ಆಂಬ್ಯುಲೆನ್ಸ್ ಪಲ್ಟಿ ಚಾಲಕ ಸಾವು
ಮಂಗಳೂರು:ಕಾಯಿಲೆಯಿಂದ ತೀವ್ರವಾಗಿ ಬಳಲುತ್ತಿದ್ದ
ರೋಗಿಯೋರ್ವನ್ನು ತುರ್ತಾಗಿ ಮಂಗಳೂರಿನ ಆಸ್ಪತ್ರೆಗೆ ಸಾಗಿಸುತ್ತಿದ್ದ ಸಂದರ್ಭ ಆಂಬ್ಯುಲೆನ್ಸ್ ವಾಹನವೊಂದು ಪಲ್ಟಿಯಾಗಿ ಉರುಳಿ ಬಿದ್ದ ಘಟನೆ ಅಂಚಿಕಟ್ಟೆ ಎಂಬಲ್ಲಿ ನಡೆದಿದೆ.ಅಪಘಾತದಲ್ಲಿ ಗಂಭೀರವಾಗಿ ಗಾಯಗೊಂಡಿದ್ದ ಆಂಬ್ಯುಲೆನ್ಸ್ ವಾಹನ ಚಾಲಕನನ್ನು ಆಸ್ಪತ್ರೆಗೆ ದಾಖಲು ಮಾಡಲಾಗಿದೆ,ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾರೆ.ಗುರುವಾಯನಕೆರೆ ನಿವಾಸಿ ಶಬೀರ್ ಮೃತಪಟ್ಟ ದುರ್ದೈವಿ.
ಅತಿ ವೇಗವಾಗಿ ಬೆಳ್ತಂಗಡಿ ಕಡೆಯಿಂದ ಮಂಗಳೂರು ಕಡೆಗೆ ಹೋಗುತ್ತಿದ್ದ ಆಂಬ್ಯುಲೆನ್ಸ್ ವಾಹನ ವಗ್ಗ ಸಮೀಪದ ಕೊಪ್ಪಳ ಅಂಚಿಕಟ್ಟೆ ಎಂಬಲ್ಲಿ ನಿಯಂತ್ರಣ ತಪ್ಪಿ ರಸ್ತೆ ಮಧ್ಯ ಪಲ್ಟಿಯಾಗಿದೆ, ಆಂಬ್ಯುಲೆನ್ಸ್ ನಲ್ಲಿದ್ದ ರೋಗಿಯನ್ನು ಬದಲಿ ವಾಹನದಲ್ಲಿ ಆಸ್ಪತ್ರೆಗೆ ಸ್ವಿಫ್ಟ್ ಮಾಡಲಾಯಿತು.