ಕೊಲ್ಲೂರು ಶ್ರೀ ಮೂಕಾಂಬಿಕಾ ದೇವಿಗೆ ಇಳರಾಜ ವಜ್ರ ಕಿರೀಟ ಸಮರ್ಪಣೆ

ಕುಂದಾಪುರ:ಕೊಲ್ಲೂರು ಶ್ರೀ ಮೂಕಾಂಬಿಕೆ ದೇವಿ ಪರಮ ಭಕ್ತರಾದ ಸಂಗೀತ ನಿರ್ದೇಶಕ ಇಳಯ ರಾಜ ಅವರು ಶ್ರೀ ಮೂಕಾಂಬಿಕಾ ದೇವಿಗೆ ವಜ್ರ ಸಹಿತ ಆಭರಣಗಳು ಹಾಗೂ ವೀರಭದ್ರ ಸ್ವಾಮಿಗೆ ರಜತ ಕಿರೀಟ ಸಹಿತ ಖಡ್ಗವನ್ನು ಬುಧವಾರ ಸಮರ್ಪಿಸಿದ್ದಾರೆ.ನಾನಾ ಧಾರ್ಮಿಕ ವಿಧಿವಿಧಾನಗಳೊಂದಿಗೆ ಶ್ರೀ ದೇವಿಗೆ ವಜ್ರ ಕಿರೀಟವನ್ನು ಸಮರ್ಪಣೆ ಮಾಡಲಾಯಿತು.

ಹರ್ಕೂರು-ನಾರ್ಕಳಿ ಮದುಕೋಡ್ಲು ಎಸ್.ಟಿ ಕಾಲೋನಿ ರಸ್ತೆ ಅಭಿವೃದ್ಧಿಗೆ ಗುದ್ದಲಿ ಪೂಜೆ

ಕುಂದಾಪುರ:ಆದಿವಾಸಿ ಜನಾಂಗದ ಮುಖಂಡರಾದಂತಹ ಬಿರ್ಸಾ ಮುಂಡ ಅವರ ಜನ್ಮ ದಿನಾಚರಣೆ ದಿನದಂದು ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರು ಸಂಕಲ್ಪ ಮಾಡಿದಂತೆ ಬುಡಕಟ್ಟು ಜನಾಂಗದವರು ವಾಸ ಮಾಡುವಂತಹ ಪ್ರದೇಶಗಳನ್ನು ಗುರುತಿಸಿ ಎಲ್ಲಾ ರೀತಿಯ ಸೌಲಭ್ಯಗಳನ್ನು ದೊರಕಿಸಿ ಕೊಡಬೇಕು ಎನ್ನುವ ಉದ್ದೇಶದಿಂದ ಯೋಜನೆಯನ್ನು ರೂಪಿಸಲಾಗಿದ್ದು.ಅದರ ಭಾಗವಾಗಿ ಬೈಂದೂರು ಕ್ಷೇತ್ರದಲ್ಲಿ ಸುಮಾರು 4.ಕೋಟಿಗೂ ಅಧಿಕ ಮೊತ್ತದ ಅನುದಾನದಲ್ಲಿ ಪಿಎಂ ಜನ್‍ಮನ್ ರಸ್ತೆ ಅಭಿವೃದ್ಧಿ ಕಾಮಗಾರಿ ಮಾಡಲಾಗುತ್ತಿದೆ ಎಂದು ಸಂಸದ ಬಿ.ವೈ ರಾಘವೇಂದ್ರ ಹೇಳಿದರು.ಪಿಎಂ ಜನ್‍ಮನ್ ಯೋಜನೆಯಡಿ 94.34 ಲಕ್ಷ.ರೂ ವೆಚ್ಚದಲ್ಲಿ […]

ಆರ್ಭಟಿಸಿದ ಮಳೆ ನಡುವೆ ಸಾಂಗವಾಗಿ ನೆರವೇರಿದ ಚೌತಿ ಹಬ್ಬ ಮೂಗಿಲು ಮುಟ್ಟಿದ ಭಕ್ತರ ಜಯಘೋಷ,ಅದ್ದೂರಿಯಾಗಿ ನಡೆದ ವಿಘ್ನೇಶ್ವರನ ಮೆರವಣಿಗೆ

ಕುಂದಾಪುರ:ತಾಲೂಕಿನ ಗಂಗೊಳ್ಳಿ,ತ್ರಾಸಿ,ಮುಳ್ಳಿಕಟ್ಟೆ,ಅರಾಟೆ,ಹಕ್ಲಾಡಿ,ಆಲೂರು,ಕುಂದಬಾರಂದಡಿ,ನಾಡ,ಪಡುಕೋಣೆ,ಬಡಾಕೆರೆ,ಹೆಮ್ಮಾಡಿ,ನೂಜಾಡಿ ಸೇರಿದಂತೆ ನಾನಾ ಭಾಗದಲ್ಲಿ ವಿವಿಧ ಸೇವಾ ಸಮಿತಿಗಳ ವತಿಯಿಂದ ಪೂಜಿಸಲ್ಪಟ್ಟ ಗಣಪತಿ ಮೂರ್ತಿ ಜಲಸ್ತಂಭ ಕಾರ್ಯ ಅಬ್ಬರಿಸಿದ ಮಳೆ ನಡುವೆ ಸಂಭ್ರಮದಿಂದ ನಡೆಯಿತು.ಮಳೆಯನ್ನು ಲೆಕ್ಕಿಸದೆ ಮಹಿಳೆಯರು,ಪುರುಷರು,ಮಕ್ಕಳು ಮೆರವಣಿಗೆಯಲ್ಲಿ ಭಾಗವಹಿಸಿದ್ದರು.ಕುಣಿತ ಭಜನೆ,ಚಂಡೆ ವಾದನ,ಟ್ಯಾಬ್ಲೋ ಮೆರವಣಿಗೆ ಸೊಬಗನ್ನು ಹೆಚ್ಚಿಸಿತು.ಭಜನಾ ತಂಡಗಳು ಮಳೆಗೆ ಸಡ್ಡು ಹೊಡೆದಂತೆ ಹೆಜ್ಞೆ ಹಾಕಿದರು.ಚೌತಿ ಸಂಭ್ರಮಕ್ಕೆ ಮಳೆರಾಯ ಅಡ್ಡಿ ಉಂಟು ಮಾಡಿದ್ದರು.ಭಕ್ತರ ಸಂಭ್ರಮಕ್ಕೆ ಕೊರತೆ ಉಂಟಾಗಿಲ್ಲ.ಯಾವುದೆ ರೀತಿಯ ಅಹಿತಕರ ಘಟನೆಗಳು ನಡೆಯದೆ ಭಕ್ತಿ ಭಾವ ಶೃದ್ಧೆಯಿಂದ ಗಣೇಶೋತ್ಸವ ಕಾರ್ಯಕ್ರಮ ಜರುಗಿತು.ರಕ್ಷಣಾ ಕಾರ್ಯದಲ್ಲಿ ತೊಡಗಿಕೊಂಡಿರುವ ಪೆÇಲೀಸ್ […]

You cannot copy content of this page