ಗಂಗೊಳ್ಳಿ:ಸಾಕ್ಷರತೆ ವಿಚಾರ ಸಂಕಿರಣ ಕಾರ್ಯಕ್ರಮ

ಕುಂದಾಪುರ:ರೋಟರಿ ಕ್ಲಬ್ ಗಂಗೊಳ್ಳಿ ವತಿಯಿಂದ ಕಾಲೇಜು ವಿದ್ಯಾರ್ಥಿಗಳಿಗಾಗಿ ಸಾಕ್ಷರತೆ ಕುರಿತು ವಿಶೇಷ ವಿಚಾರ ಸಂಕಿರಣ ಕಾರ್ಯಕ್ರಮ ಗಂಗೊಳ್ಳಿ ಎಸ್.ವಿ ಪದವಿ ಪೂರ್ವ ಕಾಲೇಜಿನಲ್ಲಿ ನಡೆಯಿತು.ಗಂಗೊಳ್ಳಿ ರೋಟರಿ ಕ್ಲಬ್ ಅಧ್ಯಕ್ಷ ನಾಗೇಂದ್ರ ಪೈ ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದರು.ಸಹಾಯಕ ರಾಜ್ಯಪಾಲ ಆರ್‍ಟಿಎನ್ ಪಿಎಚ್‍ಎಫ್ ಡಾ.ಸಂದೀಪ ಶೆಟ್ಟಿ ಉದ್ಘಾಟಿಸಿದರು.ಝೋನಲ್ ಲೆಫ್ಟಿನೆಂಟ್ ಆರ್‍ಟಿಎನ್ ಪ್ರದೀಪ್ ಯಡಿಯಾಲ್ ಶುಭಹಾರೈಸಿದರು.ವಲಯ ಸಂಯೋಜಕ ನಾರಾಯಣ್ ಇ ನಾಯ್ಕ್ ಸಾಕ್ಷರತೆಯ ಮಹತ್ವದ ಕುರಿತು ಮಾಹಿತಿಯನ್ನು ನೀಡಿದರು.ಶಿವಕುಮಾರ್ ಆಲಗೋಡು ಅವರು ಜೀವನದ ಮೌಲ್ಯಗಳು ಮತ್ತು ನೈತಿಕತೆ ಬಗ್ಗೆ ಮಾತನಾಡಿದರು.ಕ್ಲಬ್ಬಿನ ಅಧ್ಯಕ್ಷ […]

ತೊಂಬಟ್ಟು: ಶ್ವಾನ ಪ್ರೀತಿಗೆ ಜನರು ಪುಲ್ ಖುಷ್

ಕುಂದಾಪುರ:ಕಳೆದ ಎಂಟು ದಿನಗಳ ಹಿಂದೆ ನಾಪತ್ತೆಯಾಗಿ ಸುರಕ್ಷಿತವಾಗಿ ಮರಳಿ ಮನೆಗೆ ಬಂದ ತೊಂಬಟ್ಟು ಇರ್ಕಿಗದ್ದೆ ನಿವಾಸಿ ವಿವೇಕಾನಂದ ಹಾಗೂ ಜೊತೆಗಿದ್ದ ಶ್ವಾನ ನನ್ನು ಊರವರು ಮೆರವಣಿಗೆ ಮೂಲಕ ಕರೆತಂದು ಖುಷಿ ಪಟ್ಟರು.ದಟ್ಟ ಕಾಡಿನಲ್ಲಿ ಕಣ್ಮರೆಯಾಗಿ ಎಂಟು ದಿನಗಳ ನಂತರ ಸುರಕ್ಷಿತವಾಗಿ ವಿವೇಕಾನಂದ ಮನೆಗೆ ಮರಳಿದ್ದರಿಂದಊರ ದೇವರಿಗೆ ಸೋಮವಾರ ಹರಿಕೆ ಸಲ್ಲಿಸಲಾಯಿತು ಈ ಸಂದರ್ಭ ಗ್ರಾಮಸ್ಥರು ಉಪಸ್ಥಿತರಿದ್ದರು.

ನಾಡ:ದಲಿತ ದೌರ್ಜನ್ಯ ಎಸಗಿದ ಆರೋಪಿಗಳನ್ನು ಬಂಧಿಸುವಂತೆ ಆಗ್ರಹಿಸಿ ಬೃಹತ್ ಪ್ರತಿಭಟನೆ

ಕುಂದಾಪುರ:ಇತ್ತೀಚಿನ ದಿನಗಳಲ್ಲಿ ಸಂಘಟನೆಗಳಿಗೆ ಬರುವ ದೂರುಗಳು ಧಾರ್ಮಿಕ ವಿಚಾರಗಳಿಗೆ ಸಂಬಂಧಿಸಿದ್ದು ಆಗಿದ್ದು ಸಮಾಜದಲ್ಲಿ ನಮ್ಮನ್ನು ತುಳಿಯುವಂತಹ ಸಂಸ್ಕೃತಿ ಇನ್ನೂ ಕೂಡ ಮುಂದುವರೆದಿರುವುದು ನಮ್ಮ ಯುವ ಪೀಳಿಗೆ ಮೇಲೆ ಬಹಳಷ್ಟು ಪರಿಣಾಮ ಬೀರಿದೆ.ಧಾರ್ಮಿಕ ವಿಚಾರಕ್ಕೆ ಸಂಬಂಧಿಸಿದಂತೆ ನಾಡದಲ್ಲಿ ದಲಿದತ ಹುಡುಗರ ಮೇಲೆ ಹಲ್ಲೆ ಮಾಡಿದ ಏಳು ಆರೋಪಿಗಳನ್ನು ಕೂಡಲೆ ಬಂಧಿಸಲು ಕ್ರಮ ಕೈಗೊಳ್ಳಬೇಕೆಂದು ಕುಂದಾಪುರ ತಾಲೂಕು ಸಂಚಾಲಕ ರಾಜು ಬೆಟ್ಟಿನ ಮನೆ ಪೊಲೀಸ್ ಇಲಾಖೆಯನ್ನು ಆಗ್ರಹಿಸಿದರು.ಬೈಂದೂರು ತಾಲೂಕಿನ ನಾಡಗುಡ್ಡೆಅಂಗಡಿಯಲ್ಲಿ ಗಣೇಶೋತ್ಸವ ಮೆರವಣಿಗೆ ಸಂದರ್ಭ ದಲಿತ ಹುಡುಗರ ಮೇಲೆ ಹಲ್ಲೆ […]

You cannot copy content of this page