ಟೊಯೊಟಾ ಮಾನ್ಸೂನ್ ಕಾರೋತ್ಸವ ಕಾರ್ಯಕ್ರಮ ಬ್ರಹ್ಮವಾರದಲ್ಲಿ ಉದ್ಘಾಟನೆ

ಬ್ರಹ್ಮಾವರ:ಯುನೈಟೆಡ್ ಟೊಯೊಟ ವತಿಯಿಂದ ಟೊಯೊಟಾ ಮಾನ್ಸೂನ್ ಕಾರೋತ್ಸವ ಕಾರ್ಯಕ್ರಮ ಬ್ರಹ್ಮಾವರದಲ್ಲಿ ಸೋಮವಾರ ನಡೆಯಿತು.ಟೊಯೊಟಾ ಮಾನ್ಸೂನ್ ಕಾರೋತ್ಸವ ಕಾರ್ಯಕ್ರಮ ಜೂ.10 ರಿಂದ ಜೂ.16 ರ ವರೆಗೆ ಬ್ರಹ್ಮವಾರದಲ್ಲಿ ನಡೆಯಲಿದೆ.ಮಾನ್ಸೂನ್ ಕಾರೋತ್ಸವ ಕಾರ್ಯಕ್ರಮದ ಅಂಗವಾಗಿ ಗ್ರಾಹಕರಿಗೆ ಆಕರ್ಷಕ ಆಫರ್ ಗಳನ್ನು ನೀಡಲಾಗುತ್ತಿದ್ದು.ತಮ್ಮ ಹಳೆ ಕಾರನ್ನು ನೀಡಿ ಉತ್ತಮ ಬೆಲೆಯನ್ನು ಪಡೆದುಕೊಂಡು ಹೊಸ ಕಾರನ್ನು ಖರೀದಿಸಲು ಅವಕಾಶವನ್ನು ಕಲ್ಪಿಸಲಾಗಿದೆ.ಕಡಿಮೆ ಬಡ್ಡಿ ದರದಲ್ಲಿ ಸ್ಥಳದಲ್ಲೆ ಕಾರ್ ಲೋನ್ ವ್ಯವಸ್ಥೆಯನ್ನು ಕೂಡ ಮಾಡಲಾಗಿದೆ.ಗ್ಲಾಂಝಾ ಕಾರ್ ಮೇಲೆ ಒಂದು ಲಕ್ಷದ ವರೆಗೆ ಹಾಗೂ ಹೈರೈಡರ್ ಕಾರ್ […]

ಮರಬಿದ್ದು ವಿದ್ಯುತ್ ಕಂಬಕ್ಕೆ ಹಾನಿ

ಕುಂದಾಪುರ:ಸತತವಾಗಿ ಸುರಿಯುತ್ತಿರುವ ಬಾರಿ ಗಾಳಿ ಮಳೆಗೆ ಗುಜ್ಜಾಡಿ ಗ್ರಾಮದ ನಾಯಕವಾಡಿಯಲ್ಲಿ ವಿದ್ಯುತ್ ಕಂಬದ ಮೇಲೆ ಮರ ಬಿದ್ದ ಪರಿಣಾಮ ವಿದ್ಯುತ್ ಕಂಬಕ್ಕೆ ಹಾನಿ ಆಗಿದೆ.ಆಸು ಪಾಸಿನ ಪ್ರದೇಶದ ಮನೆಗಳಿಗೆ ವಿದ್ಯುತ್ ಸಂಪರ್ಕ ವ್ಯವಸ್ಥೆ ಕಡಿತಗೊಂಡಿತ್ತು.ಮೆಸ್ಕಾಂ ಸಿಬ್ಬಂದಿಗಳು ಮರವನ್ನು ತೆರವುಗೊಳಿಸುವುದರ ಮುಖೇನ ವಿದ್ಯುತ್ ಸಂಪರ್ಕ ವ್ಯವಸ್ಥೆಯನ್ನು ಸರಿಪಡಿಸಿದರು.

ಸಾರ್ವಜನಿಕ ರಕ್ತದಾನ ಶಿಬಿರ ಉದ್ಘಾಟನೆ

ಕುಂದಾಪುರ:ಜೀವ ಜಲದಷ್ಟೆ ರಕ್ತವೂ ಪ್ರಾಮುಖ್ಯತೆಯನ್ನು ಪಡೆದುಕೊಂಡಿದೆ ಪ್ರತಿಯೊಬ್ಬರು ಕ್ಲಪ್ತ ಸಮಯದಲ್ಲಿ ರಕ್ತವನ್ನು ದಾನ ಮಾಡುವುದರಿಂದ ರೋಗಿಗಳ ಪ್ರಾಣವನ್ನು ಕಾಪಾಡಬಹುದು ಎಂದು ಬೈಂದೂರು ಕ್ಷೇತ್ರದ ಶಾಸಕ ಗುರುರಾಜ ಗಂಟಿಹೊಳೆ ಹೇಳಿದರು.ರಾಮೇಶ್ವರ ಸ್ಪೋಟ್ರ್ಸ್ ಕ್ಲಬ್ ಆಲೂರು,ಗ್ರಾಮ ಪಂಚಾಯಿತಿ ಆಲೂರು,ಶ್ರೀರಾಮೇಶ್ವರ ಯಕ್ಷಗಾನ ಕಲಾ ಸಂಘ ಆಲೂರು,ಗೆಳೆಯರ ಬಳಗ ಆಲೂರು,ಕಲ್ಪತರು ಕಲಾವಿದರು ಆಲೂರು ಮತ್ತು ವಿವಿಧ ಸಂಘ ಸಂಸ್ಥೆಗಳ ನೇತೃತ್ವದಲ್ಲಿ ಹಾಗೂ ಭಾರತೀಯ ರೆಡ್ ಕ್ರಾಸ್ ಸಂಸ್ಥೆ ಸಹಯೋಗದೊಂದಿಗೆ ಮೂಕಾಂಬಿಕ ಸಭಾಭವನ ಆಲೂರುನಲ್ಲಿ ಭಾನುವಾರ ನಡೆದ ಸಾರ್ವಜನಿಕ ರಕ್ತದಾನ ಶಿಬಿರವನ್ನು ಉದ್ಘಾಟಿಸಿ ಅವರು […]

You cannot copy content of this page