ಚಿತ್ತೂರು ಶಾಲೆಯಲ್ಲಿ ಕ್ರಿಡೋತ್ಸವ ಕಾರ್ಯಕ್ರಮ,ಕಿಂಡರ್‍ಗಾರ್ಡನ್ ಉದ್ಘಾಟನೆ



ಸರಕಾರ ಹಾಗೂ ದಾನಿಗಳ ಸಹಭಾಗಿತ್ವದಲ್ಲಿ ಬೈಂದೂರು ವಲಯದ ಸರಕಾರಿ ಹಿರಿಯ ಪ್ರಾಥಮಿಕ ಚಿತ್ತೂರು ಶಾಲೆಯಲ್ಲಿ ನೂತನವಾಗಿ ನಿರ್ಮಾಣಗೊಂಡಿರುವ ಕಿಂಡರ್ ಗಾರ್ಡನ್ ಅನ್ನು ಸಮಾಜ ಸೇವಕ ಕೃಷ್ಣಮೂರ್ತಿ ಮಂಜ ಹಾಗೂ ಶಾಲಾ ಎಸ್‍ಡಿಎಂಸಿ ಅಧ್ಯಕ್ಷ ಚಿತ್ರಕೂಟ ಆಯುರ್ವೇದ ಚಿಕಿತ್ಸಾಲಯ ಆಲೂರು ಆಡಳಿತ ನಿರ್ದೇಶಕ ಡಾ.ರಾಜೇಶ್ ಬಾಯರಿ ಅವರು ಜಂಟಿಯಾಗಿ ಶನಿವಾರ ಉದ್ಘಾಟಿಸಿದರು.

ಕುಂದಾಪುರ:ಬೈಂದೂರು ವಲಯದ ಸರಕಾರಿ ಹಿರಿಯ ಪ್ರಾಥಮಿಕ ಚಿತ್ತೂರು ಶಾಲೆಯಲ್ಲಿ ಕ್ರೀಡೋತ್ಸವ,ಕಿಂಡರ್‍ಗಾರ್ಡನ್ ಉದ್ಘಾಟನೆ ಹಾಗೂ ಪ್ರತಿಭಾನ್ವಿತ ವಿದ್ಯಾರ್ಥಿಗಳಿಗೆ ಸನ್ಮಾನ ಕಾರ್ಯಕ್ರಮ ಶನಿವಾರ ನಡೆಯಿತು.
ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತರಾದ ಕೃಷ್ಣಮೂರ್ತಿ ಮಂಜ ಅವರು ಕ್ರೀಡೋತ್ಸವ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿ,ಸದೃಢವಾದ ದೇಹವನ್ನು ಹೊಂದಲು ಹಾಗೂ ಮನಸ್ಸನ್ನು ಏಕಾಗ್ರತೆಯಿಂದ ಕಾಪಾಡಿಕೊಳ್ಳಲು ಕ್ರೀಡೆ ಬಹಳಷ್ಟು ಸಹಕಾರಿ ಆಗಿದೆ.ದೇಹವನ್ನು ದಂಡಿಸಲು ಉತ್ತಮವಾದ ಮಾರ್ಗ ಕೂಡ ಆಗಿದ್ದು ಶಾಲೆಗಳಲ್ಲಿ ಮಕ್ಕಳು ನಿತ್ಯವೂ ಕ್ರೀಡಾಚಟುವಟಿಕೆಯಲ್ಲಿ ಭಾಗವಹಿಸುವಂತಾಗಬೇಕೆಂದು ಎಂದರು.
ಮೊಬೈಲ್ ಬಳಕೆ ಎನ್ನುವುದು ಮಾದಕ ದ್ರವ್ಯಕ್ಕಿಂತಲೂ ಅಪಾಯಕಾರಿಯಾಗಿದ್ದು.ಮಕ್ಕಳು ಮೊಬೈಲ್‍ನಿಂದ ದೂರವಿರುವಂತೆ ಹೆತ್ತವರು ಆದಷ್ಟು ನೋಡಿಕೊಳ್ಳಬೇಕೆಂದು ಕಿವಿ ಮಾತನ್ನು ಹೇಳಿದರು.
