ರಾಜ್ಯ ಮಟ್ಟದ ಗ್ರಾಮೀಣ ಐ.ಟಿ.ಕ್ವಿಜ್ ಗೆ ಹೆಮ್ಮಾಡಿ ಜನತಾ ಸ್ವತಂತ್ರ ಪದವಿಪೂರ್ವ ಕಾಲೇಜಿನ ವಿದ್ಯಾರ್ಥಿ ತೇಜಸ್ವಿ ಮಿಥುನ್ ಆಯ್ಕೆ.

ಕುಂದಾಪುರ:ಉಡುಪಿ ಜಿಲ್ಲಾ ಪದವಿಪೂರ್ವ ಶಿಕ್ಷಣ ಇಲಾಖೆ ವತಿಯಿಂದ ಆಯೋಜಿಸಿದ ಜಿಲ್ಲಾ ಮಟ್ಟದ ಗ್ರಾಮೀಣ ಐ‌.ಟಿ. ಕ್ವಿಜ್ ನಲ್ಲಿ ಸ್ಪರ್ಧಿಸಿದ ಹೆಮ್ಮಾಡಿ ಜನತಾ ಸ್ವತಂತ್ರ ಪದವಿಪೂರ್ವ ಕಾಲೇಜಿನ ಪ್ರಥಮ ಪಿ.ಯು.ಸಿ.ವಿಜ್ಞಾನ ವಿಭಾಗ ವಿದ್ಯಾರ್ಥಿ ತೇಜಸ್ವಿ ಮಿಥುನ್ ಜಿಲ್ಲಾ ಮಟ್ಟದಲ್ಲಿ ಸ್ಪರ್ಧೆಯಲ್ಲಿ ವಿಜೇತರಾಗಿ ರಾಜ್ಯ ಮಟ್ಟದ ಗ್ರಾಮೀಣ ಐ.ಟಿ.ಕ್ವಿಜ್ ಸ್ಪರ್ಧೆಗೆ ಆಯ್ಕೆಯಾಗಿದ್ದಾರೆ.ವಿದ್ಯಾರ್ಥಿಯ ಈ ಸಾಧನೆಗೆ ಕಾಲೇಜಿನ ಆಡಳಿತ ಮಂಡಳಿ, ಪ್ರಾಂಶುಪಾಲರು,ಬೋಧಕ/ಬೋಧಕೇತರ ವೃಂದದವರು ಅಭಿನಂದನೆ ಸಲ್ಲಿಸಿದ್ದಾರೆ.

ಸೇನಾಪುರ:ಎಕ್ಸ್ ಪ್ರೆಸ್ ರೈಲು ನಿಲುಗಡೆಗೆ ಆಗ್ರಹಿಸಿ ಪ್ರತಿಭಟನೆ

ಕುಂದಾಪುರ:ತಾಲೂಕಿನ ಸೇನಾಪುರ ಕೊಂಕಣ ರೈಲು ನಿಲ್ದಾಣದಲ್ಲಿ ಎಲ್ಲಾ ಮಾದರಿಯ ಎಕ್ಸ್ ಪ್ರೆಸ್ ರೈಲು ನಿಲುಗಡೆ ಮಾಡಬೇಕೆಂದು ಆಗ್ರಹಿಸಿ ರೈಲು ಹೋರಾಟ ಸಮಿತಿ ಸೇನಾಪುರ ಹಾಗೂ ವತಿಯಿಂದ ನಾಡ ಗ್ರಾಮ ಪಂಚಾಯತ್ ಬಳಿಯಿಂದ ಸೇನಾಪುರ ರೈಲು ನಿಲ್ದಾಣದ ಒರಗೆ ಬೃಹತ್ ಕಾಲ್ನಡಿಗೆ ಜಾಥಾ ಮಂಗಳವಾರ ನಡೆಯಿತು.ಹಲವಾರು ಸಂಘಟನೆಯ ಸದಸ್ಯರು,ಗ್ರಾಮಸ್ಥರು,ಸಾರ್ವಜನಿಕರು ಗುಜ್ಜಾಡಿ,ನಾಡ,ಆಲೂರು,ಹಕ್ಲಾಡಿ,ಹೊಸಾಡು,ತ್ರಾಸಿ ಸೇರಿದಂತೆ ಹಲವಾರು ಪಂಚಾಯಿತಿಗಳ ಅಧ್ಯಕ್ಷರು ಮತ್ತು ಸದಸ್ಯರು,ಹೋರಾಟ ಸಮಿತಿ ಮುಖಂಡರುಗಳು,ರೈತರು,ಮಹಿಳೆಯರು ಹೋರಾಟದಲ್ಲಿ ಭಾಗಿಯಾಗಿದ್ದರು.ಪತ್ರಿಭಟನೆ ಸಭೆ ಬಳಿಕ ರೈಲ್ವೆ ಅಧಿಕಾರಿಗಳಿಗೆ ಮನವಿಯನ್ನು ನೀಡಲಾಯಿತು.ಪೆÇಲೀಸ್ ಇಲಾಖೆ ವತಿಯಿಂದ ಬಿಗಿ ಬಂದೋ […]

ಶ್ರೀಗುಹೇಶ್ವರ ದೇವಸ್ಥಾನದಲ್ಲಿ ಅಷ್ಟಮಂಗಳ ಪ್ರಶ್ನೆ

ಕುಂದಾಪುರ:ಸಾವಿರಾರು ವರ್ಷಗಳ ಕಾಲ ಇತಿಹಾಸವನ್ನು ಹೊಂದಿರುವ ಕುಂದಾಪುರ ತಾಲೂಕಿನ ಪ್ರಸಿದ್ಧ ಗುಜ್ಜಾಡಿ ಗ್ರಾಮದ ಕೊಡಪಾಡಿ ಶ್ರೀ ಗುಹೇಶ್ವರ ದೇವಾಲಯದ ಜೀರ್ಣೋದ್ಧಾರ ಕಾರ್ಯಕ್ರಮದ ಪ್ರಯುಕ್ತ ಅಷ್ಟಮಂಗಳ ಪ್ರಶ್ನೆ ಚಿಂತನಾ ಕಾರ್ಯಕ್ರಮ ಕೇರಳದ ಪ್ರಸಿದ್ಧ ದೈವಜ್ಞರಾದ ಶ್ರೀ ನಾರಾಯಣ ನಂಬೂದಿರಿ ಕೈಮುಕ್ಕು ಅವರ ಮಾರ್ಗದರ್ಶನದಲ್ಲಿ ದೇವರ ಸನ್ನಿಧಾನದಲ್ಲಿ ನಾನಾ ಧಾರ್ಮಿಕ ವಿಧಿವಿಧಾನಗಳೊಂದಿಗೆ ಭಾನುವಾರ ನಡೆಯಿತು. ತಂತ್ರಿಗಳಾದ ಕುಮಾರು ಗುರು ಕೊರಂಗ್ರಪಾಡಿ,ಶ್ರೀಶ ಭಟ್ ಹೊಸಾಡು ಮತ್ತು ಇತರ ದೈವಜ್ಞರು ಸಹಕರಿಸಿದರು,ದೇವಳದ ಸಮಿತಿ ಅಧ್ಯಕ್ಷರು ಮತ್ತು ಪದಾಧಿಕಾರಿಗಳು,ಗ್ರಾಮಸ್ಥರು ಉಪಸ್ಥಿತರಿದ್ದರು.ಭಾನುವಾರ ಆರಂಭಗೊಂಡ ಅಷ್ಟಮಂಗಳ ಪ್ರಶ್ನೆ […]

You cannot copy content of this page