ಕೆಡಿಸಿ ಕಾಂಗೆನ್ ಡಿಸ್ಟ್ರಿಬ್ಯೂಟರ್ಸ್ ಸೆಂಟರ್ ಕೋಟೇಶ್ವರದಲ್ಲಿ ಶುಭಾರಂಭ

ಕುಂದಾಪುರ:ಕೆಡಿಸಿ ಕಾಂಗೆನ್ ಡಿಸ್ಟ್ರಿಬ್ಯೂಟರ್ಸ್ ಸೆಂಟರ್ ಕೋಟೇಶ್ವರದಲ್ಲಿ ಶುಕ್ರವಾರ ಶುಭಾರಂಭಗೊಂಡಿದೆ.ಜಪಾನ್ ದೇಶದ ಕಾಂಗೆನ್ ಸಂಸ್ಥೆ ವಿಶ್ವದ ಸುಮಾರು 165 ದೇಶಗಳಲ್ಲಿ ಕಾರ್ಯಚರಿಸುತ್ತಿದೆ.ಸೇವೆಯಲ್ಲಿ ಉತ್ತಮ ದರ್ಜೆಯನ್ನು ಹೊಂದಿರುವ ಕೆಡಿಸಿ ಕಾಂಗೆನ್ ಸಂಸ್ಥೆ ಭಾರತದ ನಾನಾ ರಾಜ್ಯಗಳಲ್ಲಿ ತನ್ನ ಸಂಸ್ಥೆಯನ್ನು ಹೊಂದಿದ್ದು ಜನ ಪ್ರೀತಿಗೆ ಪಾತ್ರವಾಗಿದೆ.ವಾಸುದೇವ ಹೊಳ್ಳ ಅವರ ನೇತೃತ್ವದಲ್ಲಿ ಕಾಂಗೆನ್ ಡಿಸ್ಟ್ರಿಬ್ಯೂಟರ್ಸ್ ಸೆಂಟರ್ ಕೋಟೇಶ್ವರದಲ್ಲಿ ಶುಭಾರಂಭಗೊಂಡಿದ್ದು ಕಾಂಗೆನ್ ವಾಟರ್ ಮೆಷಿನ್ ಅನ್ನು ಪಡೆದುಕೊಳ್ಳಲು ಗ್ರಾಹಕರು ಅವರನ್ನು ಸಂಪರ್ಕಿಸಬಹುದು.ಕಾಂಗೆನ್ ಡಿಸ್ಟ್ರಿಬ್ಯೂಟರ್ಸ್ ಕೋಟೇಶ್ವರ ವಾಸುದೇವ ಹೊಳ್ಳ ಅವರು ಮಾತನಾಡಿ,ವಿಶ್ವಾದ್ಯಂತ ಜನಪ್ರಿಯಗೊಂಡಿರುವ ಕಾಂಗೆನ್ ವಾಟರ್‍ನ್ನು […]

