ಕೃಷಿಕ ಬಾಬು ಆಚಾರ್ಯಗೆ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ

ಕುಂದಾಪುರ:ಸಾವಯವ ಗೊಬ್ಬರವನ್ನು ಬಳಕೆಮಾಡಿಕೊಂಡು ಅಡಿಕೆ,ತೆಂಗು,ಕಾಳು ಮೆಣಸು,ಭತ್ತ ಹಾಗೂ ಬಾಳೆ ಬೆಳೆಯನ್ನು ಬೆಳೆಯುತ್ತಿರುವ ಬೈಂದೂರು ತಾಲೂಕಿನ ಹೇರೂರು ಗ್ರಾಮದ ಮಡ್ಲಗೇರಿ ನಿವಾಸಿ ಪ್ರಗತಿಪರ ಕೃಷಿಕರಾದ ಬಾಬು ಆಚಾರ್ಯ ಅವರಿಗೆ ಉಡುಪಿ ಜಿಲ್ಲಾ ರಾಜ್ಯೋತ್ಸವ ಪ್ರಶ್ತಸಿ ದೊರೆತ್ತಿದೆ.

ಆಲೂರು:ಆಶಾ ಕಾರ್ಯಕರ್ತೆಯರಿಗೆ ಸನ್ಮಾನ

ಕುಂದಾಪುರ:ಕಲ್ಪತರು ಕಲಾವಿದರು ಆಲೂರು ವತಿಯಿಂದ ಕನ್ನಡ ರಾಜ್ಯೋತ್ಸವ ಅಂಗವಾಗಿ ಆಲೂರು ಸರಸ್ವತಿ ಶಾಲೆಯಲ್ಲಿ ಬುಧವಾರ ನಡೆದ ಕನ್ನಡ ಕಲರವ ಕಾರ್ಯಕ್ರಮದಲ್ಲಿ ಆಲೂರು ಗ್ರಾಮ ಪಂಚಾಯತ್ ವ್ಯಾಪ್ತಿಯ ಆಶಾ ಕಾರ್ಯಕರ್ತೆಯರಾದ ಇಂದಿರಾ,ಗಿರಿಜಾ,ವೆಂಕಮ್ಮ,ಸುಧಾ,ಲಲಿತ ಆಚಾರಿ,ಲಲಿತ ಮೊಗವೀರ,ಸಂಗೀತಾ,ಗುಲಾಬಿ,ಶಾರದ,ಸುಜಾತ,ಸುಶೀಲ,ಶೀಲಾವತಿ,ಕಲ್ಪನಾ ಅವರನ್ನು ಸನ್ಮಾನಿಸಲಾಯಿತು.ಈ ಸಂದರ್ಭ ಅತಿಥಿಗಳು,ಸಂಘದ ಸದಸ್ಯರು ಉಪಸ್ಥಿತರಿದ್ದರು.

ಹೆಮ್ಮಾಡಿ:ಜನತಾ ಪದವಿ ಪೂರ್ವ ಕಾಲೇಜಿನಲ್ಲಿ ವಾರ್ಷಿಕ ಕ್ರೀಡಾಕೂಟ ಸಮಾರಂಭ,ಖೇಲೋ ಜನತಾ 2023 ಉದ್ಘಾಟನೆ

ಹೆಮ್ಮಾಡಿ:ಜನತಾ ಸ್ವತಂತ್ರ ಪದವಿಪೂರ್ವ ಕಾಲೇಜು ಹೆಮ್ಮಾಡಿಯಲ್ಲಿ ಖೇಲೋ ಜನತಾ ವಾರ್ಷಿಕ ಕ್ರೀಡಾಕೂಟ- 2023 ಕಾರ್ಯಕ್ರಮ ಗುರುವಾರ ಅದ್ದೂರಿಯಾಗಿ ನಡೆಯಿತು. ಕಾಲೇಜಿನ ಆಡಳಿತ ಮಂಡಳಿ ಅಧ್ಯಕ್ಷರಾದ ಪ್ರಿನ್ಸಿಪಾಲ್ ಗಣೇಶ್ ಮೊಗವೀರರವರು ಸಭಾ ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿ ಮಾತನಾಡಿ,ಕಾಲೇಜಿನ ಕ್ರೀಡಾ ಚಟುವಟಿಕೆಗಳ ಬಗ್ಗೆ ವಿವರಿಸಿದರು.ಉಪ್ಪುಂದ ಸರಕಾರಿ ಪದವಿಪೂರ್ವ ಕಾಲೇಜಿನ ಪ್ರೌಢಶಾಲಾ ವಿಭಾಗದ ದೈಹಿಕ ಶಿಕ್ಷಣ ಶಿಕ್ಷಕ ಮಂಜುನಾಥ್ ಶೆಟ್ಟಿ ಆವರು ಗೌರವ ರಕ್ಷೆಯನ್ನು ಸ್ವೀಕರಿಸಿ,ಕ್ರೀಡಾಜ್ಯೋತಿಯನ್ನು ಬೆಳಗಿಸಿ ಮಾತನಾಡಿ, ವಿದ್ಯಾರ್ಥಿ ಪ್ರತಿಭೆಗಳಿಗೆ ಕ್ರೀಡಾಕೂಟಗಳು ಅದ್ಭುತವಾದ ವೇದಿಕೆಯಾಗಿದೆ ಜನತಾ ಪದವಿಪೂರ್ವ ಕಾಲೇಜಿನ ಕ್ರೀಡಾ […]

You cannot copy content of this page