ರಾಜ್ಯ ಮಟ್ಟದ ಕುಣಿತ ಭಜನಾ ಸ್ಪರ್ಧೆ ಉದ್ಘಾಟನೆ

ಕುಂದಾಪುರ:ತಾಲೂಕಿನ ತ್ರಾಸಿ ಗ್ರಾಮದ ಮೊವಾಡಿ ಶ್ರೀಮಾಣಿಸಿದ್ಧಲಿಂಗೇಶ್ವರ ದೇವಸ್ಥಾನದ ಸುವರ್ಣಮಹೋತ್ಸ ಮತ್ತು ಮಹಾಶಿವರಾತ್ರಿ ಉತ್ಸವದ ಅಂಗವಾಗಿ ರಾಜ್ಯ ಮಟ್ಟದ ಕುಣಿತ ಭಜನಾ ಸ್ಪರ್ಧೆ ಕಾರ್ಯಕ್ರಮ ಗುರುವಾರ ನಡೆಯಿತು.ಭಾರಂಗಿ ಕೂಡ್ಲಿಮಠ ಮಹಾ ಸಂಸ್ಥಾನ ತಾಳಗುಪ್ಪ ಸಾಗರ ಪರಮ ಪೂಜ್ಯ ಶ್ರೀಸಿದ್ಧವೀರ ಮಹಾಸ್ವಾಮೀಜಿಗಳು ಉದ್ಘಾಟಿಸಿದರು.ಮಾಜಿ ಶಾಸಕ ಕೆ.ಗೋಪಾಲ ಪೂಜಾರಿ,ಶ್ರೀಮಾಣಿಸಿದ್ಧಲಿಂಗೇಶ್ವರ ದೇವಸ್ಥಾನದ ಗೌರವಾಧ್ಯಕ್ಷ ಅನಂತ ಮೊವಾಡಿ ಮತ್ತು ಅತಿಥಿಗಳು,ಗ್ರಾಮಸ್ಥರು ಉಪಸ್ಥಿತರಿದ್ದರು.

ಶ್ರೀಮಾಣಿಸಿದ್ಧಲಿಂಗೇಶ್ವರ ದೇವಸ್ಥಾನ ಮೊವಾಡಿ ಸುವರ್ಣ ಮಹೋತ್ಸವ,ಧಾರ್ಮಿಕ ಸಭಾ ಕಾರ್ಯಕ್ರಮ

ಕುಂದಾಪುರ:ತಾಲೂಕಿನ ತ್ರಾಸಿ ಗ್ರಾಮದ ಮೊವಾಡಿ ಶ್ರೀಮಾಣಿಸಿದ್ಧಲಿಂಗೇಶ್ವರ ದೇವಸ್ಥಾನದ ಸುವರ್ಣಮಹೋತ್ಸವ,ಮಹಾಶಿವರಾತ್ರಿ ಉತ್ಸವ,ರಾಜ್ಯ ಮಟ್ಟದ ಕುಣಿತ ಭಜನಾ ಸ್ಪರ್ಧೆ ಕಾರ್ಯಕ್ರಮ,ಅನ್ನಸಂತರ್ಪಣೆ ಕಾರ್ಯಕ್ರಮ ನಾನಾ ಧಾರ್ಮಿಕ ವಿಧಿವಿಧಾನಗಳೊಂದಿಗೆ ಗುರುವಾರ ಅದ್ದೂರಿಯಾಗಿ ನಡೆಯಿತು.ಭಾರಂಗಿ ಕೂಡ್ಲಿಮಠ ಮಹಾ ಸಂಸ್ಥಾನ ತಾಳಗುಪ್ಪ ಸಾಗರ ಪರಮ ಪೂಜ್ಯ ಶ್ರೀ ಸಿದ್ಧವೀರ ಮಹಾಸ್ವಾಮೀಜಿ ಅವರನ್ನು ಭವ್ಯ ಮೆರವಣಿಗೆ ಮೂಲಕ ಬರಮಾಡಿಕೊಳ್ಳಲಾಯಿತು. ಪರಮ ಪೂಜ್ಯ ಶ್ರೀ ಸಿದ್ಧವೀರ ಮಹಾಸ್ವಾಮೀಜಿ ಅವರು ರಾಜ್ಯ ಮಟ್ಟದ ಕುಣಿತ ಭಜನಾ ಸ್ಪರ್ಧೆಯನ್ನು ಉದ್ಘಾಟಿಸಿ,ಆಶೀರ್ವಚನ ನೀಡಿ ಮಾತನಾಡಿ,ದುಡಿಮೆಯಿಂದ ಬೇಕಾದಷ್ಟು ಹಣವನ್ನು ಸಂಪಾದಿಸಬಹುದು ಆದರೆ ಜೀವನದಲ್ಲಿ ನೆಮ್ಮದಿಯನ್ನು […]

ಬಾವಿಗೆ ಬಿದ್ದ ಜಿಂಕೆಮರಿ ರಕ್ಷಣೆ

ಕುಂದಾಪುರ:ಜಪ್ತಿ ಗ್ರಾಮದ ಪ್ರಭಾಕರ ಶೆಟ್ಟಿಗಾರ್ ಅವರ ಮನೆಯ ಬಾವಿಗೆ ಆಕಸ್ಮಿಕ ವಾಗಿ ಬಿದ್ದ ಜಿಂಕೆಮರಿ ಯನ್ನು ಅಗ್ನಿಶಾಮಕ ಸಿಬ್ಬಂದಿಗಳು ರಕ್ಷಣೆ ಮಾಡಿದ್ದಾರೆ.ಬಾವಿಗೆ ಬಿದ್ದಿದ ಜಿಂಕೆಮರಿಯನ್ನು,ರಕ್ಷಿಸುವಂತೆ ಸ್ಥಳೀಯರು ಅಗ್ನಿಶಾಮಕ ಠಾಣೆಯನ್ನು ಸಂಪರ್ಕಿಸಿದ್ದರು.ಕೂಡಲೆ ಕಾರ್ಯಪ್ರವೃತ್ತರಾದ ಅಗ್ನಿಶಾಮಕ ಠಾಣಾಧಿಕಾರಿ ವಿ.ಸುಂದರ್ ಅವರ ಮಾರ್ಗದರ್ಶನದಲ್ಲಿ ಸಿಬ್ಬಂದಿ ದಿನೇಶ್ ಹಗ್ಗದ ಸಹಾಯದಿಂದ ಬಾವಿಗೆ ಇಳಿದು ಸುರಕ್ಷಿತವಾಗಿ ಮೇಲಕ್ಕೆ ತಂದಿದ್ದಾರೆ. ಅಗ್ನಿಶಾಮಕ ದಳದ ಪ್ರದೀಪ್ ಜಿ.ನಾಯಕ್, ನವೀನ್‌ಕುಮಾರ್, ರಾಘವೇಂದ್ರ ಬೋವಿ, ಧನುಷ್ ಗೌಡ, ಅಗ್ನಿಶಾಮಕ ಚಾಲಕ ಮುಸ್ತಾಫ ಕಾರ್ಯಾಚರಣೆಯಲ್ಲಿ ಪಾಲ್ಗೊಂಡಿದ್ದರು.

You cannot copy content of this page