ಬೈಂದೂರು:ಸರಕಾರಿ ಹಿರಿಯ ಪ್ರಾಥಮಿಕ ನಾವುಂದ ಶಾಲೆ ವಾರ್ಷಿಕೋತ್ಸವ
ಬೈಂದೂರು:ಸರಕಾರಿ ಹಿರಿಯ ಪ್ರಾಥಮಿಕ ನಾವುಂದ ಶಾಲೆಯ ವಾರ್ಷಿಕೋತ್ಸವ ಕಾರ್ಯಕ್ರಮ ಶಾಲಾ ವಠಾರದಲ್ಲಿ ಶನಿವಾರ ನಡೆಯಿತು.ಶಾಲಾ ವಾರ್ಷಿಕೋತ್ಸವ ಕಾರ್ಯಕ್ರಮದ ಅಂಗವಾಗಿ ವಿದ್ಯಾರ್ಥಿಗಳಿಂದ ವೈವಿಧ್ಯಮ ಮನೋರಂಜನ ಮತ್ತು ನೃತ್ಯ ಕಾರ್ಯಕ್ರಮ ಹಾಗೂ ವೀರ ಅಭಿಮನ್ಯು ಎಂಬ ಯಕ್ಷಗಾನ ಪ್ರದರ್ಶನ ಜರುಗಿತು.ಪ್ರತಿಭಾನ್ವಿತ ವಿದ್ಯಾರ್ಥಿಗಳನ್ನು ಗೌರವಿಸಲಾಯಿತು.ಕಲಿಕಾ ಬಹುಮಾನ ವಿತರಿಸಲಾಯಿತು.
ಬೈಂದೂರು ಕ್ಷೇತ್ರದ ಶಾಸಕ ಗುರುರಾಜ ಗಂಟಿಹೊಳೆ ಮಾತನಾಡಿ,ಸರಕಾರಿ ಶಾಲೆಗಳಲ್ಲಿ ಓದಿದ ಬಹಳಷ್ಟು ಮಂದಿ ಇಂದು ಉನ್ನತ ಹುದ್ದೆಗಳನ್ನು ಪಡೆದು ಜನ ಸೇವೆಯೊಂದಿಗೆ ಉತ್ತಮವಾದ ಹೆಸರನ್ನು ಗಳಿಸಿದ್ದಾರೆ.ಆಧುನಿಕ ಯುಗದಲ್ಲಿ ಸಂಸ್ಕಾರಯುತ ಶಿಕ್ಷಣ ಎನ್ನುವುದು ಇಂದಿನ ಪೀಳಿಗೆಗೆ ಅತ್ಯವಶ್ಯಕವಾಗಿದ್ದು ಮಕ್ಕಳು ಅನ್ಯ ಚಟುವಟಿಕೆಗಳತ್ತ ವಾಲದಂತೆ ನೋಡಿಕೊಳ್ಳುವ ಜವಾಬ್ದಾರಿ ಹೆತ್ತವರ ಮೇಲಿದೆ ಎಂದು ಹೇಳಿದರು.ಶಾಲಾ ಶಿಕ್ಷಕರು,ಹಳೆ ವಿದ್ಯಾರ್ಥಿ ಸಂಘ ಹಾಗೂ ಎಸ್ಡಿಎಂಸಿ ಅವರ ಶ್ರಮದಿಂದ ಬೈಂದೂರು ಕ್ಷೇತ್ರದಲ್ಲಿ ಇದೊಂದು ಮಾದರಿ ಶಾಲೆಯಾಗಿ ಗುರುತಿಸಿಕೊಂಡಿದ್ದಾರೆ ಎಂದರು.
