ಶ್ರೀಲಕ್ಷ್ಮೀನಾರಾಯಣ ದೇವರ ವೈಭವದ ಹೊರೆ ಕಾಣಿಕೆ ಪುರಮೆರವಣಿಗೆ

ಕುಂದಾಪುರ:ತಾಲೂಕಿನ ಹೆಮ್ಮಾಡಿ ಶ್ರೀಲಕ್ಷ್ಮೀನಾರಾಯಣ ದೇವಸ್ಥಾನದ ನೂತನ ಶಿಲಾಮಯಗುಡಿ ಲೋಕಾರ್ಪಣೆ ಹಾಗೂ ಪುನರ್ ಪ್ರತಿಷ್ಠೆ ಮತ್ತು ಬ್ರಹ್ಮಕಂಭಾಭಿಷೇಕ ಮಹೋತ್ಸವ ಅಂಗವಾಗಿ ವೈಭವದ ಹೊರೆ ಕಾಣಿಕೆ ಶೋಭಾಯಾತ್ರೆ ಶುಕ್ರವಾರ ನಡೆಯಿತು.ಪೂರ್ಣ ಕುಂಭ ಸ್ವಾಗತದೊಂದಿಗೆ ಶ್ರೀ ದೇವರ ಹೊರೆ ಕಾಣಿಕೆ ಮೆರವಣಿಗೆಯನ್ನು ಸ್ವಾಗತಿಸಿಕೊಳ್ಳಲಾಯಿತು.ಚಂಡೆ ವಾದನ,ವಾದ್ಯ ಘೋಷ,ಭಜನೆ ಮೆರವಣಿಗೆ ಸೊಬಗನ್ನು ಹೆಚ್ಚಿಸಿತು.ಮಹಿಳೆಯರು ಮತ್ತು ಪುರುಷರು ಸಮವಸ್ತ್ರದೊಂದಿಗೆ ಮೆರವಣಿಗೆಯಲ್ಲಿ ಭಾಗವಹಿಸಿದರು.

ಬಿಜೆಪಿ ಯುವ ಮೋರ್ಚಾದಿಂದ ಕೊಲ್ಲೂರು ಮೂಕಾಂಬಿಕಾ ದೇವಿಗೆ ಪೂಜೆ ಸಲ್ಲಿಕೆ

ಬೈಂದೂರು:ಬಿ.ವೈ ರಾಘವೇಂದ್ರ ಅವರ ಶ್ರೇಯಸ್ಸಿಗಾಗಿ,ಬೈಂದೂರು ಯುವ ಮೋರ್ಚಾ ತಂಡದಿಂದ ಕೊಲ್ಲೂರು ಮೂಕಾಂಬಿಕಾ ದೇವಿಗೆ ವಿಶೇಷ ಪೂಜೆ ಸಲ್ಲಿಕೆ ಮಾಡಲಾಯಿತು.ಬೈಂದೂರು ಕ್ಷೇತ್ರದಲ್ಲಿ ಒಂದು ಲಕ್ಷಕ್ಕೂ ಅಧಿಕ ಲೀಡ್ ಮತ ಸಿಗಬೇಕೆಂದು ಜಗನ್ಮಾತೆಯಲ್ಲಿ ಪ್ರಾರ್ಥಿಸಲಾಯಿತು.ಬಿಜೆಪಿ ಯುವಮೋರ್ಚ ಬೈಂದೂರು ವತಿಯಿಂದ ಬಿ.ವೈ ರಾಘವೇಂದ್ರರವರಿಗೆ ಬೈಂದೂರು ಕ್ಷೇತ್ರದಲ್ಲಿ 1 ಲಕ್ಷ ಲೀಡ್ ಕೊಡಿಸುವ ಶಾಸಕ ಗುರುರಾಜ್ ಗಂಟಿಹೊಳೆಯವರ ಸಂಕಲ್ಪಕ್ಕೆ ಶಕ್ತಿ ತುಂಬಲು ಕೊಲ್ಲೂರು ತಾಯಿ ಮೂಕಾಂಬಿಕೆಯಲ್ಲಿ ಯುವಮೋರ್ಚ ತಂಡದಿಂದ ಸಾಮೂಹಿಕ ಪ್ರಾರ್ಥನೆ ಮಾಡಲಾಯಿತು.ಮಂಡಲ ಅಧ್ಯಕ್ಷ ದೀಪಕ್ ಕುಮಾರ್ ಶೆಟ್ಟಿ,ಯುವಮೋರ್ಚ ಅಧ್ಯಕ್ಷ ಗಜೇಂದ್ರ ಬೇಲೆಮನೆ […]

ಗೂಳಿ ಕಾಳಗದಲ್ಲಿ ಬೈಕ್‍ಗೆ ಹಾನಿ

ಕುಂದಾಪುರ:ಗಂಗೊಳ್ಳಿ ಮ್ಯಾಂಗನೀಸ್ ರೋಡ್ ಬಸ್ಟ್ಯಾಂಡ್ ಬಳಿ ಗೂಳಿಗಳ ನಡುವೆ ನಡೆದ ಕಾಳಗದಲ್ಲಿ ರಸ್ತೆ ಬದಿಯಲ್ಲಿ ನಿಲ್ಲಿಸಿದ ಬೈಕ್‍ಗೆ ಹಾನಿಯಾದ ಘಟನೆ ಬುಧವಾರ ನಡೆದಿದೆ.ಮದವೇರಿದ ಗೂಳಿಗಳೆರಡು ಹಲವಾರು ಗಂಟೆಗಳಿಂದ ಎಡಬಿಡದೆ ಪರಸ್ಪರ ಕಾಳಗವನ್ನು ನಡೆಸುತ್ತಿದ್ದವು.ಸ್ಥಳೀಯರು ಗೂಳಿಗಳ ಮೇಲೆ ಪೈಪ್ ಮೂಲಕ ನೀರನ್ನು ಹಾಯಿಸಿದರು ಗೂಳಿಗಳ ಮೈಗೆ ತಂಪೆರಲೆ ಇಲ್ಲಾ.ಗೂಳಿಗಳು ಹೊಯ್ದಾಟ ಮಾಡುತ್ತಾ ರಸ್ತೆ ಬದಿಯಲ್ಲಿ ನಿಲ್ಲಿಸಿದ ಬೈಕ್ ಗುದ್ದಿವೆ.ಗೂಳಿಗಳ ನಡುವೆ ನಡೆದ ಕಾದಾಟದಲ್ಲಿ ಬೈಕ್ ಮುಂಭಾಗ ಸಂಪೂರ್ಣ ನಜ್ಜುಗುಜ್ಜಾಗಿದೆ.

You cannot copy content of this page