ಚಂದ್ರಯಾ-3 ಯಶಸ್ಸಿಗೆ ಇಸ್ರೋ ಮಾಜಿ ಅಧ್ಯಕ್ಷ ಕೆ.ಶಿವನ್ ಹರ್ಷ
ಬೆಂಗಳೂರು:ಯಶ್ವಸಿಯಾಗಿ ಉಡಾವಣೆಗೊಂಡಿದ್ದ ಚಂದ್ರಯಾನ-2 ,2019 ರ ಸೆಪ್ಟೆಂಬರ್ 6 ರಂದು ವಿಕ್ರಮ್ ಲ್ಯಾಂಡರ್ ಸಂಪರ್ಕ ಕಳೆದುಕೊಂಡಾಗ ಅಂದಿನ ಇಸ್ರೋ ಅಧ್ಯಕ್ಷ ಕೆ.ಶಿವನ್ ಅವರು ಕಣ್ಣೀರಿಟ್ಟು ತಮ್ಮ ನೋವಿನ ಭಾವನೆಯನ್ನು ಜಗತ್ತಿನ ಮುಂದಿಟ್ಟಿದ್ದರು.ಯಶಸ್ವಿ ಪ್ರಯೋಗ ಕೊನೆ ಕ್ಷಣದಲ್ಲಿ ಹಾದಿ ತಪ್ಪಿದ್ದಾಗ ಇಡಿ ಭಾರತ ದೇಶ ಶೋಕ ಸಾಗರದಲ್ಲಿ ಮುಳುಗಿ ಹೋಗಿತ್ತು.ವಿಜ್ಞಾನಿಗಳ ಜತೆಗೆ ಭಾರತೀಯರು ಕೂಡ ತಮ್ಮ ದುಗುಡವನ್ನು ಹೊರ ಹಾಕಿರುವುದು ಇನ್ನೂ ಕೂಡ ಕಣ್ಣ ಮುಂದಿದೆ.
ದೇಶದ ಮಾನ್ಯ ಪ್ರಧಾನ ಮಂತ್ರಿಗಳಾದ ನರೇಂದ್ರ ಮೋದಿ ಅವರು ಇಸ್ರೋ ಅಧ್ಯಕ್ಷ ಕೆ.ಶಿವನ್ ಅವರನ್ನು ತಬ್ಬಿಕೊಂಡು ಸಾಂತ್ವನದ ಮಾತುಗಳನ್ನು ಆಡಿ,ಈ ದಿನದ ಸೋಲು ಮುಂದಿನ ಗೆಲುವಿಗೆ ದಾರಿ ಮಾಡಿ ಕೊಡಲಿದೆ,ಮುಂದಿನ ಪ್ರಯೋಗಕ್ಕೆ ಸಿದ್ದರಾಗಬೇಕಿದೆ ಎಂದು ಸ್ವತಹ ಪ್ರಧಾನ ಮಂತ್ರಿಗಳು ವಿಜ್ಞಾನಿಗಳನ್ನು ಹುರಿದುಂಬಿಸಿದ ವಿಚಾರ ಜಗತ್ತಿಗೆ ತಿಳಿದಿದೆ.
ಅಂದು ಕಣ್ಣೀರಿಟ್ಟ ಕಣ್ಣುಗಳಲ್ಲಿ ಇಂದು ತುಂಬಿದೆ ಹರ್ಷ:ಚಂದ್ರಯಾನ-2 ರ ಪ್ರಯೋಗ ಸಂದರ್ಭದಲ್ಲಿ ಇಸ್ರೋ ಅಧ್ಯಕ್ಷರಾಗಿದ್ದ ವಿಜ್ಞಾನಿ ಕೆ.ಶಿವನ್ ಅವರು ಬಹಳಷ್ಟು ನಿರೀಕ್ಷೆಯೊಂದಿಗೆ ತಮ್ಮ ತಂಡವನ್ನು ಕಟ್ಟಿಕೊಂಡು ಗಗನಕ್ಕೆ ನೌಕೆಯನ್ನು ಉಡಾವಣೆ ಮಾಡಿದ್ದರು.ಕೊನೆ ಕ್ಷಣದಲ್ಲಿ ವಿಕ್ರಮ್ ಲ್ಯಾಂಡರ್ ಸಂಪರ್ಕ ಕಳೆದುಕೊಂಡಿದ್ದರಿಂದ ಚಂದ್ರಯಾನ-2 ವಿಫಲಗೊಂಡಿದ್ದರು ಅದು ಚಂದ್ರಯಾನ-3 ರ ಯಶಸ್ಸಿಗೆ ದೊಡ್ಡ ಕೊಡುಗೆಯನ್ನು ನೀಡಿದೆ ಎಂದರೆ ತಪ್ಪಾಗಲಾರದು.ಚಂದ್ರನ ದಕ್ಷಿಣ ಧ್ರುವದಲ್ಲಿ ಕಾಲಿಡ ಬೇಕೆಂದು ಕೊಂಡಿದ್ದ ದೇಶದ ಹಿರಿಯ ವಿಜ್ಞಾನಿ ಕೆ.ಶಿವನ್ ಅವರ ಕನಸು 2023 ರ ಆ.23 ರಂದು ಈಡೇರಿಕೆ ಆಗಿದೆ.ಚಂದ್ರಯಾನ-3 ಯಶಸ್ಸಿಗೆ ಅವರು ತುಂಬು ಹೃದಯದಿಂದ ಹರ್ಷವನ್ನು ವ್ಯಕ್ತಪಡಿಸಿದ್ದಾರೆ.