ಬಡಾಕೆರೆ ಶಾಲೆ ವಿದ್ಯಾರ್ಥಿಗಳಿಗೆ ಪುಸ್ತಕ ವಿತರಣೆ

ಕುಂದಾಪುರ:ಬೈಂದೂರು ವಲಯದ ಸರಕಾರಿ ಹಿರಿಯ ಪ್ರಾಥಮಿಕ ಬಡಾಕೆರೆ ಶಾಲೆಯಲ್ಲಿನ ಎಲ್‍ಕೆಜಿ ಮತ್ತು ಯುಕೆಜಿ ವಿದ್ಯಾರ್ಥಿಗಳಿಗೆ ಬಾಲ್ಯ ಫೌಂಡೇಶನ್ ವತಿಯಿಂದ ಪುಸ್ತಕ,ಸ್ಕೂಲ್ ಬ್ಯಾಗ್ ಮತ್ತು ಶಾಲಾ ಕೊಠಡಿಗೆ ಪೇಂಟಿಂಗ್ ಕಾರ್ಯವನ್ನು ನೆರವೇರಿಸಲು ಧನಸಹಾಯದ ರೂಪದಲ್ಲಿ ಚೆಕ್ ಭಾನುವಾರ ವಿತರಿಸಲಾಯಿತು.ಬಾಲ್ಯ ಫೌಂಡೇಶನ್ ಅಧ್ಯಕ್ಷ ಎಸ್.ನಾಗರಾಜ್ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿ,ಬಾಲ್ಯ ಫೌಂಡೇಶನ್ ಸಂಸ್ಥೆಯು ಸ್ವಾಮಿ ವಿವೇಕಾನಂದರ ತತ್ವ ಹಾಗು ಡಾ. ಅಬ್ದುಲ್ ಕಲಾಂ ಅವರ ಸಿದ್ಧಾಂತದಿಂದ ಪ್ರೇರೇಪಿತಗೊಂಡು 2009ರಲ್ಲಿ ಪ್ರಾರಂಭವಾಯಿತು.ಸಂಸ್ಥೆಯ ಗುರಿ ಮಕ್ಕಳಲ್ಲಿ ವಿದ್ಯಾಭ್ಯಾಸದ ಮಹತ್ವತೆಯನ್ನು ತಿಳಿಸುವುದು ಮತ್ತು ಪ್ರತಿಯೊಂದು ಮಗುವನ್ನು […]

ಮಾರಣಕಟ್ಟೆ ಕೃಷ್ಣಮೂರ್ತಿ ಮಂಜರಿಗೆ ಶ್ರೀನಾಗಾನುಗ್ರಹ ಪ್ರಶಸ್ತಿ ಪ್ರದಾನ

ಕುಂದಾಪುರ:ಬೈಂದೂರು ತಾಲೂಕಿನ ಮರವಂತೆ ಶ್ರೀ ಸುಬ್ರಹ್ಮಣ್ಯ,ಶ್ರೀ ವಿದ್ಯಾಗಣಪತಿ,ಶ್ರೀ ನವಗ್ರಹ ದೇವಸ್ಥಾನದಲ್ಲಿ 9ನೇ ವರ್ಷದ ನಾಗರ ಪಂಚಮಿ ಹಬ್ಬ ಮತ್ತು ಶ್ರೀ ನಾಗಾನುಗ್ರಹ ಪ್ರಶಸ್ತಿ ಪ್ರಧಾನ ಸಮಾರಂಭ ಹಾಗೂ ಅನ್ನ ಸಂತರ್ಪಣೆ ಕಾರ್ಯಕ್ರಮ ನಾನಾ ಧಾರ್ಮಿಕ ವಿಧಿವಿಧಾನದೊಂದಿಗೆ ಶುಕ್ರವಾರ ನಡೆಯಿತು.ವಾಸ್ತು ತಜ್ಞ,ಯಕ್ಷಗಾನ ಪ್ರಸಂಗ ಕರ್ತರಾದ ಜ್ಯೋತಿಷಿ ಡಾ.ಬಸವರಾಜ್ ಶೆಟ್ಟಿಗಾರ್ ಧಾರ್ಮಿಕ ಸಭಾ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು.ಉಪ್ಪುಂದ ರಾಘವೇಂದ್ರಸ್ವಾಮಿ ಮಠದ ವಿಚಾರಣಾಕರ್ತ ಸುಭಾಶ್ಚಂದ್ರ ಪುರಾಣಿಕ ಉದ್ಘಾಟಿಸಿದರು.ಮಾಜಿ ಶಾಸಕ ಬಿ.ಎಂ ಸುಕುಮಾರ ಶೆಟ್ಟಿ ಶುಭಾಂಶನೆಗೈದರು.ಜಿಲ್ಲಾ ಪಂಚಾಯತ್ ಮಾಜಿ ಅಧ್ಯಕ್ಷ ಎಸ್ ರಾಜು […]

ಮಂಜುನಾಥ ಸಾಲಿಯಾನ್ ಪರಿಯಾಳ ಸಮಾಜ ಮಹಾಸಭಾ ಅಧ್ಯಕ್ಷರಾಗಿ ಆಯ್ಕೆ

ಕುಂದಾಪುರ:ಪರಿಯಾಳ ಸಮಾಜ ಮಹಾಸಭಾ ಮಂಗಳೂರು ಅದರ 2024-25 ನೇ ಸಾಲಿನ ನೂತನ ಅಧ್ಯಕ್ಷರಾಗಿ ಮಂಜುನಾಥ್ ಸಾಲಿಯಾನ್ ತ್ರಾಸಿ ಆಯ್ಕೆಯಾಗಿದ್ದಾರೆ.ಗೌರವಾಧ್ಯಕ್ಷರಾಗಿ ಪ್ರವೀಣ್ ಸಾಲಿಯಾನ್ ಕಾಫಿ ಕಾಡು ಮಂಗಳೂರು,ಕಾರ್ಯದರ್ಶಿಯಾಗಿ ಸಂದೀಪ್ ಸಾಲಿಯಾನ್ ಹಾರಾಡಿ,ಕೋಶಾಧಿಕಾರಿಯಾಗಿ ಗೌತಮ್ ಬಂಗೇರ ಕರಂಬಾರು ಆಯ್ಕೆಯಾಗಿದ್ದಾರೆ.ಇತ್ತೀಚಿಗೆ ಪರಿಯಾಳ ಸಮಾಜ ಸಮುದಾಯ ಭವನ ಉಚ್ಚಿಲದಲ್ಲಿ ನಡೆದ ಸಂಘದ ಎರಡನೇ ವಾರ್ಷಿಕ ಮಹಾಸಭೆಯಲ್ಲಿ ಮಹಾಸಭಾದ ಪದಾಧಿಕಾರಿಗಳ ಆಯ್ಕೆ ಪ್ರಕ್ರಿಯೆ ನಡೆಯಿತು.ಈ ಸಂದರ್ಭದಲ್ಲಿ ಸಂಘದ ಸರ್ವಸದಸ್ಯರು ಉಪಸ್ಥಿತರಿದ್ದರು.

You cannot copy content of this page