ಚಂದನ್ ಮೋಟಾರ್ ಪ್ಯೂಯೆಲ್ಸ್ ಹೆಮ್ಮಾಡಿಯಲ್ಲಿ ಶುಭಾರಂಭ

ಕುಂದಾಪುರ:ತಾಲೂಕಿನ ಹೆಮ್ಮಾಡಿ ಜಾಲಾಡಿ ರಾಷ್ಟ್ರೀಯ ಹೆದ್ದಾರಿ 66 ರ ಪಕ್ಕದಲ್ಲಿ ನೂತನವಾಗಿ ಆರಂಭಗೊಂಡಿರುವ ಇಂಡಿಯನ್ ಆಯಿಲ್ ರಿಟೈಲ್ ಔಟ್‍ಲೆಟ್ ಚಂದನ್ ಮೋಟಾರ್ ಪ್ಯೂಯೆಲ್ಸ್ ಶುಭಾರಂಭ ಕಾರ್ಯಕ್ರಮ ನಾನಾ ಧಾರ್ಮಿಕ ವಿಧಿವಿಧಾನಗಳೊಂದಿಗೆ ಶುಕ್ರವಾರ ನಡೆಯಿತು.ಜಾಲಾಡಿಯಲ್ಲಿ ನೂತನವಾಗಿ ಆರಂಭಗೊಂಡಿರುವ ಚಂದನ್ ಪ್ಯೂಯೆಲ್ಸ್ ನಿಂದ ಪರಿಸರದ ಅಕ್ಕಪಕ್ಕದ ಗ್ರಾಮದ ಜನರಿಗೆ ಹಾಗೂ ರಾಷ್ಟ್ರೀಯ ಹೆದ್ದಾರಿಯಲ್ಲಿ ಹಾದು ಹೋಗುವ ವಾಹನ ಸವಾರರಿಗೆ ಬಹಳಷ್ಟು ಅನುಕೂಲಕರವಾಗಲಿದೆ.ರಾಷ್ಟ್ರೀಯ ಹೆದ್ದಾರಿ ಪಕ್ಕದಲ್ಲಿ ಸುಸಜ್ಜಿತವಾದ ರೀತಿಯಲ್ಲಿ ನಿರ್ಮಾಣಗೊಂಡಿರುವ ಚಂದನ್ ಪ್ಯೂಯೆಲ್ಸ್ ಆಕರ್ಷಕವಾಗಿದ್ದು ವಾಹನ ನಿಲುಗಡೆ ಮಾಡಲು ವಿಸ್ತಾರವಾದ ಸ್ಥಳಾವಕಾಶವನ್ನು […]

ಧಾರ್ಮಿಕ ಸಭಾ ಕಾರ್ಯಕ್ರಮ ದಾನಿಗಳಿಗೆ ಸನ್ಮಾನ

ಕುಂದಾಪುರ:ಬೈಂದೂರು ತಾಲೂಕಿನ ನಾಗೂರು ಕಿರಿಮಂಜೇಶ್ವರ ಗುಂಜಾನುಗುಡ್ಡೆ ಶ್ರೀ ಬೊಬ್ಬರ್ಯ ಪರಿವಾರ ದೇವರ ಪುನರ್ ಪ್ರತಿಷ್ಠೆ, ನೂತನ ಶಿಲಾಮಯ ದೇಗುಲ ಲೋಕಾರ್ಪಣೆ ಹಾಗೂ ಬ್ರಹ್ಮಕಲಶೋತ್ಸವ ಕಾರ್ಯಕ್ರಮ ಧಾರ್ಮಿಕ ಸಭಾ ಕಾರ್ಯಕ್ರಮ ಸೋಮವಾರ ನಡೆಯಿತು.ದಾನಿಗಳನ್ನು ಸನ್ಮಾನಿಸಲಾಯಿತು.ಸಾಂದೀಪನಿ ಸಾಧನಾಶ್ರಮ ಶ್ರೀಕ್ಷೇತ್ರ ಕೇಮಾರು ಶ್ರೀ ಪರಮ ಪೂಜ್ಯ ಈಶವಿಠಲದಾಸ ಸ್ವಾಮಿ ಅವರು ಆಶೀರ್ವಚನಾ ನೀಡಿ ಮಾತನಾಡಿ,ಪಾಶ್ಚಿಮಾತ್ಯ ದೇಶದ ಸಂಸ್ಕøತಿಗೆ ಮಾರುಹೋಗದೆ ನಮ್ಮ ದೇಶದ ಸಂಸ್ಕøತಿಯನ್ನು ಅಳವಡಿಸಿಕೊಂಡು ಬದುಕುವುದರಿಂದ ಸಂಸ್ಕಾರಯುತವಾದ ಬದುಕನ್ನು ಕಂಡುಕೊಳ್ಳಬಹುದಾಗಿದೆ.ಮಾತೃ ಭಾಷಾ ಶಿಕ್ಷಣಕ್ಕೆ ಹೆಚ್ಚಿನ ಒತ್ತನ್ನು ನೀಡಬೇಕೆಂದು ಹೇಳಿದರು.ಧಾರ್ಮಿಕ ಮುಖಂಡ ಅಪ್ಪಣ್ಣ […]

You cannot copy content of this page