ಗಂಗೊಳ್ಳಿ:ಚರ್ಮರೋಗ ತಪಾಸಣೆ,ಚಿಕಿತ್ಸಾ ಶಿಬಿರ ಉದ್ಘಾಟನೆ

ಕುಂದಾಪುರ:ಜಿಲ್ಲಾ ಪಂಚಾಯತ್ ಉಡುಪಿ,ಜಿಲ್ಲಾ ರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ,ಜಿಲ್ಲಾ ಕುಷ್ಠ ರೋಗ ನಿಯಂತ್ರಣ ಘಟಕ,ರೋಟರಿ ಕ್ಲಬ್ ಗಂಗೊಳ್ಳಿ,ಗ್ರಾಮ ಪಂಚಾಯತ್ ಗಂಗೊಳ್ಳಿ,ಪ್ರಾಥಮಿಕ ಆರೋಗ್ಯ ಕೇಂದ್ರ ಗಂಗೊಳ್ಳಿ ಮತ್ತು ಕೆಎಂಸಿ ಆಸ್ಪತ್ರೆ ಮಣಿಪಾಲ ಅವರ ಜಂಟಿ ಆಶ್ರಯದಲ್ಲಿ ಚರ್ಮರೋಗ ಉಚಿತ ತಪಾಸಣೆ ಮತ್ತು ಚಿಕಿತ್ಸಾ ಶಿಬಿರ ಗಂಗೊಳ್ಳಿ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಗುರುವಾರ ನಡೆಯಿತು.ಗಂಗೊಳ್ಳಿ ಗ್ರಾಮ ಪಂಚಾಯತ್ ಅಧ್ಯಕ್ಷ ಶ್ರೀನಿವಾಸ ಖಾರ್ವಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ತಾಲೂಕು ಆರೋಗ್ಯ ಅಧಿಕಾರಿ ಡಾ.ಪ್ರೇಮಾನಂದ ಶಿಬಿರವನ್ನು ಉದ್ಘಾಟಿಸಿ ಶುಭ ಹಾರೈಸಿದರು. ಮಣಿಪಾಲ […]

ಬಾಡಿ ಬಿಲ್ಡಿಂಗ್ ಸ್ಪರ್ಧೆ: ಸೋಮಶೇಖರ್ ಖಾರ್ವಿಗೆ ಪ್ರಥಮ ಸ್ಥಾನ

ಕುಂದಾಪುರ:ದಸರಾ ಹಬ್ಬದ ಪ್ರಯುಕ್ತ ಮೈಸೂರು ನಲ್ಲಿ ನಡೆದ ಬಾಡಿ ಬಿಲ್ಡಿಂಗ್ ಕಾಂಪಿಟೇಷನ್ ಸ್ಪರ್ಧೆಯಲ್ಲಿ ಭಾಗವಹಿಸಿದ್ದ ಕುಂದಾಪುರ ತಾಲೂಕಿನ ಹೊಸಾಡು ಗ್ರಾಮದ ಕಂಚುಗೋಡು ನಿವಾಸಿ ಮಿಸ್ಟರ್ ಸೋಮಶೇಖರ್ ಖಾರ್ವಿ ಅವರು 65ಕೆಜಿ ವಿಭಾಗದಲ್ಲಿ ಪ್ರಥಮ ಸ್ಥಾನ ಪಡೆದಿದ್ದಾರೆ.

ಗುಜ್ಜಾಡಿ:ಇಂಗ್ಲಿಷ್ ವ್ಯಾಕರಣ ತರಬೇತಿ ಶಿಬಿರ ಉದ್ಘಾಟನೆ

ಕುಂದಾಪುರ:ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಗುಜ್ಜಾಡಿ ಹಳೆ ವಿದ್ಯಾರ್ಥಿ ಸಂಘದ ವತಿಯಿಂದ ಶಾಲೆಯ ವಿದ್ಯಾಥಿಗಳಿಗಾಗಿ ಆಯೋಜಿಸಿದ ಇಂಗ್ಲಿಷ್ ವ್ಯಾಕರಣ ತರಬೇತಿ ಶಿಬಿರಕ್ಕೆ ಬುಧವಾರ ಚಾಲನೆಯನ್ನು ನೀಡಲಾಯಿತು.ಹಳೆ ವಿದ್ಯಾರ್ಥಿ ಸಂಘದ ಅಧ್ಯಕ್ಷ ರಾಮನಾಥ ಚಿತ್ತಾಲ್ ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದರು.ಶಾಲೆಯ ಹಿರಿಯ ಹಳೆ ವಿದ್ಯಾರ್ಥಿಗಳಾದ ಸುಕ್ರ ಪೂಜಾರಿ ಹಾಗೂ ಮುತ್ತಯ್ಯ ಆಚಾರ್ಯ ಅವರು ಜಂಟಿಯಾಗಿ ಶಿಬಿರವನ್ನು ಉದ್ಘಾಟಿಸಿದರು.ಶಾಲೆ ಮುಖ್ಯೋಪಾಧ್ಯಾಯರಾದ ಗಂಗಾಧರ ಬಂಟ,ಎಸ್‍ಡಿಎಂಸಿ ಉಪಾದ್ಯಕ್ಷೆ ಗಾಯತ್ರಿ ಕೊಡಂಚ,ತರಬೇತುದಾರ ಸುರೇಶ ಕಾಮತ್,ಗ್ರಾ.ಪಂ ಸದಸ್ಯರಾದ ಹರೀಶ ಮೇಸ್ತ,ತುಂಗ ಪೂಜಾರಿ,ಸಂಘದ ಗೌರವಾಧ್ಯಕ್ಷ ಎಆರ್ ವಲಿಯುಲ್ಲ,ಕಾರ್ಯದರ್ಶಿ ರಾಗಘವೇಂದ್ರ […]

You cannot copy content of this page