ಸರಕಾರಿ ಹಿರಿಯ ಪ್ರಾಥಮಿಕ ಹಕ್ಲಾಡಿ ಶಾಲೆಯಲ್ಲಿ 78ನೇ ಸ್ವಾತಂತ್ರ್ಯ ದಿನಾಚರಣೆ

ಕುಂದಾಪುರ:ಸರಕಾರಿ ಹಿರಿಯ ಪ್ರಾಥಮಿಕ ಹಕ್ಲಾಡಿ ಶಾಲೆಯಲ್ಲಿ 78ನೇ ಸ್ವಾತಂತ್ರ್ಯ ದಿನಾಚರಣೆಯನ್ನು ಸಂಭ್ರಮದಿಂದ ಆಚರಿಸಲಾಯಿತು.ಶಾಲಾ ಎಸ್ ಡಿಎಂಸಿಅಧ್ಯಕ್ಷ ಅಶ್ರಫ್ ಧ್ವಜಾರೋಹಣ ನೆರವೇರಿಸಿದರು.ಈ ಸಂದರ್ಭದಲ್ಲಿ ಗ್ರಾಮ ಪಂಚಾಯತ್ ಅಧ್ಯಕ್ಷೆ ಪ್ರೇಮಾ ದೇವಾಡಿಗ,ಉಪಾಧ್ಯಕ್ಷ ಸುಭಾಸ್ ಶೆಟ್ಟಿ ಹೊಳ್ಮಗೆ,ಗ್ರಾ. ಪಂ.ಸದಸ್ಯರು, ಎಸ್ ಡಿಎಂಸಿ ಸರ್ವಸದಸ್ಯರು,ಗಣಪಯ್ಯ ಶೆಟ್ಟಿ,ಹಳೆ ವಿದ್ಯಾರ್ಥಿ ಸಂಘದ ಅಧ್ಯಕ್ಷ ಲೋಹಿಶ್ ಹೊಳ್ಮಗೆ,ಲಯನ್ಸ್ ಕ್ಲಬ್ ಹಕ್ಲಾಡಿ ಸದಸ್ಯರು,ನಿವೃತ್ತ ಮುಖ್ಯ್ಯೊಪಾಧ್ಯಾಯರು, ಅಧ್ಯಾಪಕರು,ವಿದ್ಯಾಭಿಮಾನಿಗಳು, ಪೋಷಕರು ಉಪಸ್ಥಿತರಿದ್ದರು. ಮುಖ್ಯ ಶಿಕ್ಷಕಿ ಗೀತಾ ಬಿ ಸ್ವಾಗತಿಸಿ,ಪ್ರಾಸ್ತವಿಕ ಮಾತುಗಳನ್ನಾಡಿದರು. ಶಿಕ್ಷಕ ಅಭಿಲಾಷ್ ಕಾರ್ಯಕ್ರಮ ನಿರೂಪಿಸಿದರು. ಶಿಕ್ಷಕ ಶಿವರಾಜ್ ವಂದಿಸಿದರು. ಶಿಕ್ಷಕಿಯರಾದ […]

ಶ್ರೀ ಗಣೇಶ್ ಕ್ರೆಡಿಟ್ ಕೋ- ಆಪರೇಟಿವ್ ಸೊಸೈಟಿ:78ನೇ ಸ್ವಾತಂತ್ರ್ಯ ದಿನಾಚರಣೆ

ಕುಂದಾಪುರ:ಶ್ರೀ ಗಣೇಶ ಕ್ರೆಡಿಟ್ ಕೋ ಆಪರೇಟಿವ್ ಸೊಸೈಟಿ ಹೊಸಾಡು ಮುಳ್ಳಿಕಟ್ಟೆ ವತಿಯಿಂದ 78ನೇ ಸ್ವಾತಂತ್ರ್ಯ ದಿನಾಚರಣೆಯನ್ನು ಆಚರಿಸಲಾಯಿತು.ಸಲಹೆಗಾರ ವಿಶ್ವಂಭರ ಐತಾಳ್ ಧ್ವಜಾರೋಹಣವನ್ನು ನೆರವೇರಿಸಿದರು.ಈ ಸಂದರ್ಭದಲ್ಲಿ ಸಲಹೆಗಾರರಾದ ಡಿ.ಎಂ ಕಾರಂತ ಮತ್ತು ನಿರ್ದೇಶಕ ರಾಘವೇಂದ್ರ ಶೆಟ್ಟಿ,ನಿವೃತ್ತ ಬ್ಯಾಂಕ್ ಉದ್ಯೋಗಿ ಜಿ.ಬಿ ಗಣಪಯ್ಯ ಆಚಾರ್ಯ ಉಪಸ್ಥಿತರಿದ್ದರು.ಸಿಇಒ ಅಶ್ವಿನಿ ಸ್ವಾಗತಿಸಿದರು.ಲೆಕ್ಕಿಗ ಶ್ರೀಕರ ಐತಾಳ್ ವಂದಿಸಿದರು.

ಹೆಮ್ಮಾಡಿ ದೇವಸ್ಥಾನದಲ್ಲಿ ಕದ್ದ ಹಣ ಶಾಲೆ ಜಗುಲಿಯಲ್ಲಿ ಪತ್ತೆ

ಕುಂದಾಪುರ:ತಾಲೂಕಿನ ಹೆಮ್ಮಾಡಿ ಶ್ರೀ ಲಕ್ಷ್ಮೀನಾರಾಯಣ ದೇವಸ್ಥಾನದಲ್ಲಿ ಶುಕ್ರವಾರ ಮಧ್ಯರಾತ್ರಿ ಕಳವು ಗೈದಿರುವ ಹುಂಡಿ ಹಣವನ್ನು ದೇವಸ್ಥಾನದ ಸಮೀಪದಲ್ಲಿರುವ ಹೆಮ್ಮಾಡಿ ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಜಗುಲಿಯಲ್ಲಿ ಕಳ್ಳ ಬಿಟ್ಟು ಹೋಗಿರುವ ಘಟನೆ ಸೋಮವಾರ ಬೆಳಕಿಗೆ ಬಂದಿದೆ.ಹೆಮ್ಮಾಡಿ ಪ್ರಾಥಮಿಕ ಶಾಲೆ ಜಗುಲಿ ಮೇಲೆ ಹಸಿರು ಚೀಲ ಇರುವುದದನ್ನು ಶನಿವಾರ ಗಮನಿಸಿರುವ ಶಾಲೆ ಶಿಕ್ಷಕರು ಅಷ್ಟೇನು ಗಂಭೀರವಾಗಿ ಪರಿಗಣಿಸಿರಲಿಲ್ಲ.ಭಾನುವಾರ ಶಾಲೆಗೆ ರಜೆ ಇದ್ದಿದ್ದು.ಸೋಮವಾರ ಅದೇ ಸ್ಥಳದಲ್ಲಿದ್ದ ಚೀಲವನ್ನು ಗಮನಿಸಿದ ವಿದ್ಯಾರ್ಥಿಗಳು ಬೀಡಿಸಿ ನೋಡಿದಾಗ ಹಣ ಇರುವುದು ಬೆಳಕಿಗೆ ಬಂದಿದೆ.ಕೂಡಲೆ ದೇವಸ್ಥಾನದ […]

You cannot copy content of this page