ಮರವಂತೆ:ಶ್ರೀ ವರಾಹ ಜಯಂತಿ ಉತ್ಸವ ಕಾರ್ಯಕ್ರಮ

ಬೈಂದೂರು:ಮರವಂತೆ ಶ್ರೀಕ್ಷೇತ್ರ ಮಹಾರಾಜ ಸ್ವಾಮಿ ಶ್ರೀ ವರಾಹ ದೇವಸ್ಥಾನದಲ್ಲಿ ಕಾಲಂಪ್ರತಿ ನಡೆಯುವ ವರಾಹ ಜಯಂತಿ ಉತ್ಸವ ಕಾರ್ಯಕ್ರಮ ನಾನಾ ಧಾರ್ಮಿಕ ವಿಧಿವಿಧಾನಗಳೊಂದಿಗೆ ಸಂಪ್ರದಾಯ ಬದ್ಧವಾಗಿ ನಡೆಯಿತು.ವರಾಹ ಜಯಂತಿ ಕಾರ್ಯಕ್ರಮದ ಅಂಗವಾಗಿ ಶ್ರೀಕ್ಷೇತ್ರದಲ್ಲಿ ವರಾಹ ಹೋಮ,ಮಹಾ ಅನ್ನಸಂತರ್ಪಣೆ,ಭಜನಾ ಕಾರ್ಯಕ್ರಮ ಜರುಗಿತು.ಈ ಸಂದರ್ಭ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಸತೀಶ ಎಂ ನಾಯಕ ಮತ್ತು ಸದಸ್ಯರು,ದೇವಳದ ಅರ್ಚಕರು,ಉಪಾದಿವಂತರು,ಸಿಬ್ಬಂದಿಗಳು,ಗ್ರಾಮಸ್ಥರು ಹಾಗೂ ಸೇವಾಕರ್ತರಾದ ಪಿ ಮಹೇಶ್ ಬೆಂಗಳೂರು(ಚಿತ್ತೂರು,ಆಂಧ್ರಪ್ರದೇಶ) ಉಪಸ್ಥಿತರಿದ್ದರು.

ತ್ರಾಸಿ:ಯೋಗ ಶಿಬಿರ ಉದ್ಘಾಟನಾ ಕಾರ್ಯಕ್ರಮ

ಕುಂದಾಪುರ:ಪ್ರತಿ ನಿತ್ಯ ಯೋಗ ಮಾಡುವುದರಿಂದ ದೇಹ ಮತ್ತು ಮನಸ್ಸಿನ ಆರೋಗ್ಯವನ್ನು ಕಾಪಾಡಿಕೊಳ್ಳಬಹುದು ಯೋಗ ಬಲ್ಲವನು ರೋಗಮುಕ್ತ ಜೀವನವನ್ನು ಸಾಗಿಸಲು ಸಾಧ್ಯವಿದೆ ಎಂದು ತ್ರಾಸಿ ಗ್ರಾಮ ಪಂಚಾಯತ್ ಅಧ್ಯಕ್ಷ ಮಿಥುನ್ ದೇವಾಡಿಗ ಹೇಳಿದರು.ಆರಾಧ್ಯ ಯೋಗ ಕೇಂದ್ರ ತ್ರಾಸಿ ವತಿಯಿಂದ ಕಲ್ಲಾನಿ ಮಾದರಿ ಹಿ.ಪ್ರಾ. ಶಾಲೆ ತ್ರಾಸಿಯಲ್ಲಿ ಮಂಗಳವಾರ ನಡೆದ ಯೋಗ ಶಿಬಿರವನ್ನು ಉದ್ಘಾಟಿಸಿ ಅವರು ಮಾತನಾಡಿದರು.ಯೋಗ ಗುರು ಸುಬ್ಬಯ್ಯ ದೇವಾಡಿಗ ಅರೆಹೊಳೆ,ಅಥರ್ವ ಯೋಗ ಶಾಲೆ ಮೈಸೂರು ಯೋಗ ಶಿಕ್ಷಕ ರೋಶನ್ ಅರೆಹೊಳೆ,ತ್ರಾಸಿ ಗ್ರಾ.ಪಂ ಸದಸ್ಯ ವಿಜಯ್ ಪೂಜಾರಿ,ಪ್ರವೀಣ್ ಮೊಗವೀರ […]

ಮರವಂತೆ ಮಹಿಳಾ ಸಹಕಾರಿ ಸಂಘದ ವಾರ್ಷಿಕ ಮಹಾಸಭೆ

ಬೈಂದೂರು:ಮಹಿಳಾ ಮೀನುಗಾರರ ವಿವಿಧೋದ್ದೇಶ ಸಹಕಾರಿ ಸಂಘ ಮರವಂತೆ ಅದರ 2022-23ನೇ ಸಾಲಿನ ವಾರ್ಷಿಕ ಮಹಾಸಭೆ ನಾವುಂದ ಮಹಾಗಣಪತಿ ಮಾಂಗಲ್ಯ ಮಂಟಪದಲ್ಲಿ ಶನಿವಾರ ನಡೆಯಿತು. ಮಹಾಸಭೆಯ ಅಧ್ಯಕ್ಷತೆಯನ್ನು ವಹಿಸಿದ್ದ ಸಂಘದ ಅಧ್ಯಕ್ಷೆ ಸವಿತಾ ಖಾರ್ವಿ ಮಾತನಾಡಿ,ಸಂಘದ ತ್ವರಿತಗತಿ ಬೆಳವಣಿಗೆ,ಲಾಭಾಂಶ,ಧೀರ್ಘಾವಧಿ ಗೃಹಸಾಲ ಹಾಗೂ ಮುಂದಿನ ಯೋಜನೆಗಳ ಬಗ್ಗೆ ವಿವರಿಸಿದರು.ಸಂಘದ ಲೆಕ್ಕಿಗ ರೇಖಾ ನಿವ್ವಳ ಲಾಭ್ ವಿಂಗಡಣೆ ಮತ್ತು ಮುಂದಿನ ಸಾಲಿನ ಅಂದಾಜು ಆಯ-ವ್ಯಯ ಪಟ್ಟಿ ಬಜೆಟ್ ಮಂಜೂರಾತಿಯನ್ನು ಓದಿ ಹೇಳಿದರು.ಗುಮಾಸ್ತೆ ಚೈತ್ರಾ ಹಿಂದಿನ ಮಹಾಸಭೆ ನಡವಳಿಕೆಯನ್ನು ಓದಿ ಹೇಳಿದರು.ಸಂಘದ ಮುಖ್ಯ […]

You cannot copy content of this page