿದಿದ್ದರು ಈ ಸಲ ಮಳೆಗಾಲದಲ್ಲಿ ಸೀಯಾಳದ ಬೆಲೆ ಇಳಿಕೆ ಆಗಿಲ್ಲ.ತೆಂಗು ಬೆಳೆ ಕೊರತೆ ಯಿಂದಾಗಿ ಸೀಯಾಳ ಪೂರೈಕೆಯಲ್ಲಿ ವ್ಯತ್ಯಾಸವಾಗಿದ್ದರಿಂದ ಬೆಲೆ ಮಳೆಗಾಲದಲ್ಲಿಯೂ ಇಳಿದಿಲ್ಲ ಎಂದು ಅಂಗಡಿ ಅವರು ಸೀಯಾಳ ದರದ ಬಗ್ಗೆ ತಮ್ಮ ಅಭಿಪ್ರಾಯವನ್ನು ಹಂಚಿಕೊಂಡಿದ್ದಾರೆ.ಹೂವಿನ ದರ ಸ್ವಲ್ಪ ಮಟ್ಟಿಕೆ ಕಡಿಮೆ ಇದ್ದರೂ,ಸೀಯಾಳ ಮತ್ತು ಬಾಳೆ ಹಣ್ಣಿನ ದರ ಭಕ್ತರ ಕೈಗೆ ಬಿಸಿ ಮುಟ್ಟಿಸಿದೆ.
ನಾಗನಿಗೆ ತನು ಸೇವೆ ಅರ್ಪಿಸಿದ ಭಕ್ತರು:ಶ್ರಾವಣ ಮಾಸದಲ್ಲಿ ಆಚರಣೆ ಮಾಡುವ ನಾಗರ ಪಂಚಮಿ ಹಬ್ಬ ಹಿಂದೂ ಬಾಂಧವರಿಗೆ ಪ್ರಮುಖವಾದ ಹಬ್ಬವಾಗಿದೆ.ದೇಶದ ನಾನಾ ಭಾಗದಲ್ಲಿ ನಾಗರ ಪಂಚಮಿ ಹಬ್ಬವನ್ನು ಶ್ರದ್ಧಾ ಭಕ್ತಿ ಸಂಭ್ರಮದಿಂದ ಆಚರಣೆ ಮಾಡಲಾಗುತ್ತದೆ.ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆಯ ಜನರಿಗೆ ನಾಗರ ಪಂಚಮಿ ಹಬ್ಬ ಎಷ್ಟು ಪ್ರಾಮೂಖ್ಯವೊ ಉತ್ತರ ಕನ್ನಡದ ಭಾಗದ ಜನರಿಗೂ ಅಷ್ಟೆ ಪ್ರಮುಖವಾದ ಹಬ್ಬವಾಗಿದೆ.
ನಾಗರ ಪಂಚಮಿ ಹಬ್ಬ ಸನಿಹಾಕ,ಅಣ್ಣ ಬರಲಿಲ್ಲಾ ಇನ್ನೂ ಕರಿಲಾಕಾ ಎಂಬ ಜಾನಪದ ಹಾಡು ಬಹಳಷ್ಟು ಜನಪ್ರೀತಿ ಗಳಿಸಿದೆ.ಈ ಜಾನಪದ ಹಾಡು ಉತ್ತರ ಕನ್ನಡದಲ್ಲಿ ಆಚರಿಸಲ್ಪಡುವ ಪಂಚಮಿ ಹಬ್ಬದ ಮಹತ್ವವನ್ನು ಸಾರಿ ಹೇಳುತ್ತದೆ.ಆಷಾಢ ಮಾಸ ಮುಗಿದು ಶ್ರಾವಣ ಮಾಸ ಕಾಲಿಡುತ್ತಲೆ ಹಬ್ಬಗಳ ಸರಣಿ ಆರಂಭಗೊಳ್ಳುತ್ತದೆ.

Advertisement

@ಜಗದೀಶ ದೇವಾಡಿಗ ಮುಳ್ಳಿಕಟ್ಟೆ

Advertisement
Advertisement


Share

Leave a comment

Your email address will not be published. Required fields are marked *

You cannot copy content of this page