ಮೆಕೋಡು ಶೇಡಕುಳಿ ಕೆರೆ ದಂಡೆ ಕುಸಿದು ಅಡಿಕೆ ತೋಟಕ್ಕೆ ಹಾನಿ

ಕುಂದಾಪುರ:ಭಾರಿ ಮಳೆಗೆ ಬೈಂದೂರು ತಾಲೂಕಿನ ಹೇರೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಮೆಕೋಡು ಶ್ರೀದುರ್ಗಾಪರಮೇಶ್ವರಿ ದೇವಸ್ಥಾನ ಮೇಲ್ಭಾಗದಲ್ಲಿರುವ ಶೇಡಕುಳಿ ಕೆರೆ ದಂಡೆ ಕುಸಿದು ಹೋಗಿದ್ದ ಘಟನೆ ಮಂಗಳವಾರ ನಡೆದಿದೆ.ಕೆರೆ ದಂಡೆ ಕುಸಿದು ಹೋಗಿದ್ದರ ಪರಿಣಾಮ ಕೆರೆ ಕೇಳ ಭಾಗದಲ್ಲಿರುವ ಪ್ರವೀಣ್ ಚಂದ್ರಶೆಟ್ಟಿ ಅವರ ತೋಟಕ್ಕೆ ನೀರಿನೊಂದಿಗೆ ಮಣ್ಣು ನುಗ್ಗಿ ನೂರಾರು ಅಡಿಕೆ ಗಿಡ ಸಹಿತ ಬಾಳೆ ನಾಶವಾಗಿದೆ.ಘಟನೆಯಲ್ಲಿ ಲಕ್ಷಾಂತರ.ರೂ ನಷ್ಟ ಉಂಟಾಗಿದೆ.ಮೆಕೋಡು ದೇವಸ್ಥಾನದ ಅನ್ನ ಛತ್ರದ ಒಳಗೆ ಕೆರೆ ನೀರು ನುಗ್ಗಿದ್ದರಿಂದ ಕೇಸರು ಮಯವಾಗಿದ್ದು ಕಟ್ಟಡದೊಳಗೆ ಇದ್ದ ಅಮೂಲ್ಯವಾದ […]

ಮರವಂತೆ ಶ್ರೀ ಮಹಾರಾಜ ವರಾಹ ಸ್ವಾಮಿ ದೇವಸ್ಥಾನದ ಬೆಳ್ಳಿ ರಥ ನಿರ್ಮಾಣಕ್ಕೆ ಧನ ಸಹಾಯ ಹಸ್ತಾಂತರ

ಕುಂದಾಪುರ:ವಲಯ ನಾಡದೋಣಿ ಮೀನುಗಾರರ ಸಂಘ ಉಪ್ಪುಂದ ವತಿಯಿಂದ ಮರವಂತೆ ಶ್ರೀ ಮಹಾರಾಜ ವರಾಹ ಸ್ವಾಮಿ ದೇವಸ್ಥಾನದ ಬೆಳ್ಳಿ ರಥ ನಿರ್ಮಾಣಕ್ಕೆ 10,00,101 ರೂ ಮೊತ್ತದ ಚೆಕ್‍ನ್ನು ಶುಕ್ರವಾರ ದೇವಸ್ಥಾನದಲ್ಲಿ ವಿಶೇಷ ಪೂಜೆ ಸಲ್ಲಿಸಿ ಹಸ್ತಾಂತರಿಸಲಾಯಿತು.ಸಂಘದ ಅಧ್ಯಕ್ಷ ಉಪ್ಪುಂದ ಆನಂದ ಖಾರ್ವಿ ಮಾತನಾಡಿ, ಮೀನುಗಾರರು ಈ ಹಿಂದೆ ದೇವಸ್ಥಾನಕ್ಕೆ ಉಪ್ಪುಂದ ರಥವನ್ನು ನೀಡಿದ್ದು ಶ್ರೀ ದೇವರಲ್ಲಿ ಮೀನುಗಾರಿಕಾ ಉದ್ಯೋಗದಲ್ಲಿ ಸಮೃದ್ಧಿಯನ್ನು ಕರುಣಿಸುವ ಸಲುವಾಗಿ ಪ್ರಾರ್ಥಿಸಿದಂತೆ ಬೆಳ್ಳಿ ರಥದ ನಿರ್ಮಾಣಕ್ಕೆ ಸಂಘದ ಮೀನುಗಾರರ ವತಿಯಿಂದ ಈ ಕೊಡುಗೆ ನೀಡಲಾಗಿದೆ ಎಂದು […]

ಮನೆ ಮೇಲೆ ಮರ ಬಿದ್ದು ಹಾನಿ:ವಿಪತ್ತು ನಿರ್ವಹಣಾ ತಂಡದಿಂದ ತೆರವು

ಕುಂದಾಪುರ:ಭಾನುವಾರ ಸುರಿದ ಭಾರಿ ಗಾಳಿ ಮಳೆಗೆ ಬೈಂದೂರು ತಾಲೂಕಿನ ನಾಡ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಗುಡ್ಡೆಯಂಗಡಿ ಜನತಾ ಕಾಲೋನಿಯಲ್ಲಿ ಬೃಹತ್ ಗಾತ್ರದ ಮರ ವಿದ್ಯುತ್ ತಂತಿ ಮೇಲೆ ಬಿದ್ದ ಪರಿಣಾಮ ವಿದ್ಯುತ್ ಕಂಬ ಮುರಿದು ಬಿದ್ದಿದೆ.ಗಂಗೆ ದೇವಾಡಿಗ ಹಾಗೂ ರಾಘವೇಂದ್ರ ಭಂಡಾರಿ ಅವರ ಮನೆಗೂ ಹಾನಿ ಉಂಟಾಗಿದೆ.ರಸ್ತೆ ಸಂಚಾರಕ್ಕೂ ತೊಡಕು ಉಂಟಾಗಿತ್ತು.ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ವಿಪತ್ತು ನಿರ್ವಹಣಾ ತಂಡ ಪಡುಕೋಣೆ-ನಾಡ ವಲಯದ ಸದಸ್ಯರು ಕ್ಷೀಪ್ರಗತಿಯಲ್ಲಿ ಮರವನ್ನು ತೆರವುಗೊಳಿಸಿದರು.

You cannot copy content of this page