ಹಕ್ಲಾಡಿ:ಗುರುಗಳನ್ನು ಗೌರವಿಸುವ ಮನೋಭಾವವನ್ನು ಬೆಳೆಸಿಕೊಳ್ಳಬೇಕು-ಸಾಹಿತಿ ಕೆ.ರಘುರಾಮ ಶೆಟ್ಟಿ
ಕುಂದಾಪುರ:ಹಕ್ಲಾಡಿ ಸರಕಾರಿ ಪ್ರೌಢಶಾಲೆಯ 1981-82 ರ ಬ್ಯಾಚ್‍ನ ಹಳೆ ವಿದ್ಯಾರ್ಥಿಗಳ ವತಿಯಿಂದ ಮಿತ್ರ ಸಂಗಮ ಹಾಗೂ ಗುರುವಂದನಾ ಕಾರ್ಯಕ್ರಮವನ್ನು ಹಕ್ಲಾಡಿ ಪ್ರೌಢಶಾಲೆಯಲ್ಲಿ ಶನಿವಾರ ಅದ್ದೂರಿಯಾಗಿ ನಡೆಯಿತು.ಸಾಹಿತಿ ಹಾಗೂ ಪ್ರಸಂಗಕರ್ತರಾದ ನಿವೃತ್ತ ಶಿಕ್ಷಕ ಕೆ.ರಘುರಾಮ ಶೆಟ್ಟಿ ಉದ್ಘಾಟಿಸಿ ಮಾತನಾಡಿ,ತಂದೆ ತಾಯಿಯನ್ನು ಗೌರವ ಭಾವನೆಯಿಂದ ನೋಡಿದಂತೆ ಗುರುಗಳನ್ನು ಸಹ ಗೌರವಿಸುವ ಮನೋಭಾವವನ್ನು ವಿದ್ಯಾರ್ಥಿಗಳು ಮೈಗೂಡಿಸಿಕೊಳ್ಳಬೇಕು.ಗುರುಗಳು ಹೇಳಿದಂತಹ ವಿಚಾರಗಳನ್ನು ನಿತ್ಯವೂ ಅನುಷ್ಠಾನ ಮಾಡುವುದರಿಂದ ಉತ್ತಮವಾದ ಅಂಕಗಳನ್ನು ಪಡೆಯಲು ಸಾಧ್ಯವಾಗುತ್ತದೆ ಎಂದು ಹೇಳಿದರು.ಒಂದೆ ಶಾಲೆಯಲ್ಲಿ ಒಟ್ಟಾಗಿ ಕಲಿಯುತ್ತಿದ್ದ ವಿದ್ಯಾರ್ಥಿಗಳು ಸರಿ ಸುಮಾರು 42 […]



























































































































































































































































































































































































































































































































































































































































































































































































































































































































































































































































































































































































































































































































































































































































































