ಆಲೂರು ಶಾಲೆ ವಿದ್ಯಾರ್ಥಿಗಳು,ರಾಷ್ಟ್ರ ಮಟ್ಟಕ್ಕೆ ಆಯ್ಕೆ

ಕುಂದಾಪುರ:ಶಾಲಾ ಶಿಕ್ಷಣ ಇಲಾಖೆ ಸಹಕಾರದೊಂದಿಗೆ ಎಚ್‍ಸಿಎಲ್ ಫೌಂಡೇಶನ್ ವತಿಯಿಂದ ತುಮಕೂರಿನಲ್ಲಿ ನಡೆದ ರಾಜ್ಯ ಮಟ್ಟದ ಕ್ರೀಡಾಕೂಟದಲ್ಲಿ ಬೈಂದೂರು ವಲಯದ ಸರಕಾರಿ ಹಿರಿಯ ಪ್ರಾಥಮಿಕ ಆಲೂರು ಶಾಲೆ ವಿದ್ಯಾರ್ಥಿಗಳಾದ ನಿತೇಶ್.ಜೆ ಮತ್ತು ನಿಧಿಶ್ರೀ ಅವರು ಟ್ರಯಥ್ಲಾನ್ (60.ಮೀ ಓಟ,ಉದ್ದ ಜಿಗಿತ,ಬಾಲ್ ಥ್ರೋ) ವಿಭಾಗದಲ್ಲಿ ರಾಷ್ಟ್ರಮಟ್ಟಕ್ಕೆ ಆಯ್ಕೆಯಾಗಿದ್ದಾರೆ.600.ಮೀ ಓಟದಲ್ಲಿ ಪ್ರಣಮ್ ತೃತೀಯ ಸ್ಥಾನವನ್ನು ಪಡೆದುಕೊಂಡಿದ್ದಾರೆ.

ತ್ರಾಸಿ:ಮಕ್ಕಳ ವಿಶೇಷ ಗ್ರಾಮಸಭೆ,ಮಕ್ಕಳ ಹಬ್ಬ ಕಾರ್ಯಕ್ರಮ

ಕುಂದಾಪುರ:ಮಕ್ಕಳ ಸರ್ವತೋಮುಖ ಅಭಿವೃದ್ಧಿಗೆ ಗ್ರಾಮ ಪಂಚಾಯಿತಿ ಕಡೆಯಿಂದ ಎಲ್ಲಾ ರೀತಿಯ ಸಹಕಾರವನ್ನು  ನೀಡಲಾಗುವುದು ಎಂದು ತ್ರಾಸಿ ಗ್ರಾಮ ಪಂಚಾಯತ್ ಅಧ್ಯಕ್ಷ ಮಿಥುನ್ ದೇವಾಡಿಗ ಹೇಳಿದರು.ಕರ್ನಾಟಕ ಸರಕಾರ,ಜಿಲ್ಲಾ ಪಂಚಾಯತ್ ಉಡುಪಿ,ತಾಲೂಕು ಪಂಚಾಯತ್ ಕುಂದಾಪುರ,ಗ್ರಾಮ ಪಂಚಾಯತ್ ತ್ರಾಸಿ ವತಿಯಿಂದ ತ್ರಾಸಿ ಬೀಚ್ ಗಾರ್ಡನ್‍ನಲ್ಲಿ ಶುಕ್ರವಾರ ನಡೆದ ಮಕ್ಕಳ ವಿಶೇಷ ಗ್ರಾಮಸಭೆ,ಮಕ್ಕಳ ಹಬ್ಬ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.ಮಕ್ಕಳ ವಿಶೇಷ ಗ್ರಾಮಸಭೆಯನ್ನು ನಡೆಸಲು ತ್ರಾಸಿ ಗ್ರಾಮ ಪಂಚಾಯತ್‍ನ್ನು ಆಯ್ಕೆ ಮಾಡಿರುವುದಕ್ಕೆ ಪಂಚಾಯತ್ ರಾಜ್ ಮತ್ತು ಗ್ರಾಮೀಣಾಭಿವೃದ್ಧಿ ಇಲಾಖೆಗೆ ವಂದನೆಯನ್ನು ಸಲ್ಲಿಸಿದರು. ತ್ರಾಸಿ […]

ಕೈ ತೋಳಿಗೆ ಕಪ್ಪು ಪಟ್ಟಿ ಧರಿಸಿ ಪ್ರತಿಭಟನೆ

ಕುಂದಾಪುರ:ಇಲಾಖೆಯಿಂದ ಹೊರಡಿಸುತ್ತಿರುವ ಸುತ್ತೋಲೆಗಳಿಂದ ಪಂಚಾಯತ್ ನೌಕರರಿಗೆ ಆಗುತ್ತಿರುವ ಸಮಸ್ಯೆಗಳ ಕುರಿತು ಸಿ ಮತ್ತು ಡಿ ದರ್ಜೆ ಶ್ರೇಣಿ ಕುರಿತು ಜಿಲ್ಲಾ ಪಂಚಾಯತ್ ಅನುಮೋದನೆ ಸಮಸ್ಯೆ,ಮುಂಬಡ್ತಿ ವಿಚಾರ,ಹಲವಾರು ಸಮಸ್ಯೆಗಳ ಹಕ್ಕೋತ್ತಾಯದ ಕುರಿತು ಕರ್ನಾಟಕ ರಾಜ್ಯ ಗ್ರಾಮ ಪಂಚಾಯತ್ ನೌಕರರ ಶ್ರೇಯೋಭಿವೃದ್ಧಿ ಸಂಘದ ವತಿಯಿಂದ ಕೈಗೊಳ್ಳಲಾಗುತ್ತಿರುವ ಪ್ರತಿಭಟನೆ ಅಂಗವಾಗಿ ಬೈಂದೂರು ತಾಲೂಕಿನ ಮರವಂತೆ ಗ್ರಾಮ ಪಂಚಾಯತ್ ಸಿಬ್ಬಂದಿಗಳು ಮತ್ತು ಕುಂದಾಪುರ ತಾಲೂಕಿನ ತ್ರಾಸಿ ಗ್ರಾಮ ಪಂಚಾಯತ್ ಸಿಬ್ಬಂದಿಗಳು ಕೈ ತೋಳಿಗೆ ಕಪ್ಪÅ ಪಟ್ಟಿ ಧರಿಸಿ ಶೋಷಣೆ ಮುಕ್ತ ಬದುಕಿಗಾಗಿ ಎನ್ನುವ […]

You cannot copy content of this page