ಸರಕಾರಿ ಹಿರಿಯ ಪ್ರಾಥಮಿಕ ಬಡಾಕೆರೆ ಶಾಲೆ ದತ್ತು ಸ್ವೀಕಾರ
ಕುಂದಾಪುರ:ಆಧುನಿಕ ಶಿಕ್ಷಣದ ಜತೆಗೆ ಮಕ್ಕಳಿಗೆ ಸಂಸ್ಕಾರಯುತವಾದ ಶಿಕ್ಷಣ ದೊರೆತರೆ ಮಾತ್ರ ಉತ್ತಮ ನಾಗರಿಕರಾಗಿ ಸಮಾಜದಲ್ಲಿ ಬದುಕನ್ನು ಕಟ್ಟಿಕೊಳ್ಳಲು ಸಾದ್ಯವಿದೆ ಎಂದು ಪ್ರಾಂತೀಯ ಧರ್ಮಾಧಿಕಾರಿಗಳು ಶ್ರೀ ಶಾರದ ಪೀಠಂ ಶೃಂಗೇರಿ ವೇ.ಮೂ ಲೋಕೇಶ್ ಅಡಿಗ ನಾಗ ಪಾತ್ರಿಗಳು ಬಡಾಕೆರೆ ಹೇಳಿದರು.ಬೈಂದೂರು ವಲಯದ ಸರಕಾರಿ ಹಿರಿಯ ಪ್ರಾಥಮಿಕ ಬಡಾಕೆರೆ ಶಾಲೆಯಲ್ಲಿ ನಡೆದ ಶಾಲೆ ದತ್ತು ಸ್ವೀಕಾರ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.ಆಧುನಿಕ ಕಾಲಘಟ್ಟಕ್ಕೆ ಸರಿ ಹೊಂದುವಂತಹ ನಿಟ್ಟಿನಲ್ಲಿ ಮಕ್ಕಳಿಗೆ ಶಿಕ್ಷಣವನ್ನು ನೀಡಬೇಕಾದ ಅಗತ್ಯತೆ ಇದೆ.ಗ್ರಾಮೀಣ ಪ್ರದೇಶದ ಮಕ್ಕಳಿಗೆ ಗುಣಮಟ್ಟದ ಶಿಕ್ಷಣ ದೊರೆತರೆ […]



























































































































































































































































































































































































































































































































































































































































































































































































































































































































































































































































































































































































































































































































































































































































































