ಗಂಗೊಳ್ಳಿ:ಅಷ್ಟೋತರ ಸಹಸ್ರ ನಾಳಿಕೇರ ಮಹಾಗಣಯಾಗ

ಕುಂದಾಪುರ:ಶ್ರೀಗಣೇಶೋತ್ಸವ ಸಮಿತಿ ಶ್ರೀ ಮಹಾಂಕಾಳಿ ಅಮ್ಮನವರ ದೇವಸ್ಥಾನ ಗಂಗೊಳ್ಳಿ ಅದರ 31ನೇ ವರ್ಷದ ಶ್ರೀ ಗಣೇಶೋತ್ಸವ ಕಾರ್ಯಕ್ರಮದ ಅಂಗವಾಗಿ ಶ್ರೀ ಗಣಪತಿ ದೇವರಿಗೆ 1008 ಕಾಯಿಗಳ ಅಷ್ಟೋತ್ತರ ಸಹಸ್ರ ನಾಳಿಕೇರ ಮಹಾ ಗಣಯಾಗ ಮತ್ತು ಮಹಾ ಅನ್ನಸಂತರ್ಪಣೆ ಕಾರ್ಯಕ್ರಮ ಹಾಗೂ ಕುಣಿತ ಭಜನಾ ಕಾರ್ಯಕ್ರಮ ಗುರುವಾರ ನಡೆಯಿತು.

ಮರವಂತೆ:ಶ್ರೀ ವರಾಹ ಜಯಂತಿ ಉತ್ಸವ ಕಾರ್ಯಕ್ರಮ

ಬೈಂದೂರು:ಮರವಂತೆ ಶ್ರೀಕ್ಷೇತ್ರ ಮಹಾರಾಜ ಸ್ವಾಮಿ ಶ್ರೀ ವರಾಹ ದೇವಸ್ಥಾನದಲ್ಲಿ ಕಾಲಂಪ್ರತಿ ನಡೆಯುವ ವರಾಹ ಜಯಂತಿ ಉತ್ಸವ ಕಾರ್ಯಕ್ರಮ ನಾನಾ ಧಾರ್ಮಿಕ ವಿಧಿವಿಧಾನಗಳೊಂದಿಗೆ ಸಂಪ್ರದಾಯ ಬದ್ಧವಾಗಿ ನಡೆಯಿತು.ವರಾಹ ಜಯಂತಿ ಕಾರ್ಯಕ್ರಮದ ಅಂಗವಾಗಿ ಶ್ರೀಕ್ಷೇತ್ರದಲ್ಲಿ ವರಾಹ ಹೋಮ,ಮಹಾ ಅನ್ನಸಂತರ್ಪಣೆ,ಭಜನಾ ಕಾರ್ಯಕ್ರಮ ಜರುಗಿತು.ಈ ಸಂದರ್ಭ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಸತೀಶ ಎಂ ನಾಯಕ ಮತ್ತು ಸದಸ್ಯರು,ದೇವಳದ ಅರ್ಚಕರು,ಉಪಾದಿವಂತರು,ಸಿಬ್ಬಂದಿಗಳು,ಗ್ರಾಮಸ್ಥರು ಹಾಗೂ ಸೇವಾಕರ್ತರಾದ ಪಿ ಮಹೇಶ್ ಬೆಂಗಳೂರು(ಚಿತ್ತೂರು,ಆಂಧ್ರಪ್ರದೇಶ) ಉಪಸ್ಥಿತರಿದ್ದರು.

ತ್ರಾಸಿ:ಯೋಗ ಶಿಬಿರ ಉದ್ಘಾಟನಾ ಕಾರ್ಯಕ್ರಮ

ಕುಂದಾಪುರ:ಪ್ರತಿ ನಿತ್ಯ ಯೋಗ ಮಾಡುವುದರಿಂದ ದೇಹ ಮತ್ತು ಮನಸ್ಸಿನ ಆರೋಗ್ಯವನ್ನು ಕಾಪಾಡಿಕೊಳ್ಳಬಹುದು ಯೋಗ ಬಲ್ಲವನು ರೋಗಮುಕ್ತ ಜೀವನವನ್ನು ಸಾಗಿಸಲು ಸಾಧ್ಯವಿದೆ ಎಂದು ತ್ರಾಸಿ ಗ್ರಾಮ ಪಂಚಾಯತ್ ಅಧ್ಯಕ್ಷ ಮಿಥುನ್ ದೇವಾಡಿಗ ಹೇಳಿದರು.ಆರಾಧ್ಯ ಯೋಗ ಕೇಂದ್ರ ತ್ರಾಸಿ ವತಿಯಿಂದ ಕಲ್ಲಾನಿ ಮಾದರಿ ಹಿ.ಪ್ರಾ. ಶಾಲೆ ತ್ರಾಸಿಯಲ್ಲಿ ಮಂಗಳವಾರ ನಡೆದ ಯೋಗ ಶಿಬಿರವನ್ನು ಉದ್ಘಾಟಿಸಿ ಅವರು ಮಾತನಾಡಿದರು.ಯೋಗ ಗುರು ಸುಬ್ಬಯ್ಯ ದೇವಾಡಿಗ ಅರೆಹೊಳೆ,ಅಥರ್ವ ಯೋಗ ಶಾಲೆ ಮೈಸೂರು ಯೋಗ ಶಿಕ್ಷಕ ರೋಶನ್ ಅರೆಹೊಳೆ,ತ್ರಾಸಿ ಗ್ರಾ.ಪಂ ಸದಸ್ಯ ವಿಜಯ್ ಪೂಜಾರಿ,ಪ್ರವೀಣ್ ಮೊಗವೀರ […]

You cannot copy content of this page