ಗುಡ್ಡಮ್ಮಾಡಿಯಲ್ಲಿ ಚಿರತೆ ಸಂಚಾರ

ಕುಂದಾಪುರ:ಸೇನಾಪುರ ಗ್ರಾಮದ ಗುಡ್ಡಮ್ಮಾಡಿ ಗ್ರಾಮಕರಣಿಕರ ಕಛೇರಿ ಎದುರುಗಡೆ ಮಂಗಳವಾರ ಸುಮಾರು 5.30 ಗಂಟೆ ಸುಮಾರಿಗೆ ಮುಖ್ಯ ರಸ್ತೆ ದಾಟಿ ಸೇನಾಪುರ ಕಲ್ಲಂಗಡಿ ಮನೆ ಪರಿಸರದತ್ತಾ ಸಾಗುತ್ತಿರುವುದನ್ನು ರಿಕ್ಷಾ ಚಾಲಕರೊಬ್ಬರು ಗಮನಿಸಿದ್ದಾರೆ.ಹಾಡು ಹಗಲಲ್ಲೆ ಜನವಸತಿ ಪ್ರದೇಶದಲ್ಲಿ ಚಿರತೆ ಓಡಾಟ ಮಾಡುತ್ತಿರುವುದು ಸಾರ್ವಜನಿಕ ವಲಯದಲ್ಲಿ ಆತಂಕ ಮೂಡಿದೆ.

ಗಗನ್ ಗಣಪತಿ ಭಟ್‍ಗೆ ಪ್ರಥಮ ಸ್ಥಾನ

ಮುಳ್ಳಿಕಟ್ಟೆ:ಐಡಿಯಲ್ ಪ್ಲೇ ಆಬಾಕಸ್ ಇಂಡಿಯಾ ಪ್ರೈವೇಟ್ ಲಿಮಿಟೆಡ್ ವತಿಯಿಂದ ಮೂಡುಬಿದ್ರೆ ಆಳ್ವಾಸ್ ಪಿಯು ಕ್ಯಾಂಪಸ್‍ನಲ್ಲಿ ನಡೆದ 20ನೇ ರಾಜ್ಯ ಮಟ್ಟದ ಅಬಾಕಸ್ ಮತ್ತು ಮೆಂಟಲ್ ಅರ್ಥಮೆಟಿಕ್ ಕಾಂಪಿಟೇಶನ್‍ನಲ್ಲಿ ಭಾಗವಹಿಸಿದ ತ್ರಾಸಿ ಡಾನ್ ಬಾಸ್ಕೊ ಶಾಲೆ ನಾಲ್ಕನೇ ತರಗತಿ ವಿದ್ಯಾರ್ಥಿ,ಕೆಸಿಡಿಸಿ ಅಧಿಕಾರಿ ಗಣಪತಿ ಎಸ್ ಭಟ್ ಮತ್ತು ಶಿಕ್ಷಕಿ ಗಂಗಾ ಗಣಪತಿ ಭಟ್ ಅವರ ಪುತ್ರ ಗಗನ್ ಗಣಪತಿ ಭಟ್ ಪ್ರಥಮ ಸ್ಥಾನ ಪಡೆದಿದ್ದಾರೆ.ಶಿಕ್ಷಕರಾದ ಪ್ರಸನ್ನ ಕೆ.ಬಿ ಮತ್ತು ಮಹಾಲಕ್ಷ್ಮೀ,ದೀಪಾ ಮರವಂತೆ ತರಬೇತಿ ನೀಡಿದ್ದರು.ರಾಜ್ಯದ ವಿವಿಧ ಜಿಲ್ಲೆಗಳಿಂದ ಒಟ್ಟು […]

ಆಯುಷ್ ಖಾರ್ವಿಗೆ ದ್ವಿತೀಯ ಸ್ಥಾನ

ಕುಂದಾಪುರ:ಐಡಿಯಲ್ ಪ್ಲೇ ಆಬಾಕಸ್ ಇಂಡಿಯಾ ಪ್ರೈವೇಟ್ ವತಿಯಿಂದ ಮೂಡುಬಿದ್ರೆ ಆಳ್ವಾಸ್ ಪಿಯು ಕ್ಯಾಂಪಸ್‍ನಲ್ಲಿ ನಡೆದ 20ನೇ ರಾಜ್ಯ ಮಟ್ಟದ ಅಬಾಕಸ್ ಮತ್ತು ಮೆಂಟಲ್ ಅರ್ಥಮೆಟಿಕ್ ಕಾಂಪಿಟೇಶನ್‍ನಲ್ಲಿ ಭಾಗವಹಿಸಿದ ಸರಕಾರಿ ಕಿರಿಯ ಪ್ರಾಥಮಿಕ ಗಂಗೊಳ್ಳಿ ರಥ ಬೀದಿ ಶಾಲೆ ನಾಲ್ಕನೇ ತರಗತಿ ವಿದ್ಯಾರ್ಥಿ,ಗಂಗೊಳ್ಳಿ ದಾಕುಹಿತ್ಲು ಗಣಪತಿ ಮತ್ತು ಲತಾ ದಂಪತಿ ಪುತ್ರ ಆಯುಷ್ ಜಿ ಖಾರ್ವಿ ದ್ವಿತೀಯ ಸ್ಥಾನ ಪಡೆದಿದ್ದಾರೆ.ಪ್ರಸನ್ನ ಕೆ.ಬಿ ಮತ್ತು ಸುನಿತಾ ಅವರು ತರಬೇತಿ ನೀಡಿದ್ದರು.

You cannot copy content of this page