ದೇವಾಡಿಗರ ಸಂಘ ಉಪ್ಪುಂದ ಅಧ್ಯಕ್ಷರಾಗಿ ರವೀಂದ್ರ ಎಚ್ ದೇವಾಡಿಗ ಅವಿರೋಧ ಆಯ್ಕೆ

ಬೈಂದೂರು:ದೇವಾಡಿಗರ ಸಂಘ ಉಪ್ಪುಂದ ಅದರ ನೂತನ ಅಧ್ಯಕ್ಷರಾಗಿ ರವಿಂದ್ರ ಎಚ್ ದೇವಾಡಿಗ ಅವಿರೋಧವಾಗಿ ಆಯ್ಕೆಯಾಗಿದ್ದಾರೆ.ರವೀಂದ್ರ ಎಚ್ ದೇವಾಡಿಗ ಅವರು ಪ್ರಸ್ತುತ ಉಡುಪಿ ಜಿಲ್ಲಾ ವಿಶೇಷ ಶಿಕ್ಷಕರ ಸಂಘದ ಅಧ್ಯಕ್ಷರಾಗಿ,ನಾಯ್ಕನಕಟ್ಟೆ ಸಂವೇಧನಾ ಟ್ರಸ್ಟ್ ನಾ ಕಾರ್ಯದರ್ಶಿಯಾಗಿ,ಕರ್ನಾಟಕ ರಾಜ್ಯ ವಿಶೇಷ ಶಿಕ್ಷಕರ ಸಂಘದ ನಿರ್ದೇಶಕರಾಗಿ,ವಾಗ್ಜ್ಯೋತಿ ಶ್ರವಣ ದೋಷ ಮಕ್ಕಳ ವಸತಿ ಶಾಲೆ ಅಂಪಾರು ಮುಖ್ಯೋಪಾಧ್ಯಾಯರಾಗಿ ಸೇವೆ ಸಲ್ಲಿಸುತ್ತಿದ್ದಾರೆ.ಬೈಂದೂರು ತಾಲೂಕು ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾಗಿ ಸೇವೆಯನ್ನು ಸಲ್ಲಿಸಿದ್ದರು.

ಸಂಚಲನ ಹೊಸಾಡು ವತಿಯಿಂದ ಕ್ಷಯ ರೋಗಿಗಳಿಗೆ ಕಿಟ್ ಕೊಡುಗೆ

ಕುಂದಾಪುರ:ಹೊಸಾಡು ಗ್ರಾಮ ಪಂಚಾಯತ್ ಹಾಗೂ ಸಂಚಲನ ಹೊಸಾಡು,ಪ್ರಾಥಮಿಕ ಆರೋಗ್ಯ ಕೇಂದ್ರ ಮರವಂತೆ,ಕ್ಷೇಮ ಕೇಂದ್ರ ಹೊಸಾಡು ವತಿಯಿಂದ ಹೊಸಾಡು ಗ್ರಾಮ ಪಂಚಾಯತ್‍ನಲ್ಲಿ ಶನಿವಾರ ನಡೆದ ಕ್ಷಯ ರೋಗ ಮಾಹಿತಿ ಮತ್ತು ಕಿಟ್ ವಿತರಣೆ ಕಾರ್ಯಕ್ರಮದಲ್ಲಿ ಸಂಚಲನ ಹೊಸಾಡು ವತಿಯಿಂದ ಕ್ಷಯ ರೋಗಿಗಳಿಗೆ ಕಿಟ್‍ನ್ನು ಕೊಡುಗೆ ಆಗಿ ನೀಡಲಾಯಿತು.ಪಿಡಿಒ ಪಾರ್ವತಿ,ಸಂಚಲ ಹೊಸಾಡು ಸದಸ್ಯರಾದ ಪ್ರದೀಪ್ ಆಚಾರ್ಯ,ರಾಘವೇಂದ್ರ ಶೆಟ್ಟಿ,ಪ್ರದೀಪ್ ಬಿಲ್ಲವ,ಆಶಾ ಕಾರ್ಯಕರ್ತೆಯರಾದ ಪ್ರೇಮಾ,ಯಶೋಧ ಅರಾಟೆ,ಪಂಚಾಯತ್ ಸಿಬ್ಬಂದಿಗಳು ಉಪಸ್ಥಿತರಿದ್ದರು.ಸಮುದಾಯ ಆರೋಗ್ಯಾಧಿಕಾರಿ ಪ್ರವೀಣ್ ಕುಮಾರ್ ಸ್ವಾಗತಿಸಿ,ವಂದಿಸಿದರು.ಹೊಸಾಡು ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿರುವ ಕ್ಷಯ ರೋಗಳಿಗೆ ಸಂಚಲನ […]

ಮರವಂತೆ ಶ್ರೀರಾಮ ಮಂದಿರದಲ್ಲಿ ಕಳವಿಗೆ ವಿಫಲ ಯತ್ನ

ಕುಂದಾಪುರ:ಬೈಂದೂರು ತಾಲೂಕಿನ ಮರವಂತೆ ಶ್ರೀರಾಮ ಮಂದಿರದಲ್ಲಿ ಶುಕ್ರವಾರ ಬೆಳಗಿನ ಜಾವಾ ಕಳವಿಗೆ ಯತ್ನಿಸಿದ ಘಟನೆ ಸಿಸಿಟಿವಿಯಲ್ಲಿ ಸೆರೆಯಾಗಿದೆ.ಸೆ.3 ರಂದು ಶುಕ್ರವಾರ ಬೆಳಗಿನ ಜಾವಾ 1.40 ರ ಸುಮಾರಿಗೆ ರಾಷ್ಷ್ರೀಯ ಹೆದ್ದಾರಿ 66 ರಲ್ಲಿ ಬೈಕ್‍ನಲ್ಲಿ ಬಂದಿಳಿದ ಇಬ್ಬರು ಕಳ್ಳರು ಮರವಂತೆ ಶ್ರೀರಾಮ ಮಂದಿರದ ಪ್ರಾಂಗಣಕ್ಕೆ ನುಗ್ಗಿದ್ದಾರೆ.ಹೆಲ್ಮೆಟ್ ಧರಿಸಿದ ವ್ಯಕ್ತಿಯೊರ್ವ ದೇವಸ್ಥಾನದ ಮುಖ್ಯ ದ್ವಾರದ ಬೀಗವನ್ನು ಮುರಿದು ಕಳವಿಗೆ ಯತ್ನಿಸಿದ್ದಾನೆ.ಕಬ್ಬಿಣದ ಬಾಗಿಲನ್ನು ಮುರಿದು ಒಳನುಗ್ಗಲು ಅಸಾಧ್ಯವೇನಿಸಿದಾಗ ಕಳ್ಳರಿಬ್ಬರೂ ಬೈಕ್‍ನಲ್ಲಿ ಪರಾರಿಯಾಗಿದ್ದಾರೆ. ಮರವಂತೆ ಶ್ರೀರಾಮ ಮಂದಿರದಲ್ಲಿ ಕಳವಿಗೆ ಯತ್ನಿಸಿ ವಿಫಲರಾಗಿದ್ದ […]

You cannot copy content of this page