ಚಿನ್ನವನ್ನು ಮರಳಿಸಿ ಪ್ರಾಮಾಣಿಕತೆ ಮೆರೆದ ಗಂಗೊಳ್ಳಿ ಠಾಣೆ ಸಿಬ್ಬಂದಿ

ಕುಂದಾಪುರ:ಎಸ್‍ಬಿಐ ಬ್ಯಾಂಕ್ ಬಳಿ ಗಂಗೊಳ್ಳಿ ಪೊಲೀಸ್ ಠಾಣೆ ಸಿಬ್ಬಂದಿ ಗಂಗಾಧರ ಪೂಜಾರಿ ಅವರಿಗೆ ಸಿಕ್ಕಿರುವ ಸುಮಾರು 13 ಗ್ರಾಂ ತೂಕವನ್ನು ಹೊಂದಿದ ಅಂದಾಜು ಒಂದೂವರೆ ಲಕ್ಷ ರೂ. ಮೌಲ್ಯದ ಚಿನ್ನವನ್ನು ವಾರೀಸುದಾರರಾದ ಕುಂದಾಪುರ ಚಿಕ್ಕನ್ ಸಾಲ್ ರೋಡ್ ನಿವಾಸಿ ರಾಕೇಶ್ ಬೆರಟ್ಟೊ ಅವರಿಗೆ ಮರಳಿಸುವುದರ ಮುಖೇನ ಪ್ರಾಮಾಣಿಕತೆ ಮೆರೆದಿದ್ದಾರೆ.ಗಂಗೊಳ್ಳಿ ಠಾಣೆ ಪಿಎಸ್‍ಐ ಪವನ್ ನಾಯ್ಕ್ ಹಸ್ತಾಂತರ ಮಾಡಿದರು.

ಕೊಲ್ಲೂರು ಶ್ರೀ ಮೂಕಾಂಬಿಕಾ ದೇವಿಗೆ ಇಳರಾಜ ವಜ್ರ ಕಿರೀಟ ಸಮರ್ಪಣೆ

ಕುಂದಾಪುರ:ಕೊಲ್ಲೂರು ಶ್ರೀ ಮೂಕಾಂಬಿಕೆ ದೇವಿ ಪರಮ ಭಕ್ತರಾದ ಸಂಗೀತ ನಿರ್ದೇಶಕ ಇಳಯ ರಾಜ ಅವರು ಶ್ರೀ ಮೂಕಾಂಬಿಕಾ ದೇವಿಗೆ ವಜ್ರ ಸಹಿತ ಆಭರಣಗಳು ಹಾಗೂ ವೀರಭದ್ರ ಸ್ವಾಮಿಗೆ ರಜತ ಕಿರೀಟ ಸಹಿತ ಖಡ್ಗವನ್ನು ಬುಧವಾರ ಸಮರ್ಪಿಸಿದ್ದಾರೆ.ನಾನಾ ಧಾರ್ಮಿಕ ವಿಧಿವಿಧಾನಗಳೊಂದಿಗೆ ಶ್ರೀ ದೇವಿಗೆ ವಜ್ರ ಕಿರೀಟವನ್ನು ಸಮರ್ಪಣೆ ಮಾಡಲಾಯಿತು.

ಹರ್ಕೂರು-ನಾರ್ಕಳಿ ಮದುಕೋಡ್ಲು ಎಸ್.ಟಿ ಕಾಲೋನಿ ರಸ್ತೆ ಅಭಿವೃದ್ಧಿಗೆ ಗುದ್ದಲಿ ಪೂಜೆ

ಕುಂದಾಪುರ:ಆದಿವಾಸಿ ಜನಾಂಗದ ಮುಖಂಡರಾದಂತಹ ಬಿರ್ಸಾ ಮುಂಡ ಅವರ ಜನ್ಮ ದಿನಾಚರಣೆ ದಿನದಂದು ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರು ಸಂಕಲ್ಪ ಮಾಡಿದಂತೆ ಬುಡಕಟ್ಟು ಜನಾಂಗದವರು ವಾಸ ಮಾಡುವಂತಹ ಪ್ರದೇಶಗಳನ್ನು ಗುರುತಿಸಿ ಎಲ್ಲಾ ರೀತಿಯ ಸೌಲಭ್ಯಗಳನ್ನು ದೊರಕಿಸಿ ಕೊಡಬೇಕು ಎನ್ನುವ ಉದ್ದೇಶದಿಂದ ಯೋಜನೆಯನ್ನು ರೂಪಿಸಲಾಗಿದ್ದು.ಅದರ ಭಾಗವಾಗಿ ಬೈಂದೂರು ಕ್ಷೇತ್ರದಲ್ಲಿ ಸುಮಾರು 4.ಕೋಟಿಗೂ ಅಧಿಕ ಮೊತ್ತದ ಅನುದಾನದಲ್ಲಿ ಪಿಎಂ ಜನ್‍ಮನ್ ರಸ್ತೆ ಅಭಿವೃದ್ಧಿ ಕಾಮಗಾರಿ ಮಾಡಲಾಗುತ್ತಿದೆ ಎಂದು ಸಂಸದ ಬಿ.ವೈ ರಾಘವೇಂದ್ರ ಹೇಳಿದರು.ಪಿಎಂ ಜನ್‍ಮನ್ ಯೋಜನೆಯಡಿ 94.34 ಲಕ್ಷ.ರೂ ವೆಚ್ಚದಲ್ಲಿ […]

You cannot copy content of this page