ಸ್ನೇಹ ಸಂಘ ಗಣೇಶೋತ್ಸವ ಸಮಿತಿ ಹೊಸಪೇಟೆ ತ್ರಾಸಿ, ಸಂಭ್ರಮದ ಗಣೇಶ ಚೌತಿ ಆಚರಣೆ

ಕುಂದಾಪುರ:-ಸ್ನೇಹ ಸಂಘ ತ್ರಾಸಿ – ಹೊಸಪೇಟೆ ಗಣೇಶೋತ್ಸವ ಸಮಿತಿ ವತಿಯಿಂದ 28ನೇ ವರ್ಷದ ಗಣೇಶ ಚೌತಿ ಹಬ್ಬ ಅನ್ನದಾನ ಸೇವೆ ಸಹಿತ ನಾನಾ ಧಾರ್ಮಿಕ ಕಾರ್ಯಕ್ರಮಗಳೊಂದಿಗೆ ಅದ್ದೂರಿ ನಡೆಯಿತು.ಭಾದ್ರಪದ ಶುಕ್ಲ ಪಕ್ಷದ ಚತುರ್ಥಿ ದಿನದಂದು ಶುಭ ಮುಹೂರ್ತದಲ್ಲಿ ವಿಘ್ನ ನಿವಾರಕ ನಾದ ಗಣೇಶನ ಮೂರ್ತಿಯನ್ನು ಪ್ರತಿಷ್ಠಾಪಿಸಿ ಮೂರು ದಿನಗಳ ಕಾಲ ನಾನಾ ಧಾರ್ಮಿಕ ವಿಧಿವಿಧಾನ ಗಳೊಂದಿಗೆ ಪೂಜಿಸಿ ಗಣೇಶ ದೇವರ ಮೂರ್ತಿಯನ್ನು ಭವ್ಯ ಮೆರವಣಿಗೆ ಮೂಲಕ ಜಲ ಸ್ತಂಭನ ಮಾಡಲಾಗುತ್ತದೆ.ಸ್ನೇಹ ಸಂಘ ಹೊಸಪೇಟೆ ತ್ರಾಸಿ ವತಿಯಿಂದ ಕಳೆದ […]

ಗಂಗೊಳ್ಳಿಯಲ್ಲಿ ಪೊಲೀಸ್ ರೂಟ್ ಮಾರ್ಚ್

ಕುಂದಾಪುರ:ಗಣೇಶ ಹಬ್ಬದ ಪ್ರಯುಕ್ತ ಮುಂಜಾಗ್ರತಾ ಕ್ರಮದ ಭಾಗವಾಗಿ ಗಂಗೊಳ್ಳಿಯಲ್ಲಿ ಬೈಂದೂರು ವೃತ್ತ ನಿರೀಕ್ಷ ಸವಿತ್ರ ತೇಜ್ ಅವರ ನೇತೃತ್ವದಲ್ಲಿ ಪೊಲೀಸ್ ರೂಟ್ ಮಾರ್ಚ್ ಸೋಮವಾರ ನಡೆಯಿತು.ಗಂಗೊಳ್ಳಿ ಠಾಣೆ ಪಿಎಸ್‌ಐ ಹರೀಶ್ ಆರ್ ನಾಯ್ಕ್ ಮತ್ತು ಸಿಬ್ಬಂದಿಗಳು,ಕೆಎಸ್‌ಆರ್‌ಪಿ,ಡಿಎಆರ್ ಸಿಬ್ಬಂದಿಗಳು ಭಾಗವಹಿಸಿದ್ದರು.

ನಾಡಿನೆಲ್ಲೆಡೆ ಗಣೇಶ ಚತುರ್ಥಿ ಹಬ್ಬ ಸಂಭ್ರಮದಿಂದ ಆಚರಣೆ

ಕುಂದಾಪುರ:ಪ್ರಥಮ ಪೂಜಿತ ವಿಘ್ನ ನಿವಾರಕನಾದ ಗಣೇಶನನ್ನು ಆರಾಧಿಸದ ವ್ಯಕ್ತಿಯಿಲ್ಲ ಎಲ್ಲಾ ಜಾತಿ ಜನಾಂಗದವರು ಗಣೇಶನನ್ನು ಪೂಜಿಸುತ್ತಾರೆ.ನಮ್ಮ ಬಯಕೆಗಳ ಈಡೇರಿಕೆಗಾಗಿ ಗಜಮುಖನ ಮೊರೆ ಹೋಗುತ್ತೇವೆ.ಸಂಗೀತ,ನೃತ್ಯ,ಚಿತ್ರ,ಶಿಲ್ಪ,ನಾಟಕ,ಯಕ್ಷಗಾನ,ಶುಭಕಾರ್ಯ,ದೇವತಾ ಕಾರ್ಯಗಳ ಆರಂಭಿಕ ಹಂತವಾಗಿ ಗಣೇಶನಿಗೆ ಪೂಜೆ ಸಲ್ಲಿಸಿ ಅವನ ಸ್ತುತಿಸಿಯೇ ಕಾರ್ಯಾರಂಭ ಮಾಡುತ್ತೇವೆ.ಭಾದ್ರಪದ ಮಾಸದ ಶುಕ್ಲಪಕ್ಷದ ಚತುರ್ಥಿ ದಿನ ಆಚರಿಸಲಾಗುವ ಗಣೇಶ ಚುತಿರ್ಥಿ ಗಣೇಶ ಹುಟ್ಟಿದ ದಿನ ಎಂದು ಪುರಾಣದ ಪ್ರಕಾರ ನಂಬಲಾಗಿದೆ.ನಾಡಿನಾದ್ಯಂತ ಗಣೇಶ ಚುತುರ್ಥಿಯನ್ನು ಅದ್ದೂರಿಯಾಗಿ ಆಚರಿಸಲಾಗುತ್ತಿದ್ದು.ನಾನಾ ಕಡೆಗಳಲ್ಲಿ ಗಣೇಶ ದೇವರ ಮೂರ್ತಿಯನ್ನು ಸಾರ್ವಜನಿಕ ಸ್ಥಳಗಳಲ್ಲಿ ಪ್ರತಿಷ್ಠಾಪಿಸಿ ಪೂಜಿಸಲಾಗುತ್ತಿದ್ದು.ಚೌತಿ ಹಬ್ಬ ಸಡಗರದಿಂದ […]

You cannot copy content of this page