ಶ್ರೀಗಣೇಶ ಕ್ರೆಡಿಟ್ ಕೋ-ಆಪರೇಟಿವ್ ಸೊಸೈಟಿ 10% ಡಿವಿಡೆಂಟ್ ಘೋಷಣೆ

ಕುಂದಾಪುರ:ತಾಲೂಕಿನ ಹೊಸಾಡು ಗ್ರಾಮದ ಮುಳ್ಳಿಕಟ್ಟೆ ಶ್ರೀಗಣೇಶ ಕ್ರೆಡಿಟ್ ಕೋ-ಆಪರೇಟಿವ್ ಸೊಸೈಟಿ ಅದರ ಸಭೆ ಜಿ.ಎಸ್.ಆಚಾರ್ಯ ಸ್ಮಾರಕ ಸಭಾಭನದಲ್ಲಿ ಸಂಘದ ಅಧ್ಯಕ್ಷ ಮುರಳೀಧರ ಐತಾಳ್ ಅವರ ಅಧ್ಯಕ್ಷತೆಯಲ್ಲಿ ಶುಕ್ರವಾರ ನಡೆಯಿತು.ಕೃಷಿಕರು,ಕೂಲಿ ಕಾರ್ಮಿಕರು,ಬಡ ವರ್ಗದ ಜನರಿಗೆ ಅನುಕೂಲವಾಗುವ ಉದ್ದೇಶದಿಂದ ಹೊಸಾಡು ಗ್ರಾಮದ ಮುಳ್ಳಿಕಟ್ಟೆಯಲ್ಲಿ ಕಳೆದ ಏಳು ವರ್ಷಗಳ ಹಿಂದೆ ಆರಂಭಗೊಂಡಿರುವ ಶ್ರೀಗಣೇಶ ಕ್ರೆಡಿಟ್ ಕೋ-ಆಪರೇಟಿವ್ ಸೊಸೈಟಿ ಜನೋಪಯೋಗಿ ಕೆಲಸಗಳ ಮುಖಾಂತರ ಹೆಸರನ್ನು ಗಳಿಸಿದೆ.ಅಶಕ್ತರಿಗೆ ನೆರವು,ವಿದ್ಯಾರ್ಥಿ ವೇತನ,ಆರೋಗ್ಯ ಶಿಬಿರ ಆಯೋಜನೆ,ಶಾಲೆಗಳಿಗೆ ಪಿಠೋಪಕರಣಗಳನ್ನು ಕೊಡುಗೆಯಾಗಿ ನೀಡುತ್ತಾ ಸಂಘವು ಸಾಮಾಜಿಕ ಕಾರ್ಯಗಳಲ್ಲಿ ತೊಡಗಿಕೊಂಡಿದೆ.ಶ್ರೀಗಣೇಶ ಕ್ರೆಡಿಟ್ […]

ಎನ್ಎಂಎಂಎಸ್ ವಿದ್ಯಾರ್ಥಿ ವೇತನಕ್ಕೆ ಸಜನಿ ಆಯ್ಕೆ

ಕುಂದಾಪುರ:2023-24ನೇ ಸಾಲಿನ ಕೇಂದ್ರ ಮಾನವ ಸಂಪನ್ಮೂಲ ಇಲಾಖೆ ವತಿಯಿಂದ ನಡೆಸಲ್ಪಟ್ಟ ಎನ್‍ಎಂಎಂಎಸ್ ಅರ್ಹತಾ ಪರೀಕ್ಷೆಯಲ್ಲಿ ಅತ್ಯುತ್ತಮ ಸಾಧನೆ ಮಾಡಿದ ಗಂಗೊಳ್ಳಿ ಕೊಂಚಾಡಿ ರಾಧಾ ಶೆಣೈ ಸರಕಾರಿ ಹಿರಿಯ ಪ್ರಾಥಮಿಕ ಶಾಲೆ 8ನೇ ತರಗತಿ ವಿದ್ಯಾರ್ಥಿನಿ ಸಜನಿ ವಿದ್ಯಾರ್ಥಿ ವೇತನಕ್ಕೆ ಆಯ್ಕೆಯಾಗಿದ್ದಾರೆ.48 ಸಾವಿರ ವಿದ್ಯಾರ್ಥಿ ವೇತನ ದೊರಕಲಿದೆ.

ಸಮುದ್ರದಲ್ಲಿ ಛದ್ರಗೊಂಡ ಮೀನುಗಾರಿಕಾ ಬೋಟ್

ಗಂಗೊಳ್ಳಿ:ಭಟ್ಕಳ ತಾಲೂಕಿನ ವ್ಯಾಪ್ತಿ ಸಮುದ್ರದಲ್ಲಿ ಮೀನುಗಾರಿಕೆ ನಡೆಸುತ್ತಿದ್ದ ಸಮಯದಲ್ಲಿ ಅಪಘಾತಕ್ಕೆ ಈಡಾಗಿದ್ದ ಮಾಲ್ತೀದೇವಿ-2 ಎನ್ನುವ ಬೋಟ್ ಗಂಗೊಳ್ಳಿ ಸಮುದ್ರ ಕಿನಾರೆಯಲ್ಲಿ ಅಲೆಗಳ ಹೊಡೆತಕ್ಕೆ ಮಂಗಳವಾರ ಛದ್ರಗೊಂಡಿದೆ.ಬೋಟ್‍ನ ಪ್ರಮುಖ ಭಾಗಗಳು ಸಮುದ್ರ ಪಾಲಾಗಿದೆ.ಮೇ.16 ರಂದು ಮಲ್ಪೆಯಿಂದ ಭಟ್ಕಳ ಭಾಗಗಕ್ಕೆ ಮೀನುಗಾರಿಕೆಗೆ ತೆರಳಿದ್ದ ಮಾಲ್ತೀ ದೇವಿ-2 ಎನ್ನುವ ಬೋಟ್‍ಗೆ ಮೇ.17 ರಂದು ಬೆಳಗಿನ ಜಾವಾ 5 ಗಂಟೆ ಸುಮಾರಿಗೆ ಅದೆ ಜಾಗದಲ್ಲಿ ಮೀನುಗಾರಿಕೆ ನಡೆಸುತ್ತಿದ್ದ ದುರ್ಗಾ ಎನ್ನುವ ಬೋಟ್ ಡಿಕ್ಕಿ ಹೊಡೆದಿದೆ.ಅಪಘಾತಕ್ಕೆ ಈಡಾಗಿದ್ದ ಬೋಟ್‍ನ್ನು ಪಾಂಚಜನ್ಯ ಹಾಗೂ ದುರ್ಗಾ ಎನ್ನುವ […]

You cannot copy content of this page