ಆಗಸ್ಟ್.31 ರಂದು ಬೈಂದೂರಿನಲ್ಲಿ ಬೃಹತ್ ಅಂತಾರಾಷ್ಟ್ರೀಯ ಉದ್ಯೋಗ ಮೇಳ ಆಯೋಜನೆ
ಕುಂದಾಪುರ:ಸಮೃದ್ಧ ಬೈಂದೂರು ವತಿಯಿಂದ ಕೇಂದ್ರ ಸರ್ಕಾರದ ಅಂಗ ಸಂಸ್ಥೆಯಾದ ರಾಷ್ಟ್ರೀಯ ಕೌಶಲ್ಯಾಭಿವೃದ್ಧಿ ನಿಗಮ(ಅಂತಾರಾಷ್ಟ್ರೀಯ) ಹಾಗೂ ಅಜಿನುರಹಾ ಸಂಸ್ಥೆಯ ಸಹಭಾಗಿತ್ವದಲ್ಲಿ ಆಗಸ್ಟ್ 31ರಂದು ಬೈಂದೂರಿನ ಜೆ.ಎನ್.ಆರ್. ಅಡಿಟೋರಿಯಂನಲ್ಲಿ ಅಂತಾರಾಷ್ಟ್ರೀಯ ಉದ್ಯೋಗ ಮೇಳ ನಡೆಯಲಿದೆ.ವಿದೇಶದಲ್ಲಿ ಉದ್ಯೋಗ ಬಯಸುವವರಿಗೆ ಸುವರ್ಣಾವಕಾಶವನ್ನು ಕಲ್ಪಿಸಲಾಗಿದ್ದು.ಉಚಿತ ತರಬೇತಿ,ಉಚಿತ ವಸತಿ ವ್ಯವಸ್ಥೆ,ಊಟ,ಉಪಹಾರದ ಜತೆಗೆ ವೀಸಾ ಹಾಗೂ ವಿಮಾನ ಟಿಕೆಟ್ ಕೂಡ ಆಯ್ಕೆಯಾದ ಅಭ್ಯರ್ಥಿಗಳಿಗೆ ಉಚಿತವಾಗಿ ಸಿಗಲಿದೆ.ವಿದೇಶಿ ಭಾಷೆ ಕಲಿತು, ವಿದೇಶದಲ್ಲಿ ಉದ್ಯೋಗ ಮಾಡಬಹುದು. ಇಂತಹದ್ದೊಂದು ಅವಕಾಶ ಬೈಂದೂರಿಗೆ ಇದೇ ಮೊದಲ ಬಾರಿಗೆ ದೊರಕಲಿದ್ದು ಯುವಕ ಯುವತಿಯರು ಹೆಚ್ಚಿನ […]