ಮಹಿಳಾ ಪಿಸಿ ಆತ್ಮಹತ್ಯೆ ಪ್ರಕರಣ,ಪತಿ ಬಂಧನ
ಉಡುಪಿ:ಕಾಪು ಪೊಲೀಸ್ ಠಾಣೆಯ ಮಹಿಳಾ ಸಿಬಂದಿ ಜ್ಯೋತಿ ಅವರ ಆತ್ಮಹತ್ಯೆ ಪ್ರಕರಣದ ಸಂಬಂಧ ಆತ್ಮಹತ್ಯೆಗೆ ಪ್ರಚೋದನೆ ನೀಡಿದ ಆರೋಪದಡಿ ಅವರ ಪತಿ ರವಿಕುಮಾರ್(35) ಅವರನ್ನು ಕಾಪು ಪೊಲೀಸರು ಬಂಧಿಸಿದ್ದಾರೆ.
ಜ್ಯೋತಿ ಅವರ ಕೊಠಡಿಯಲ್ಲಿ ಒಂದು ಡೈರಿ ಸಿಕ್ಕಿದ್ದು ಅದರಲ್ಲಿ ಆಕೆ ತನ್ನ ಆತ್ಮಹತ್ಯೆಗೆ ನನ್ನ ಗಂಡನ ಸಂಶಯ ಪ್ರವೃತ್ತಿಯೇ ಕಾರಣ ಎಂದುಬರೆದುಕೊಂಡಿದ್ದಾಗಿ ಆಕೆಯ ತಾಯಿ ದೇವಮ್ಮ ವಿಟ್ಲಾಪುರ ಪೊಲೀಸರಿಗೆ ದೂರು ನೀಡಿದ್ದು ಆ ಹಿನ್ನಲೆಯಲ್ಲಿ ಪೊಲೀಸರು ಶನಿವಾರ ತಡರಾತ್ರಿ ಆಕೆಯ ಪತಿಯನ್ನು ಬಂಧಿಸಿದ್ದಾರೆ.
ಬಾಗಲಕೋಟೆ ಮೂಲದ ರವಿ ಕುಮಾರ್ ಕೆಎಸ್ ಆರ್ ಟಿಸಿಯಲ್ಲಿ ಮ್ಯೆಕ್ಯಾನಿಕ್ ಆಗಿದ್ದು ಕಾಪು ಠಾಣೆಗೆ ಹೊಂದಿಕೊಂಡಿರುವ ಪೊಲೀಸ್ ಕ್ವಾಟ್ರಸ್ ನಲ್ಲಿ ತಮ್ಮ ಪತ್ನಿಯೊಂದಿಗೆ ವಾಸವಿದ್ದರು.
ಪತಿಪತ್ನಿಯ ನಡುವೆ ಆಗಾಗ ಜಗಳವಾಗುತ್ತಿದ್ದು ಇದರಿಂದ ಮನನೊಂದು ಮಹಿಳಾ ಸಿಬಂದಿ ಆತ್ಮಹತ್ಯೆ ಮಾಡಿಕೊಂಡಿರುವುದಾಗಿ ಹೇಳಲಾಗುತ್ತಿದೆ.