ಗುಜ್ಜಾಡಿ:ರಜತ ಸಮಿತಿ ಅಧ್ಯಕ್ಷರಾಗಿ ರಾಮನಾಥ ಚಿತ್ತಾಲ್ ಆಯ್ಕೆ

ಕುಂದಾಪುರ:ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಗುಜ್ಜಾಡಿ ಹಳೆ ವಿದ್ಯಾರ್ಥಿ ಸಂಘದ ರಜತ ಮಹೋತ್ಸವ ಸಮಿತಿ ಅಧ್ಯಕ್ಷರಾಗಿ ರಾಮನಾಥ ಚಿತ್ತಾಲ್ ಆಯ್ಕೆಯಾಗಿದ್ದಾರೆ.ಗೌರವಾಧ್ಯಕ್ಷರಾಗಿ ಎ.ಆರ್ ವಲಿಯುಲ್ಲ,ಉಪಾಧ್ಯಕ್ಷರಾಗಿ ಹರೀಶ ಮೇಸ್ತ,ರಘು ಗುಜ್ಜಾಡಿ,ಮಹೇಶ ಆಚಾರ್ಯ ಹಾಗೂ ಪ್ರಧಾನ ಕಾರ್ಯದರ್ಶಿಯಾಗಿ ರಾಘವೇಂದ್ರ ಡಿ,ಖಜಾಂಚಿಯಾಗಿ ಪ್ರಕಾಶ್ ಎನ್ ಮೇಸ್ತ,ಸಂಘಟನಾ ಕಾರ್ಯದರ್ಶಿ ಸುಧಾಕರ ಪೂಜಾರಿ,ಜೊತೆ ಕಾರ್ಯದರ್ಶಿ ಜಗದೀಶ ಪೂಜಾರಿ,ಸಾಂಸ್ಕøತಿಕ ಕಾರ್ಯದರ್ಶಿ ವಿಶ್ವನಾಥ ಮೇಸ್ತ,ಲೆಕ್ಕ ಪರಿಶೋಧಕ ಗುರುರಾಜ ಆಚಾರ್ಯ,ಕ್ರೀಡಾ ಕಾರ್ಯದರ್ಶಿಯಾಗಿ ಅಣ್ಣಪ್ಪ ಪೂಜಾರಿ ಆಯ್ಕೆಯಾಗಿದ್ದಾರೆ.

ಕುಂದಾಪುರ-ಬೈಂದೂರು ವಲಯ ಲಾರಿ ಟೆಂಪೋ ಮಾಲೀಕರು ಚಾಲಕರ ಸಂಘದ ತುರ್ತು ಸಭೆ

ಉಡುಪಿ:ಕುಂದಾಪುರ ಮತ್ತು ಬೈಂದೂರು ವಲಯದ ಲಾರಿ ಮತ್ತು ಟೆಂಪೋ ಮಾಲಿಕರು ಹಾಗೂ ಚಾಲಕರ ಸಂಘದ ತುರ್ತು ಸಭೆ ಹೆಮ್ಮಾಡಿ ಜಯಶ್ರೀ ಸಭಾಂಗಣದಲ್ಲಿ ಬುಧವಾರ ನಡೆಯಿತು.ಪ್ರಮುಖ ಬೇಡಿಕೆಗಳ ಈಡೇರಿಕೆಗಾಗಿ ಬೈಂದೂರು ಕ್ಷೇತ್ರದ ಶಾಸಕ ಗುರುರಾಜ್ ಗಂಟಿಹೊಳೆಗೆ ಅವರಿಗೆ ಮನವಿಯನ್ನು ನೀಡಲಾಯಿತು. ಕುಂದಾಪುರ ಮತ್ತು ಬೈಂದೂರು ವಲಯದ ಲಾರಿ ಮಾಲೀಕರು ಮತ್ತು ಚಾಲಕರ ಸಂಘದ ಜಂಟಿ ಅಧ್ಯಕ್ಷ ದಿವಾಕರ ಶೆಟ್ಟಿ ಮಾತನಾಡಿ,ಈ ಹಿಂದೆ ಕೆಂಪು ಕಲ್ಲು ಮತ್ತು ಮಣ್ಣು ಸಾಗಾಟ ಮಾಡಲು ಕೃಷಿ ಅಭಿವೃದ್ಧಿ ಉದ್ಧೇಶದಿಂದ 3ಎ ಅಡಿಯಲ್ಲಿ ಪರ್ಮಿಟ್ […]

ಗಂಗೊಳ್ಳಿ:ಅರುಣ ನಾಪತ್ತೆ

ಕುಂದಾಪುರ:10ನೇ ತರಗತಿಯಲ್ಲಿ ವಿದ್ಯಾಭ್ಯಾಸವನ್ನು ಮಾಡುತ್ತಿರುವ ಅರುಣ (15) ಎನ್ನುವ ಬಾಲಕ ಸೆ.20 ರಂದು ಮಧ್ಯಾಹ್ನ 3 ಗಂಟೆಗೆ ಕುಂದಾಪುರಕ್ಕೆ ಹೋಗುವುದಾಗಿ ಮನೆಯಲ್ಲಿ ಹೇಳಿ ಹೋಗಿದ್ದು ಈ ವರೆಗೆ ಮನೆಗೆ ಬಾರದೆ ಕಾಣೆಯಾಗಿರುತ್ತಾನೆ.ಪಿರ್ಯಾದಿದಾರರ ತಮ್ಮ ನೀಡಿದ ದೂರಿನಂತೆ ಗಂಗೊಳ್ಳಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಗೋದಿ ಮೈ ಬಣ್ಣವನ್ನು ಹೊಂದಿರುವ ಅರುಣ 5 ಅಡಿ ಎತ್ತರವಿದ್ದು,ಕಪ್ಪನೆ ಕೂದಲು,ಸಾಧಾರಣ ಮೈ ಕಟ್ಟು ಹೊಂದಿರುತ್ತಾನೆ.ಮನೆಯಿಂದ ಹೊರಡುವ ವೇಳೆ ಕಪ್ಪು ಬಣ್ಣದ ಅರ್ಧ ತೋಳಿನ ಟೀ ಶರ್ಟ್, ಕಪ್ಪು ಬಣ್ಣದ ಜೀನ್ಸ ಪ್ಯಾಂಟ್ ಧರಿಸಿದ್ದು […]

You cannot copy content of this page