ನಾವುಂದ ಗ್ರಾಮ ಪಂಚಾಯತ್ ಅಧ್ಯಕ್ಷ ನರಸಿಂಹ ದೇವಾಡಿಗ ಅವರು ಸಭಾ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿ,ಸಮುದ್ರ ತೀರ ಮತ್ತು ರಾಷ್ಟ್ರೀಯ ಹೆದ್ದಾರಿ ಪಕ್ಕದಲ್ಲಿ ಕಂಗೊಳಿಸುತ್ತಿರುವ ನಾವುಂದ ಶಾಲೆ ಸೌಂದರ್ಯಕ್ಕೂ ಮಾತ್ರವಲ್ಲದೆ ಶೈಕ್ಷಣಿಕ ಚಟುವಟಿಕೆಯಲ್ಲಿಯೂ ಹೆಸರುವಾಸಿಯಾದ ಶಾಲೆ ಆಗಿದೆ.ಶಾಲೆಯ ಅಭಿವೃದ್ಧಿಗೆ ಪಂಚಾಯತ್ ಮಟ್ಟದಲ್ಲಿ ಸಂಪೂರ್ಣವಾಗಿ ಸಹಕಾರವನ್ನು ನೀಡಲಾಗಿದ್ದು,ಸಮುದಾಯದ ಭಾಗವಹಿಸುವಿಕೆ ಕೂಡ ಅತ್ಯಂತ ಮಹತ್ವದಾಗಿದೆ ಎಂದರು.
ಶಾಲೆಯ ಹಳೆ ವಿದ್ಯಾರ್ಥಿ ಸಂಘದ ಅಧ್ಯಕ್ಷ ಅಡ್ವಕೇಟ್ ವೆಂಕಟೇಶ ನಾವುಂದ ಮಾತನಾಡಿ,ಹಳೆ ವಿದ್ಯಾರ್ಥಿ ಸಂಘದಿಂದ ಬಹಳಷ್ಟು ಅಭಿವೃದ್ಧಿ ಕಾರ್ಯಗಳನ್ನು ಕೈಗೊಳ್ಳಲಾಗಿದ್ದು.ವಿದ್ಯಾರ್ಥಿಗಳ ಸಂಖ್ಯೆ ಹೆಚ್ಚಳಕ್ಕೂ ಕ್ರಮ ಕೈಗೊಳ್ಳಲಾಗಿದೆ ಎಂದರು.ನಮ್ಮ ಶಾಲೆಯಲ್ಲಿ ಕಲಿತ ಹಳೆ ವಿದ್ಯಾರ್ಥಿಗಳು ಕಮಿಷನರ್ ನಂತಹ ಹುದ್ದೆಯನ್ನು ಅಲಂಕರಿಸುವುದರ ಜತೆಗೆ ಅನೇಕ ರೀತಿಯ ಉನ್ನತ ಹುದ್ದೆಗಳಲ್ಲಿ ಕೆಲಸವನ್ನು ಮಾಡುತ್ತಿರುವುದು ಹೆಮ್ಮ ವಿಚಾರವಾಗಿದೆ ಎಂದು ಹೇಳಿದರು.
ಶಾಲಾ ಎಸ್ಡಿಎಂಸಿ ಅಧ್ಯಕ್ಷ ಚಂದ್ರ ಖಾರ್ವಿ ಮಾತನಾಡಿ,ಪಂಚಾಯತ್ ಸಹಭಾಗಿತ್ವದಲ್ಲಿ 17.ಲಕ್ಷ.ರೂ ವೆಚ್ಚದಲ್ಲಿ ನಾನಾ ಕೆಲಸಗಳನ್ನು ಶಾಲೆಯಲ್ಲಿ ಕೈಗೊಳ್ಳಲಾಗಿದೆ.ವಿದ್ಯಾರ್ಥಿಗಳ ಸಂಖ್ಯೆಗೆ ಅನುಗುಣವಾಗಿ ನಾಲ್ಕು ಕೊಠಡಿಗಳ ಸಂಖ್ಯೆ ಕೊರತೆ ಇದೆ ಎಂದರು.ಈ ಬಗ್ಗೆ ಸಂಬಂಧಿಸಿದ ಇಲಾಖೆ ಮತ್ತು ದಾನಿಗಳು,ಗ್ರಾಮಸ್ಥರು ಸಹಕಾರ ನೀಡಬೇಕೆಂದು ಕೇಳಿಕೊಂಡರು.
