ಬ್ರಹ್ಮವಾರ ವಿದ್ಯಾಲಕ್ಷ್ಮೀ ಸಮೂಹ ಶಿಕ್ಷಣ ಸಂಸ್ಥೆಯಲ್ಲಿ ವಿದ್ಯಾರಂಭ-2025 ಕಾರ್ಯಕ್ರಮ ಉದ್ಘಾಟನೆ

ಕುಂದಾಪುರ:ಬಹ್ಮವಾರ ವಿದ್ಯಾಲಕ್ಷ್ಮೀ ಸಮೂಹ ಶಿಕ್ಷಣ ಸಂಸ್ಥೆಯಲ್ಲಿ ವಿದ್ಯಾರಂಭ 2025,ಫ್ರೆಶರ್ಸ್ ಡೇ ಕಾರ್ಯಕ್ರಮ ಅದ್ದೂರಿಯಾಗಿ ಶನಿವಾರ ನಡೆಯಿತು.ಮೊದಲ ಬ್ಯಾಚಿನ ವಿದ್ಯಾರ್ಥಿಗಳು ಸಾಂಸ್ಕೃತಿಕ ಕಾರ್ಯಕ್ರಮವನ್ನು ನಡೆಸಿಕೊಟ್ಟರು.ಯಕ್ಷಗಾನ,ಭರತ ನಾಟ್ಯ,ನೃತ್ಯ,ಫ್ಯಾಷನ್ ಶೋ ಕಾರ್ಯಕ್ರಮ ನೊಡುಗರ ಮನ ಸೆಳೆಯಿತು.ಕಾಲೇಜಿನ ಉಪನ್ಯಾಸಕ ವೃಂದದವರು ವಿದ್ಯಾರ್ಥಿಗಳನ್ನು ಹುರಿದುಂಬಿಸಿದರು. ಫಿಶರೀಸ್ ಕಾಲೇಜು ಮಂಗಳೂರು ಡಾ.ಎಸ್.ಎಂ ಶಿವಪ್ರಕಾಶ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿ,ತನ್ನ ವಿಭಿನ್ನ ಕಾರ್ಯ ಚಟುವಟಿಕೆ ಮೂಲಕ ವಿದ್ಯಾಲಕ್ಷ್ಮೀ ಶಿಕ್ಷಣ ಸಂಸ್ಥೆ ಜಿಲ್ಲೆಯಲ್ಲಿ ಉತ್ತಮ ಹೆಸರನ್ನು ಗಳಿಸಿದೆ.ವಿದ್ಯಾರ್ಥಿಗಳಿಗೆ ಶಿಕ್ಷಣವನ್ನು ನೀಡುವುದರ ಜತೆಗೆ,ಉದ್ಯೋಗ ಮೇಳಗಳನ್ನು ಆಯೋಜನೆ ಮಾಡಿ ಅವರಿಗೆ ಸ್ವಾವಲಂಬಿ ಬದುಕನ್ನು […]

ಧರಣಿ ಸಂಜೀವಿನಿ ಒಕ್ಕೂಟ ವಾರ್ಷಿಕ ಮಹಾಸಭೆ

ಕುಂದಾಪುರ:ಜಿಲ್ಲಾ ಪಂಚಾಯಿತಿ ಉಡುಪಿ,ತಾಲೂಕು ಪಂಚಾಯಿತಿ ಬೈಂದೂರು,ಕೌಶಲಾಭಿವೃದ್ಧಿ ಉದ್ಯಮಶೀಲತೆ ಮತ್ತು ಜೀವನೋಪಾಯ ಇಲಾಖೆ,ಕರ್ನಾಟಕ ರಾಜ್ಯ ಗ್ರಾಮೀಣ ಜೀವನೋಪಾಯ ಅಭಿಯಾನ ಸಂಜೀವಿನಿ ಸಹಕಾರದಲ್ಲಿ ಧರಣಿ ಸಂಜೀವಿನಿ ನಾಡ ಗ್ರಾಮ ಪಂಚಾಯತಿ ಮಟ್ಟದ ಒಕ್ಕೂಟ ಆಶ್ರಯದಲ್ಲಿ ವಾರ್ಷಿಕ ಮಹಾಸಭೆ ನಾಡ ಗ್ರಾಮ ಪಂಚಾಯಿತಿ ಸಭಾಭವನದಲ್ಲಿ ನಡೆಯಿತು.ಒಕ್ಕೂಟದ ಅಧ್ಯಕ್ಷೆ ಜಯಂತಿ ಬಡಾಕೆರೆ ಅಧ್ಯಕ್ಷತೆ ವಹಿಸಿ ಕಾರ್ಯಕ್ರಮ ಉದ್ಘಾಟಿಸಿದರು.ಸಂಪನ್ಮೂಲ ವ್ಯಕ್ತಿ ಸಾಂತ್ವನ ಕೇಂದ್ರದ ನಿರಂಜನಿ ಲಿಂಗತ್ವದ ಕುರಿತು ಮಾಹಿತಿ ನೀಡಿದರು.ರುಡ್ ಸೆಟ್ ಸಂಸ್ಥೆ ನಿರ್ದೇಶಕ ಬೊಮ್ಮಾಯಿ,ಕೆನರಾ ಆರ್ಥಿಕ ಸಾಕ್ಷರತಾ ಸಂಸ್ಥೆ ಆಶಾಲತ ಸ್ವ ಉದ್ಯೋಗ […]

ಧರೆಗುರುಳಿದ ಮಹಾರಾಜ ಸ್ವಾಮಿ ದೇವಸ್ಥಾನದ ಪ್ರಾಂಗಾಣದ ಸೀಟ್ ಮಾಡು

ಕುಂದಾಪುರ:ಆರ್ಭಟಿಸಿದ ಗಾಳಿ ರಭಸಕ್ಕೆ ಬೈಂದೂರು ತಾಲೂಕಿನ ಮಹಾರಾಜ ಸ್ವಾಮಿ ಶ್ರೀ ವರಾಹ ದೇವಸ್ಥಾನದಲ್ಲಿನ ಪ್ರಾಂಗಾಣದ ಸೀಟ್ ಮಾಡು ತುಂಡು ತುಂಡಾಗಿ ಕೆಳಕ್ಕೆ ಬಿದ್ದಿದೆ.ಮಳೆ ನೀರು ದೇವಾಲಯದ ಒಳಗಡೆ ಸುರಿಯುತ್ತಿದೆ.ಕರ್ಕಾಟಕ ಅಮಾವಾಸ್ಯೆ ಜಾತ್ರೆಕ್ಕೆಂದು ಹೊರಗಡೆ ಹಾಕಿದ ಕಬ್ಬಿಣದ ಸೀಟ್ ಚಪ್ಪರ ಗಾಳಿ ಹೊಡೆತಕ್ಕೆ ತುಂಡರಸಿ ಕೆಳಗೆ ಬಿದ್ದಿದ್ದು.ಚಪ್ಪರಕ್ಕೆ ಹಾಕಿದ ಕಬ್ಬಿಣದ ಸೀಟ್ ಚೆಲ್ಲಾಪಿಲ್ಲಿಯಾಗಿವೆ.

You cannot copy content of this page