ಮೀನುಗಾರರಿಂದ ಸಮುದ್ರ ರಾಜನಿಗೆ ಪ್ರಾರ್ಥನೆ ಸಲ್ಲಿಕೆ

ಬೈಂದೂರು:ಮೀನುಗಾರಿಕೆ ಕುಂಠಿತವಾದ ಹಿನ್ನೆಲೆಯಲ್ಲಿ ಮತ್ಸ್ಯ ಸಂಪತ್ತು ವೃದ್ಧಿಯಾಗಲಿ ಎಂದು ಶ್ರೀರಾಮ ಮಂದಿರ ಮರವಂತೆ ಮೀನುಗಾರರ ಸೇವಾ ಸಮಿತಿ ವತಿಯಿಂದ ಮರವಂತೆ ಮಹಾರಾಜ ಸ್ವಾಮಿ ಶ್ರೀವರಾಹ ದೇವರಿಗೆ ಬುಧವಾರ ವಿಶೇಷವಾದ ಪೂಜೆ ಸಲ್ಲಿಸಿ,ಸಮುದ್ರ ರಾಜನಿಗೆ ಪ್ರಾರ್ಥನೆ ಸಲ್ಲಿಸಲಾಯಿತು.ಈ ಸಂದರ್ಭ ಶ್ರೀರಾಮ ಮಂದಿರ ಮರವಂತೆ ಮೀನುಗಾರರ ಸೇವಾ ಸಮಿತಿ ಅಧ್ಯಕ್ಷ ವಾಸುದೇವ ಖಾರ್ವಿ ಮತ್ತು ಪದಾಧಿಕಾರಿಗಳು ಹಾಗೂ ಸರ್ವ ಸದಸ್ಯರು ಉಪಸ್ಥಿತರಿದ್ದರು.

ಹೆಮ್ಮಾಡಿ ಜನತಾ ಸ್ವತಂತ್ರ ಪದವಿಪೂರ್ವ ಕಾಲೇಜಿನ ವಿದ್ಯಾರ್ಥಿನಿ ಛಾಯಾ ಪೂಜಾರಿ ರಾಜ್ಯ ಮಟ್ಟಕ್ಕೆ ಆಯ್ಕೆ

ಕುಂದಾಪುರ:ಪದವಿ ಪೂರ್ವ ಶಿಕ್ಷಣ ಇಲಾಖೆ ಮತ್ತು ತ್ರಿಶಾ ವಿದ್ಯಾ ಪದವಿ ಪೂರ್ವ ಕಾಲೇಜು ಉಡುಪಿ ಅವರ ಜಂಟಿ ಆಶ್ರಯದಲ್ಲಿ ಉಡುಪಿಯಲ್ಲಿ ನಡೆದ ಜಿಲ್ಲಾ ಮಟ್ಟದ ಚದುರಂಗ ಸ್ಪರ್ಧೆಯಲ್ಲಿ ಕುಂದಾಪುರ ತಾಲೂಕಿನ ಹೆಮ್ಮಾಡಿ ಜನತಾ ಸ್ವತಂತ್ರ ಪದವಿಪೂರ್ವ ಕಾಲೇಜಿನ ದ್ವಿತೀಯ ಪಿ.ಯು.ಸಿ ವಿಜ್ಞಾನ ವಿಭಾಗದ ವಿದ್ಯಾರ್ಥಿನಿ ಛಾಯಾ ಸಿ ಪೂಜಾರಿ ಅವರು ವಿಜೇತರಾಗಿ ರಾಜ್ಯ ಮಟ್ಟದ ಸ್ಪರ್ಧೆಗೆ ಆಯ್ಕೆಯಾಗಿದ್ದಾರೆ.

ಚಂದ್ರಯಾನ -3 ತಂಡದಲ್ಲಿ ಕುಂದಾಪುರದ-ಮಂಕಿ ಯುವ ವಿಜ್ಞಾನಿ ಆಕಾಶ್ ಶೆಟ್ಟಿ

ಕುಂದಾಪುರ:ಭಾರತದ ಮಹಾತ್ವಾಕಾಂಕ್ಷೆಯ ಚಂದ್ರಯಾನ-3 ಯಶಸ್ವಿಯಾಗಿ ಉಡಾವಣೆಗೊಂಡು ಲ್ಯಾಂಡರ್‍ನ ಸಾಫ್ಟ್ ಲ್ಯಾಂಡಿಂಗ್ ಬುಧವಾರ ಯಶಸ್ವಿಯಾಗಿ ನೆರವೇರಿದೆ.ಚಂದ್ರಯಾನ-3 ಟೀಮ್‍ನಲ್ಲಿ ಕುಂದಾಪುರ ತಾಲೂಕಿನ ಗುಜ್ಜಾಡಿ ಗ್ರಾಮದ ಮಂಕಿ ಕೇಳಾಮನೆ ನಿವಾಸಿ ಪಾರ್ವತಿ ಶೆಟ್ಟಿ ಮತ್ತು ಕೆರಾಡಿ ಗ್ರಾಮದ ಚಪ್ಪರಮಕ್ಕಿ ದಿ.ಅಶೋಕ್ ಶೆಟ್ಟಿ ಅವರ ಮಗ ಯುವ ವಿಜ್ಞಾನಿ ಆಕಾಶ್ ಶೆಟ್ಟಿ ಅವರು ಇರುವುದು ಕುಂದಾಪುರ ತಾಲೂಕಿಗೆ ಹೆಮ್ಮ. ಯುವ ವಿಜ್ಞಾನಿ ಆಕಾಶ್ ಶೆಟ್ಟಿ ಅವರು ಇಸ್ರೋ ಚಂದ್ರಯಾನ-3 ರಲ್ಲಿ ಸ್ಪೇಸ್ ಕ್ರಾಫ್ಟ್ ಮೆಕ್ಯಾನಿಸಂ ಗ್ರೂಪ್‍ನಲ್ಲಿ ಪ್ರೋಜೆಕ್ಟ್ ಮ್ಯಾನೇಂಜರ್ ಆಗಿ ಕಾರ್ಯ ನಿರ್ವಹಿಸಿದ್ದಾರೆ.ಯೋಜನೆಯ […]

You cannot copy content of this page