ಅಧ್ಯಕ್ಷತೆ ವಹಿಸಿದ ಶಾಲಾ ಎಸ್‍ಡಿಎಂಸಿ ಅಧ್ಯಕ್ಷ ಚಿತ್ರಕೂಟ ಆಯುರ್ವೇದ ಚಿಕಿತ್ಸಾಲಯ ಆಲೂರು ಆಡಳಿತ ನಿರ್ದೇಶಕ ಡಾ.ರಾಜೇಶ ಬಾಯರಿ ಮಾತನಾಡಿ, ಸುಮಾರು ಮೂವತ್ತು ವರ್ಷಗಳ ಹಿಂದೆ ಮಾನವನ ದೈನಂದಿನ ನಡಿಗೆ ಹದಿನೆಂಟು ಕಿಲೋ ಮೀಟರ್ ಆಗಿದ್ದು.ಇಂದು ಎರಡುವರೆ ಕಿಲೋಮೀಟರ್‍ಗೆ ಸೀಮಿತಗೊಂಡಿದೆ.ಚೈತನ್ಯ ಭರಿತ ದೇಹವನ್ನು ಹೊಂದಲು ಮಾನಸಿಕ ಆರೋಗ್ಯವನ್ನು ಕಾಪಾಡಿಕೊಳ್ಳಲು ಕ್ರೀಡೆ ಮುಖ್ಯವಾಗಿದೆ ಎಂದು ಅಭಿಪ್ರಾಯಪಟ್ಟರು.ಮಕ್ಕಳಲ್ಲಿ ಅಡಗಿರುವ ಜ್ಞಾನವನ್ನು ಹೊರಗೆ ತರಲು ವಿಜ್ಞಾನ ಮೇಳವನ್ನು ನಡೆಸುವ ಉದ್ದೇಶ ಹೊಂದಲಾಗಿದೆ ಎಂದು ತಿಳಿಸಿದರು.ಡಾ.ಅತುಲ್ ಕುಮಾರ್ ಶೆಟ್ಟಿ ಮತ್ತು ವಡಂಬಳ್ಳಿ ಜಯರಾಮ ಶೆಟ್ಟಿ ಶುಭಹಾರೈಸಿದರು.
ಸಮೂಹ ಸಂಪನ್ಮೂಲ ವ್ಯಕ್ತಿ ನಾಗರಾಜ ಶೆಟ್ಟಿ,ಸಾಹಸ ಸಂಸ್ಥೆ ಶಿಕ್ಷಕಿ ಲತಾ,ಉಡುಪಿ ದೈಹಿಕ ಶಿಕ್ಷಕರ ಸಂಘದ ಉಪಾಧ್ಯಕ್ಷ ರವಿಶಂಕರ ಹೆಗ್ಡೆ,ಪ್ರೌಢಶಾಲೆ ದೈಹಿಕ ಶಿಕ್ಷಕ ರಾಘವೇಂದ್ರ ಶೆಟ್ಟಿ ಉಪಸ್ಥಿತರಿದ್ದರು.ವಿವಿಧ ಕ್ಷೇತ್ರಗಳಲ್ಲಿ ಸಾಧನೆಗೈದಿರುವ ಶಾಲೆಯ ಪ್ರತಿಭಾನ್ವಿತ ವಿದ್ಯಾರ್ಥಿಗಳಾದ ಆರಾಧ್ಯ ಬಾಯರಿ,ಅರ್ಪಿತಾ,ಅನನ್ಯ,ಸಮೃದ್ಧ್,ಪ್ರೇರಣಾ,ಅಮೂಲ್ಯ,ಹರ್ಷಿಕಾ ಅವರನ್ನು ಸನ್ಮಾನಿಸಲಾಯಿತು.ಶಾಲಾ ದೈಹಿಕ ಶಿಕ್ಷಣ ಶಿಕ್ಷಕ ಬಾಲಕೃಷ್ಣ ಶೆಟ್ಟಿ ಸ್ವಾಗತಿಸಿದರು.ಸಹಶಿಕ್ಷಕ ಗುರುಪ್ರಸಾದ್ ನಿರೂಪಿಸಿದರು.ಮುಖ್ಯ ಶಿಕ್ಷಕ ಗೋವಿಂದ ಶೆಟ್ಟಿ ವಂದಿಸಿದರು.ಶಿಕ್ಷಕವೃಂದವರು,ಪೋಷಕರು,ವಿದ್ಯಾರ್ಥಿಗಳು ಹಾಜರಿದ್ದರು.