ಶಾಲಾ ಮುಖ್ಯೋಪಾಧ್ಯಾಯರಾದ ಶಂಕರ ಅವರು ಮಾತನಾಡಿ,ಖಾಸಗಿ ಶಾಲೆಗಳಿಗಿಂತಲೂ ಮಿಗಿಲಾದ ಸವಲತ್ತುಗಳು ನಮ್ಮ ಶಾಲೆಯಲ್ಲಿ ಇದೆ ಗುಣ ಮಟ್ಟದ ಶಿಕ್ಷಣವನ್ನು ಕೂಡ ನೀಡಲಾಗುತ್ತಿದೆ.ಹಳೆ ವಿದ್ಯಾರ್ಥಿ ಸಂಘದವರು ವಿದ್ಯಾರ್ಥಿಗಳಿಗೆ ಅನುಕೂಲವಾಗುವ ದೃಷ್ಟಿಯಿಂದ ಬಸ್ ವ್ಯವಸ್ಥೆಯನ್ನು ಕಲ್ಪಿಸಿದ್ದಾರೆ.ಸಕಲ ಸೌಲಭ್ಯಗಳನ್ನು ಹೊಂದಿರುವ ನಮ್ಮ ಶಾಲೆಗೆ ಪೋಷಕರು ಮಕ್ಕಳನ್ನು ಕಳುಹಿಸಬೇಕೆಂದು ವಿನಂತಿಸಿಕೊಂಡರು.
ಭಾರತೀಯ ಭೂಸೇನೆ ಮಾಜಿ ಸೈನಿಕರಾದ ಮಹಾಬಲ.ಎನ್ ಬೈಂದೂರು, ಮರವಂತೆ ಬಡಾಕೆರೆ ವ್ಯವಸಾಹಯ ಸೇವಾ ಸಹಕಾರಿ ಸಂಘದ ಅಧ್ಯಕ್ಷ ರಾಜು ಪೂಜಾರಿ,ರಾಮಮಂದಿರ ಮರವಂತೆ ಅಧ್ಯಕ್ಷ ವಾಸುದೇವ ಖಾರ್ವಿ,ಪ್ರಾಥಮಿಕ ಶಾಲಾ ಶಿಕ್ಷಕರ ಸಂಘ ಬೈಂದೂರು ಅಧ್ಯಕ್ಷ ಶೇಖರ ಪೂಜಾರಿ,ಹಳೆ ವಿದ್ಯಾರ್ಥಿ ಸಂಘದ ಗೌರವಾಧ್ಯಕ್ಷ ಶ್ರೀಪತಿ ಕಾರಂತ್,ಡಾ.ಪ್ರವೀಣ್ ಕುಮಾರ್ ನಾವುಂದ,ವಿದ್ಯಾರ್ಥಿ ನಾಯಕ ಸನ್ವಿತ್ ಪೂಜಾರಿ,ಗ್ರಾಮಸ್ಥರು,
ಶಿಕ್ಷವೃಂದವರು ಉಪಸ್ಥಿತರಿದ್ದರು.
ನಿವೃತ್ತ ಯೋಧ ಭಾರತೀಯ ಭೂಸೇನೆ ಸೇವೆ ಸಲ್ಲಿಸುತ್ತಿರುವ ಮಹಾಬಲ ಎಸ್, ಸಮಾಜ ಸೇವಕ ಬೆಂಕಿ ಮಣಿ ಸಂತು, ಕರಾಟೆಯಲ್ಲಿ ಸಾಧನೆ ಮಾಡಿದ ಪ್ರೀತಮ್ ಎಸ್ ದೇವಾಡಿಗ ಇವರನ್ನು ಸನ್ಮಾನಿಸಿ ಗೌರವಿಸಲಾಯಿತು
ದೈಹಿಕ ಶಿಕ್ಷಣ ಶಿಕ್ಷಕ ರವಿ ಶೆಟ್ಟಿ ಸ್ವಾಗತಿಸಿದರು,ಶಶಿಕಲಾ ವಂದಿಸಿದರು.ಸಹ ಶಿಕ್ಷಕಿ ಶೋಭಾ ನಿರೂಪಿಸಿದರು.